News

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ:

            ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ದಿನಾಂಕ: 11-01-2020 ರಿಂದ 17-01-2020 ರ ವರೆಗೆ “ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ” ಕಾರ್ಯಕ್ರಮ ಆಚರಿಸಲಾಗುತ್ತಿದೆ.

31 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ ವಾಹನ ಚಾಲಕರಿಗೆ ಸಂಚಾರ ನಿಯಮ ಪಾಲನೆ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕುಶಾಲನಗರ,  ಕುಟ್ಟ, ಶ್ರೀಮಂಗಲ, ಮೂರ್ನಾಡು, ವಿರಾಜಪೇಟೆ ಸೇರಿದಂತೆ ಜಿಲ್ಲೆಯ ವಿವಿದೆಡೆ ರಸ್ತೆ ಸಂಚಾರ ನಿಯಮ ಪಾಲಿಸದ ಚಾಲಕರಿಗೆ ಗುಲಾಬಿ ಹೂ ನೀಡಿ, ವಿವಿಧ ರೀತಿಯ ಕಾರ್ಯಕ್ರಮಗಳೊಂದಿಗೆ “ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ” ಆಚರಿಸುವ ಮೂಲಕ ವಾಹನ ಚಾಲಕರಿಗೆ, ಸಾರ್ವಜನಿಕರಿಗೆ , ವಿದ್ಯಾರ್ಥಿಗಳಿಗೆ  ರಸ್ತೆ ಸಂಚಾರ ನಿಯಮ ಪಾಲನೆ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

            ಕುಶಾಲನಗರ ಪಟ್ಟಣದಲ್ಲಿ ಹೆಲ್ಮಟ್ ಧರಿಸದೆ ಮತ್ತು ಸೀಟ್ ಬೆಲ್ಟ್ ಹಾಕದೇ ವಾಹನ ಚಾಲನೆ ಮಾಡುತ್ತಿದ್ದ ಚಾಲಕರಿಗೆ ಯಮಪಾಶದೊಂದಿಗೆ ಯಮಧರ್ಮ ಹಾಗೂ ಚಿತ್ರಗುಪ್ತ ವೇಷಧಾರಿಗಳ ದರ್ಶನ ಮಾಡಿಸಿ ಮತ್ತು ಸಂಚಾರ ನಿಯಮ ಪಾಲಿಸದ ಚಾಲಕರಿಗೆ ಗುಲಾಬಿ ಹೂ, ಚಾಕಲೇಟ್ ನೀಡುವುದರೊಂದಿಗೆ  ರಸ್ತೆ ಸಂಚಾರ ನಿಯಮ ಪಾಲನೆ ಮಾಡಲು ವಿನೂತನ ರೀತಿಯಲ್ಲಿ ಜನ ಜಾಗೃತಿ ಮೂಡಿಸಲಾಯಿತು. ಯಮಧರ್ಮ ವೇಷಧಾರಿಯಾಗಿ ನಿವೃತ್ತ ಎಎಸ್ಐ ಶ್ರೀ ಪಾರ್ಥ ಹಾಗೂ ಚಿತ್ರಗುಪ್ತ ವೇಷಧಾರಿಯಾಗಿ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಶ್ರೀ ಸಜಿ ರವರು ಜನಜಾಗೃತಿ ಮೂಡಿಸುವಲ್ಲಿ ವಿಶಿಷ್ಟ ಕರ್ತವ್ಯ ನಿರ್ವಹಿಸಿದರು.

Crime News

ಕಾರು ಡಿಕ್ಕಿ ಪಾದಚಾರಿಗೆ ಗಾಯ

            ದಿನಾಂಕ: 11-01-2020 ರಂದು ಮಡಿಕೇರಿ ತಾಲ್ಲೂಕು ಕೆ.ನಿಡುಗಣೆ ಗ್ರಾಮದ ಬಳಿ ಗಾಳಿಬೀಡು ರಸ್ತೆಯಲ್ಲಿ ಕೆಎ-11-ಬಿ-7085 ರ ಕಾರನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತಿದ್ದ ವಿದ್ಯಾನಗರ ನಿವಾಸಿ ಶ್ರೀಮತಿ ಗಂಗವ್ವ ಎಂಬುವವರಿಗೆ ಡಿಕ್ಕಿಪಡಿಸಿದ್ದರಿಂದ ಗಾಯಗೊಂಡಿದ್ದು ಈ ಬಗ್ಗೆ ಗಾಯಾಳವಿನ ಮಗ ಮಹೇಶ್ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಆತ್ಮಹತ್ಯೆ

            ದಿನಾಂಕ: 12-01-2020 ರಂದು ಮಡಿಕೇರಿ ತಾಲ್ಲೂಕು ಮರಗೋಡು ಗ್ರಾಮದ ನಿವಾಸಿ ರಾಮಯ್ಯ ಎಂಬುವವರು ಅನಾರೋಗ್ಯದ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಚಿಕಿತ್ಸೆ ಫಲಕಾರಿಯಾಗದೇ ರಾಮಯ್ಯ ರವರು ಮೃತಪಟ್ಟಿದ್ದು ಈ ಬಗ್ಗೆ ಮೃತರ ಮಗ ರಾಜಕುಮಾರ್ ರವರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ

            ದಿನಾಂಕ: 12-01-2020 ರಂದು ವಿರಾಜಪೇಟೆ ತಾಲ್ಲೂಕು ಅರವತ್ತೊಕ್ಲು ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಎಸ್-4586 ರ ಬೈಕನ್ನು ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಅತ್ತೂರು ಗ್ರಾಮದ ನಿವಾಸಿ ಅಯ್ಯಪ್ಪ ಎಂಬುವವರು ಚಾಲನೆ ಮಾಡಿಕೊಂಡು ಬರುತ್ತಿದ್ದ ಕೆಎ-12-ಎಸ್-0047 ರ ಸ್ಕೂಟರ್ ಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ನೊಂದಿಗೆ ಕೆಳಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಅಯ್ಯಪ್ಪ ರವರು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

            ದಿನಾಂಕ: 12-01-2019 ರಂದು ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಗ್ರಾಮದ ದುಂಡಳ್ಳಿ ರಸ್ತೆಯಲ್ಲಿ ಮಹಾಂತಪ್ಪ ಎಂಬುವವರು ಅವರ ಆಟೋರಿಕ್ಷಾವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ದಾರಿ ಕೊಡುವಾಗ ರಸ್ತೆ ಬದಿಗೆ ಮಗುಚಿ ಬಿದ್ದ ಪರಿಣಾಮ ಆಟೋದಲ್ಲಿದ್ದ ಮಂಜುನಾಥ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಗಾಯಾಳು ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.