Crime News

ವ್ಯಕ್ತಿ ಕಾಣೆ ಪ್ರಕರಣ

            ದಿನಾಂಕ: 12-01-2020 ರಂದು ಸೋಮವಾರಪೇಟೆ ತಾಲ್ಲೂಕು ಕಿರಿಕೊಡ್ಲಿ ಗ್ರಾಮದ ನಿವಾಸಿ ಅಬ್ದುಲ್ ಖಾದರ್ ಎಂಬುವವರು ಮನೆಯಿಂದ ಹೊರಗೆ ಹೋದವರು ಈ ವರೆಗೂ ವಾಪಾಸ್ಸು ಬಾರದೇ ಕಾಣೆಯಾಗಿದ್ದು ಈ ಬಗ್ಗೆ ಅಬ್ದುಲ್ ಖಾದರ್ ರವರ ಮಗ ಅಬ್ದುಲ್ ಸಲಾಂ ಎಂಬುವವರು ನೀಡಿದ ದೂರಿನ ಮೇರೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 13-01-2020 ರಂದು ಮಡಿಕೇರಿ ತಾಲ್ಲೂಕು ಭಾಗಮಂಡಲ ಗ್ರಾಮದ ಬಳಿ ತಲಕಾವೇರಿ ರಸ್ತೆಯಲ್ಲಿ ಕೆಎ-09-ಎನ್-2916 ರ ಬೈಕನ್ನು ಅದರ ಸವಾರ ಪ್ರದೀಪ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ವ್ಯಾನ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಪ್ರದೀಪ್ ಗಾಯಗೊಂಡಿದ್ದು ಈ ಬಗ್ಗೆ ಉದಯಕುಮಾರ್ ಎಂಬುವವರು ನೀಡಿದ ಪುಕಾರಿನ ಮೇರೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.