Crime News

ಕೆಸರಿನಲ್ಲಿ ಸಿಲುಕಿ ವ್ಯಕ್ತಿಯ ಸಾವು

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮೇಘತ್ತಾಳು ಮಕ್ಕಂದೂರು ಗ್ರಾಮದ ನಿವಾಸಿ ಅಂತೋಣಿ ಶ್ರೇಯಸ್‍ ಎಂಬವರ ಅಜ್ಜ ಅಂತೋಣಿ ಡಿ’ಸೋಜ ಎಂಬವರು ದಿನಾಂಕ 12-1-2020 ರಂದು ಮನೆಗೆ ನೀರು ತರಲು ಹೋಗಿ ಕೆಸರಿನಲ್ಲಿ ಸಿಲುಕಿ ಸಾವನಪ್ಪಿರುವ ಬಗ್ಗೆ ಅಂತೋಣಿ ಶ್ರೇಯಸ್‍ ನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಣದ ವಿಚಾರದಲ್ಲಿ ಜಗಳ, ಹಲ್ಲೆ

ದಿನಾಂಕ 13-1-2020 ರಂದು ಸೋಮವಾರಪೇಟೆ ತಾಲೋಕು ಬಾಚಳ್ಳಿ ಗ್ರಾಮದ ಡಿ.ಹೆಚ್‍. ರಾಘವೇಂದ್ರ ಎಂಬವರು ಸಗಣಿ ಗೊಬ್ಬರವನ್ನು ಇಳಿಸಲು ಬಾಚಳ್ಳಿ ಗ್ರಾಮದಕ್ಕೆ ಹೋದಾಗ ಅವರ ಅಣ್ಣ ಡಿ.ಹೆಚ್. ಹರೀಶ ಮತ್ತು ಅವರ ಪತ್ನಿ ಹಣದ ವಿಷಯದಲ್ಲಿ ಜಗಳ ಮಾಡಿ  ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್‍ ಸೈಕಲಿಗೆ ಶಾಲಾ ಬಸ್‍ ಡಿಕ್ಕಿ

ಕುಶಾಲನಗರದ ಮುಳ್ಳುಸೋಗೆ ಗ್ರಾಮದ ನಿವಾಸಿ ಶಿವರಾಜ ನಾಯಕ ಎಂಬವರ  ತಮ್ಮ ಲೋಕೇಶ ರವರು ಕೆಎ-12 ಆರ್-9736 ರ ಮೋಟರ್ ಸೈಕಲ್ ನಲ್ಲಿ ಜನತಾ ಕಾಲೋನಿಯಲ್ಲಿರುವ ಅವರ ಮನೆಗೆ ಹಾರಂಗಿ ರಸ್ತೆ ಕಡೆಯಿಂದ ಬರುತ್ತಿದ್ದಾಗ ಸಮಯ 16:20 ಗಂಟೆಗೆ ಕುಶಾಲನಗರ ಗೌಡ ಸಮಾಜದ ಕಡೆಯಿಂದ ಬಂದ ಭಾರತ್ ಮಾತಾ ಶಾಲೆಯ ಬಸ್ ನಂಬರ್ ಕೆಎ-45, 9676 ರ ಬಸ್ ಅನ್ನು ಅದರ ಚಾಲಕ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಬಿಡುವ ಸಲುವಾಗಿ ಏಕಾಏಕಿ ನಿರ್ಲಕ್ಷತನದಿಂದ ಎಡಕ್ಕೆ ತಿರುಗಿಸಿದ್ದು  ಬಸ್ ನ ಬಲಭಾಗದ ಹಿಂಭಾಗ ಲೋಕೇಶ ಚಾಲನೆ ಮಾಡುತ್ತಿದ್ದ ಮೋಟರ್ ಸೈಕಲ್ ಗೆ ಡಿಕ್ಕಿಯಾದ ಪರಿಣಾಮ ರಸ್ತೆ ಬದಿಯಲ್ಲಿ ಮೋಟರ್ ಸೈಕಲ್ ಸಮೇತ ಬಿದ್ದು ಲೋಕೇಶ್ ರವರ ಮುಖ ಮತ್ತು ತಲೆಯ ಭಾಗಕ್ಕೆ ರಕ್ತಗಾಯವಾಗಿದ್ದು ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಚಲಿಸುತ್ತಿದ್ದ ಆಟೋ ದಿಂದ ಬಿದ್ದು ಗಾಯ

ದಿನಾಂಕ 13-1-2020 ರಂದು ಶ್ರೀಮತಿ ರಾಣಿ ಎಂಬರು ತನ್ನ ಅತ್ತೆ ಮತ್ತು ಇಬ್ಬರು ಮಕ್ಕಳೊಂದಿಗೆ ಆಟೋ ರಿಕ್ಷಾದಲ್ಲಿ ಕೊಡ್ಲಿಪೇಟೆ ಕಡೆಗೆ ಹೋಗುತ್ತಿದ್ದಾಗ ಆಟೋ ರಿಕ್ಷಾ ಚಾಲಕನು ಒಮ್ಮೆಗೆ ಬ್ರೇಕ್‍ ಹಾಕಿದ ಪರಿಣಾಮ ಆಟೋ ರಿಕ್ಷಾದಿಂದ ಶ್ರೀಮತಿ ರಾಣಿ ಮತ್ತು ಅವರ ಅತ್ತೆ ಪುಟ್ಟಮ್ಮ ನವರು ಕೆಳಗೆ ಬಿದ್ದು ಗಾಯಗಳಾಗಿದ್ದು, ಈ ಸಂಬಂಧ ಕೆಎ-12-ಬಿ5172ರ ಆಟೋ ರಿಕ್ಷಾ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ ಶನಿವಾರಸಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ಯುವತಿ ಆತ್ಮಹತ್ಯೆ:

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಬ್ಯಾಡಗೊಟ್ಟ ಗ್ರಾಮದ  ಬಿ.ಕೆ.ಪೂರ್ಣಿಮಾ ಎಂಬವರ ಮಗಳಾದ ಹರಿಣಾಕ್ಷಿ ಎಂಬವರು ದಿನಾಂಕ 14-1-2020 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.