Crime News

ಅತ್ಯಾಚಾರ ಪ್ರಕರಣದ  ಅಪರಾಧಿಗೆ  ಶಿಕ್ಷೆ.

ಅತ್ಯಾಚಾರ ಪ್ರಕರಣದ ಅಪರಾಧಿಗೆ  ಶಿಕ್ಷೆ.

       ದಿನಾಂಕ 25-04-2019 ರಂದು ವಿರಾಜಪೇಟೆ ತಾಲ್ಲೂಕು ಬೊಳ್ಳುಮಾಡು ಗ್ರಾಮದ ನಿವಾಸಿ ವಸಂತ ಎಂಬುವವರು ಅವರ ಪಕ್ಕದ ಲೈನ್ ಮನೆಯ ವಾಸವಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಸುಮಾರು ಮೂರು ತಿಂಗಳ ಹಿಂದಿನಿಂದ ಮದುವೆಯಾಗುವುದಾಗಿ ಪುಸಲಾಯಿಸಿ ದೈಹಿಕ ಸಂಪರ್ಕ ನಡೆಸಿದ ಪರಿಣಾಮ ಗರ್ಭಿಣಿ ಯಾಗಿದ್ದರಿಂದ ವಸಂತ ಎಂಬುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಕೊಟ್ಟ ಪುಕಾರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ಸಂ 33/2019, ವಿಧಿ: 376 ಐ.ಪಿ.ಸಿ. ಮತ್ತು ಕಲಂ 4 & 6 of PROTECTION OF CHILDREN FROM SEXUAL OFFENCES ACT 2012. (POCSO)  ಕಾಯ್ದೆ ರೀತ್ಯಾ ದಿನಾಂಕ 25-04-2019. ಪ್ರಕರಣವನ್ನು ದಾಖಲಿಸಿಕೊಂಡು  ತನಿಖೆ ಪೂರೈಸಿ ಆರೋಪಿ ಹೆಚ್.ಸಿ.ವಸಂತ ತಂದೆ ಲೇಟ್ ಚಂಬ, ಪ್ರಾಯ 35, ವರ್ಷ, ಕೂಲಿ ಕೆಲಸ ವಾಸ  ಮಾತಂಡ ರಮೇಶ ರವರ ಲೈನ್ ಮನೆ, ಬೊಳ್ಳುಮಾಡು ಗ್ರಾಮ. ವಿರಾಜಪೇಟೆ ತಾಲೋಕು.ಇವರ ವಿರುದ್ದ ದೊಷಾರೋಪಣ ಪತ್ರವನ್ನು ತಯಾರಿಸಿ ವಿರಾಜಪೇಟೆಯ ಮಾನ್ಯ ಗೌರವಾನ್ವಿತ  2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

         ಮಾನ್ಯ ಘನ ನ್ಯಾಯಾಲಯದಲ್ಲಿ ಸ್ಪೇಷಲ್ ಕೇಸ್ ನಂಬರ್ 5012/19 ರಲ್ಲಿ ವಿಚಾರಣೆ ನಡೆದು ದಿನಾಂಕ 30-12-2019 ರಂದು ಆರೋಪಿಯ ವಿರುದ್ದ ಆರೋಪ ಸಾಬೀತಾಗಿರುವುದರಿಂದ ಅಂತಿಮ ತೀರ್ಪನ್ನು ಪ್ರಕಟಿಸಿದ್ದು ದಿನಾಂಕ: 18-01-2020 ರಂದು ಘನ ನ್ಯಾಯಾಲಯವು ಆರೋಪಿ ಹೆಚ್.ಸಿ.ವಸಂತ ರವರಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು ಸಿ.ಆರ್.ಪಿ.ಸಿ ಕಲಂ  235(2) ಅಡಿಯಲ್ಲಿ 376 ಐ.ಪಿ.ಸಿ ಗೆ 20 ವರ್ಷ ಸಾದಾರಣ ಕಾರಾಗೃಹ ಶಿಕ್ಷೆ, 20,000-00 ರೂ ದಂಡ, ದಂಡ ಪಾವತಿಸಲು ತಪ್ಪಿದಲ್ಲೂ 1 ವರ್ಷ ಹೆಚ್ಚುವರಿ ಕಾರಾಗೃಹ ಶಿಕ್ಷೆ ಹಾಗೂ 6 ಪೋಕ್ಸೋ ಕಾಯ್ದೆ ಗೆ 20 ವರ್ಷ ಸಾದಾರಣ ಕಾರಾಗೃಹ ಶಿಕ್ಷೆ, 20,000-00 ರೂ ದಂಡ, ದಂಡ ಪಾವತಿಸಲು ತಪ್ಪಿದಲ್ಲೂ 1 ವರ್ಷ ಹೆಚ್ಚುವರಿ ಕಾರಗೃಹ ಶಿಕ್ಷೆ ವಿಧಿಸಿರುತ್ತಾರೆ.          ಈ ಪ್ರಕರಣದಲ್ಲಿ ಕ್ಯಾತೇಗೌಡ, ಪೊಲೀಸ್ ಇನ್ಸ್ ಪೆಕ್ಟರ್ ರವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಸರ್ಕಾರಿ ಅಭಿಯೋಜಕರಾದ ಶ್ರೀ. ನಾರಾಯಣರವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 19-01-2020 ರಂದು ಸೋಮವಾರಪೇಟೆ ತಾಲ್ಲೂ ಕು ಬೆಳ್ಳಾರಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಕೆಎ-13-ಇಡಿ-6145 ರ ಬೈಕ್ ಸವಾರ ರಮಿತ್ ಎಂಬುವವರು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಸವಾರ ಕೆಳಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಲೋಕೇಶ್ ಎಂಬುವವರು ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.