Crime News

ಹಲ್ಲೆ ಪ್ರಕರಣ

ದಿನಾಂಕ 17/01/2020ರಂದು ಕಡಗದಾಳು ಬಳಿಯ ಕ್ಲೋಸ್‌ಬರ್ನ್‌ ನಿವಾಸಿ ಕೆ.ಆರ್‌.ಕೃಷ್ಣ ಎಂಬವರ ಅಣ್ಣ ಸುರೇಶ್‌ ಎಂಬವರ ಮೇಲೆ ಮರಗೋಡು ನಿವಾಸಿಗಳಾದ ರಂಜಿತ್‌ ಮತ್ತು ಶಿವ ಎಂಬವರು ಕ್ರಿಕೆಟ್‌ ಬ್ಯಾಟಿನಿಂದ ಹಲ್ಲೆ ಮಾಡಿದ್ದು ಗಾಯಾಳು ಸುರೇಶ್‌ರವರ ಮಗ ಶ್ರೀಜಿತ್‌ರವರಿಗೆ ರಂಜಿತ್‌ ಹಾಗೂ ಶಿವರವರು ವಿನಾಕಾರಣ ಬೈದುದನ್ನು ಸುರೇಶ್‌ರವರು ವಿಚಾರಿಸಿದ್ದೇ ಅವರ ಮೇಲೆ ಹಲ್ಲೆ ಮಾಡಲು ಕಾರಣವೆಂದು ನೀಡಲಾದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 17/01/2020ರಂದು ಭಾಗಮಂಡಲ ಬಳಿಯ ಕೋಪಟ್ಟಿ ನಿವಾಸಿ ಕೆ.ಎಂ.ಲವ ಎಂಬವರಿಗೆ ಅದೇ ಗ್ರಾಮದ ನಿವಾಸಿ ಕುಡಿಯರ ಮೊಣ್ಣಪ್ಪ ಎಂಬವರು ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ಕಾಡು ಮರದ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 18/01/2020ರಂದು ಸುಂಟಿಕೊಪ್ಪದ ಉಲುಗುಲಿ ತೋಟದಲ್ಲಿ ವಾಸಿವಿರುವ ಮೂಲತಃ ಸೋಮವಾರಪೇಟೆ ಬಳಿಯ ಕೂತಿ ಗ್ರಾಮದ ವಳ್ಳಿ ಎಂಬವರ ಪತಿ ಮುತ್ತಯ್ಯ ಎಂಬವರು ಸೀಮೆಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿರುವುದೇ ಆತ್ಮಹತ್ಯೆಗೆ ಕಾರಣವೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 18/01/2020ರಂದು ಕೊಡ್ಲಿಪೇಟೆ ಬಳಿಯ ಬೆಸೂರು ನಿವಾಸಿ ಕುಮಾರ್‌ ಎಂಬವರಿಗೆ ಕೊಡ್ಲಿಪೇಟೆ ಬಳಿಯ ಅಗಳಿ ಗ್ರಾಮದ ನಿವಾಸಿ ಈರಣ್ಣಯ್ಯ ಎಂಬವರು ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ಧಾರೆ.

ರಸ್ತೆ ಅಪಘಾತ; ಸಾವು

ದಿನಾಂಕ 18/01/2020ರಂದು ರಾತ್ರಿ ವೇಳೆ ಗೋಣಿಕೊಪ್ಪ ನಿವಾಸಿ ನಂದಗೋಪಾಲ ಎಂಬವರು ಗೋಣಿಕೊಪ್ಪ ನಗರದ ಭಾರತಿ ಕಾಂಪ್ಲೆಕ್ಸ್ ಬಳಿ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಯಾವುದೋ ಒಂದು ಕಾರನ್ನು ಅದರ ಚಾಲಕ ಅತಿ ವೇಗವಾಗಿ ಚಾಲಿಸಿಕೊಂಡು ಬಂದು ನಂದಗೋಪಾಲರವರಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೋಗಿದ್ದು ಗಾಯಾಳು ನಂದಗೋಪಾಲರವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗಮಧ್ಯೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.