Crime News

ವ್ಯಕ್ತಿ ಆತ್ಮಹತ್ಯೆ

            ದಿನಾಂಕ: 10-01-2020 ರಂದು ಮಡಿಕೇರಿ ತಾಲ್ಲೂಕು ಎಳ್ಳುಕೊಚ್ಚಿ, ಕರಿಕೆ ಗ್ರಾಮದ ನಿವಾಸಿ ಶಶಿಧರ ಎಂಬುವವರು ಯಾವುದೋ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಮಗ ಶ್ಯಾಮ್ ಪ್ರಕಾಶ್ ರವರು ನೀಡಿದ ದೂರಿನ ಮೇರೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ, ಬೈಕ್ ಸವಾರರು ಸಾವು

            ದಿನಾಂಕ: 11-01-2020 ರಂದು ಮಡಿಕೇರಿ ತಾಲ್ಲೂಕು ಕೊಯಿನಾಡು ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-19-ಎಫ್- 3341 ರ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಪ್ರದೀಪ್ ರಾಥೋಡ್ ಎಂಬುವವರು ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಡಬ್ಲ್ಯೂಬಿ-38-ಎಕೆ-1196 ರ ಪಲ್ಸರ್ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ನಲ್ಲಿದ್ದ ನವೀನ್ ಕುಮಾರ್ ಮತ್ತು ಅರುಣ್ ಕುಮಾರ್ ಗಂಟಿ ಎಂಬುವವರು ತೀವ್ರವಾಗ ಗಾಯಗೊಂಡು ಮೃತಪಟ್ಟಿದ್ದು ಈ ಬಗ್ಗೆ ಸತ್ಯ ರಂಜನ್ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.