Crime News

ಹಲ್ಲೆ ಪ್ರಕರಣ

          ದಿನಾಂಕ: 24-01-2020 ರಂದು ಮಡಿಕೇರಿ ನಗರದ ಮುಖ್ಯ ರಸ್ತೆಯಲ್ಲಿರುವ ಸಿಂದೂರ್ ಟೆಕ್ಸ್ ಟೈಲ್ಸ್ ಬಳಿ ಟೀ ಮಾರುತ್ತಿದ್ದ ವ್ಯಕ್ತಿ ಹಾಗೂ  ಕಲಂದರ್ ಎಂಬುವವರ ನಡುವೆ ಯಾವುದೋ ವಿಚಾರದಲ್ಲಿ ಮಾತುಕತೆಯಾಗುತ್ತಿದ್ದು, ಮಹಮ್ಮದ್ ಮೊಹಿಸೀನ್ ಎಂಬುವವರು ಟೀ ಕೇಳಲು ಹೋದಾಗ ಕಲಂದರ್ ರವರು ಮಹಮ್ಮದ್ ಮೊಹಿಸೀನ್ ಎಂಬುವವರಿಗೆ ಏಕಾಏಕಿ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಯತ್ನ

          ದಿನಾಂಕ: 24-01-2020 ರಂದು ಮಡಿಕೇರಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಲಂದರ್ ಎಂಬುವವರನ್ನು ವೈದ್ಯಕೀಯ ಪರೀಕ್ಷೆಗೆ ಮಡಿಕೇರಿ ನಗರ ಠಾಣೆ ಪೊಲಿಸರು ಕರೆದುಕೊಂಡು ಹೋಗಿರುವಾಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ ಟೇಬಲ್ ರವರು ಆರೋಪಿಯ ಹೆಸರು ಕೇಳಿದ್ದಕ್ಕೆ ಏಕಾಏಕಿ ಕೊಲೆ ಮಾಡುವುದಾಗಿ ಹೇಳಿ ಕೈಯಿಂದ ಕಣ್ಣಿಗೆ ಗುದ್ದಿ, ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿ  ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 24-01-2020 ರಂದು ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಗ್ರಾಮದ ಕೆ.ಆರ್.ಸಿ ವೃತ್ತದ ಬಳಿ ಕೆಎ-20- ಬಿ-8150 ರ ಬಸ್ಸನ್ನು ಅದರ ಚಾಲಕ ಮೋಹನ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ್ದರಿಂದ ಆಟೋ ರಸ್ತೆಗೆ ಮಗುಚಿಕೊಂಡ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಲಿಲಿತಮ್ಮ ಎಂಬುವವರು ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಸ್ತಿ ವಿಚಾರದಲ್ಲಿ ವಂಚನೆ ಪ್ರಕರಣ

          ಸೋಮವಾರಪೇಟೆ ತಾಲ್ಲೂಕು ಮೂದ್ರವಳ್ಳಿ ಗ್ರಾಮದ ನಿವಾಸಿ ಕುಮಾರ್ ಎಂಬುವವರಿಗೆ ಹೇಮಾವತಿ ಯೋಜನೆಯಲ್ಲಿ ಮುಳುಗಡೆಯಾದ ಆಸ್ತಿಯ ಬದಲಿಗೆ ಸರ್ಕಾರದ ವತಿಯಿಂದ ನಾಕಲಗೋಡು ಗ್ರಾಮದ ಸರ್ವೆ.ನಂ: 38/1 ರಲ್ಲಿ 3 ಎಕರೆ ಜಮೀನು ಮಂಜೂರಾಗಿರುತ್ತದೆ. ಈ ಆಸ್ತಿಯನ್ನು ಗುಡುಗಳಲೆ ಗ್ರಾಮದ ತೇಜಾ ಹಾಗೂ ಗಣಗೂರು ಗ್ರಾಮದ ರವಿಕುಮಾರ್ ಎಂಬುವವರು ಆಸ್ತಿಯುನ್ನು ಕಬಳಿಸುವ ಉದ್ದೇಶದಿಂದ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ವಂಚನೆ ಮಾಡಿದ್ದು ಈ ಬಗ್ಗೆ ದಿನಾಂಕ: 27-12-19 ರಂದು ಕೇಳಲು ಹೋದಾಗ ಕುಮಾರ್ ರವರಿಗೆ ಅವಾಚ್ಯ ಪದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ದಿನಾಂಕ: 24-01-2020 ರಂದು ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.