Crime News

ರಸ್ತೆ ಅಪಘಾತ

ದಿನಾಂಕ 10/01/2020 ರಂದು ಸಿದ್ದಾಪುರ ಬಳಿಯ ತ್ಯಾಗತ್ತೂರು ಗ್ರಾಮದ ರಫೀಖ್ ಎಂಬವರು ಅವರ ಆಟೋ ರಿಕ್ಷಾದಲ್ಲಿ ಕುಶಾಲನಗರ ಕಡೆಯಿಂದ ಬರುತ್ತಿರುವಾಗ ಎದುರುಗಡೆಯಿಂದ ಕೆಎ-51-ಡಿ-0943 ರ ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಫೀಕ್‌ರವರ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ರಫೀಕ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಿದ್ದು ವ್ಯಕ್ತಿ ಸಾವು

ದಿನಾಂಕ 10/01/2020ರಂದು ಹಾಸನ ಜಿಲ್ಲೆಯ ಮೊಹಮದ್ ಅಲಿ ಎಂಬವರ ಮಗ ತಬ್ರೇಜ್‌ ಅಹಮದ್ ಎಂಬವರು ಆದಿಲ್‌ ಪಾಷಾ ಎಂಬವರೊಡನೆ ನೆಲಜಿ ಗ್ರಾಮದ ಕಿಶೋರ್‌ ತಮ್ಮಯ್ಯ ಎಂಬವರ ಮನೆಯಲ್ಲಿ ಕಾಫಿ ಕ್ಯೂರಿಂಗ್‌ ವರ್ಕ್ಸ್ ನ ವೆಲ್ಡಿಂಗ್ ಕೆಲಸ ಮಾಡುತ್ತಿರುವಾಗ ಮೇಲ್ಬಾಗದಿಂದ ಕೆಳಗೆ ಬಿದ್ದು ಮೃತರಾಗಿದ್ದು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಆದಿಲ್‌ರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಕಿಶೋರ್‌ ತಮ್ಮಯ್ಯ ಹಾಗೂ ಆದಿಲ್‌ ಪಾಷಾರವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 10/01/2020ರಂದು ಮಡಿಕೇರಿ ಸಮೀಪದ ಹೆರವನಾಡು ಗ್ರಾಮದ ನಿವಾಸಿ ಕೆ.ಎಂ.ಪೊನ್ನಪ್ಪ ಎಂಬವರು ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಪೊನ್ನಪ್ಪರವರು ಮಾನಸಿಕ ರೋಗಿಯಾಗಿದ್ದು ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ಮಡಿಕೇರಿಯ ಚಾಮುಂಡೇಶ್ವರಿ ನಗರದ ನಿವಾಸಿ ಸುಶೀಲ ಎಂಬವರು ನಗರದ ರಾಜಾಸೀಟಿನ ಬಳಿ ಆಟಿಕೆ ಸಾಮಾನುಗಳ ವ್ಯಾಪಾರ ಮಾಡಿಕೊಂಡಿದ್ದು 2019ನೇ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಅವರಿಗೆ ಪರಿಚಯವಿರುವ ಕುಶಾಲನಗರ ಬಳಿಯ ಹೆಬ್ಬಾಲೆ ಗ್ರಾಮದ ನಿವಾಸಿ ಜ್ಯೋತಿ ಎಂಬವರು ಬೆಂಗಳೂರಿನ ಆರ್‌,ಎಸ್.ಬಾಬು ಮತ್ತು ಅವರ ಪತ್ನಿ ಪತ್ನಿ ಅನ್ನಪೂರ್ಣ ಎಂಬವರನ್ನು ಪರಿಚಿಯಿಸಿ ಬಾಬುರವರು ಬೀದಿ ಬದಿ ವ್ಯಾಪಾರಿಗಳಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ಮಾಡಿಕೊಡುವುದಾಗಿ ನಂಬಿಸಿ ಸುಶೀಲ ಹಾಗೂ ಬಿ.ಬಿ.ಫಾತಿಮಾ ಎಂಬವರಿಂದ ಸುಮಾರು ರೂ. 37,000/- ವೆಚ್ಚದಲ್ಲಿ ನಗರದ ಕಮ್ಯುನಿಟಿ ಹಾಲಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಸಭೆಯನ್ನು ನಡೆಸಿ ನಂತರ ಸುಮಾರು 8 ಜನ ಮಹಿಳೆಯರಿಂದ ರೂ.1,28,000/- ಹಣವನ್ನು ಪಡೆದು ನಂತರ ಯಾವುದೇ ಸಾಲ ಸೌಲಭ್ಯ ಮಾಡಿಕೊಡದೆ ಮತ್ತು ಹಣವನ್ನು ಸಹ ಹಿಂದಿರುಗಿಸದೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ ಪ್ರಕರಣ

ಮಡಿಕೇರಿ ನಗರದ ರಿಮಾಂಡ್‌ ಹೋಂ ಬಳಿಯ ನಿವಾಸಿ ರಿಶಾದ್ ಎಂಬವರು ನಗರದ ಮೆಡ್‌ಪ್ಲಸ್ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 10/01/2020ರಂದು ಬೆಳಿಗ್ಗೆ ಬಸ್‌ಗೆ ಮೆಡಿಕಲ್ ಪಾರ್ಸಲ್ ಹಾಕಿ ಬರುವುದಾಗಿ ಹೇಳಿ ಹೋದವರು ಮರಳಿ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 10/01/2020ರಂದು ಶನಿವಾರಸಂತೆ ಬಳಿಯ ಸೀಗೆಮರೂರು ಗ್ರಾಮದ ನಿವಾಸಿ ನಾಗರಾಜು ಎಂಬವರು ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತ ನಾಗರಾಜುರವರು ತಮ್ಮ ಪತ್ನಿಯೊಡನೆ ಜಂಟಿಯಾಗಿ ಧರ್ಮಸ್ಥಳ ಸಂಘ, ಎಸ್‌ಕೆಎಸ್ ಸಂಘ ಮತ್ತು ವಿಎಸ್ಎಸ್‌ಎನ್‌ಗಳಲ್ಲಿ ಸಾಲ ಮಾಡಿಕೊಂಡಿದ್ದು ಹಾಗೂ ಹೃದಯ ಸಂಬಂಧಿ ತೊಂದರೆ ಇರುವ ಕಾರಣ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ ಪ್ರಕರಣ

ಸೋಮವಾರಪೇಟೆ ಬಳಿಯ ಕಾಗಡಿಕಟ್ಟೆ ಗ್ರಾಮದ ಅಯ್ಯಪ್ಪ ಕಾಲೊನಿ ನಿವಾಸಿ  ರಾಜೇಶ್‌ ಎಂಬವರು ದಿನಾಂಕ 09/01/2020ರಂದು ಮನೆಯಿಂದ ಎಲ್ಲಿಗೋ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 08/01/2020ರಂದು ಕುಶಾಲನಗರ ಬಳಿಯ ನಂಜರಾಯಪಟ್ಟಣ ಗ್ರಾಮದ ಬಳಿ ಹೋಗುತ್ತಿದ್ದ ಚಿಕ್ಕಬೆಟ್ಟಗೇರಿ ಗ್ರಾಮದ ನಿವಾಸಿ ಲೋಕೇಶ್‌ ಎಂಬವರಿಗೆ ಚಿಕ್ಕಬೆಟ್ಟಗೇರಿ ಗ್ರಾಮದ ನಿವಾಸಿ ಪ್ರಸಾದ್‌ ಎಂಬವರು ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ಜಗಳವಾಡಿ ಕೈಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಸಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.