Crime News

ಪತಿಯಿಂದ ಪತ್ನಿ ಕೊಲೆ:

     ಕೌಟುಂಬಿಕ ಜಗಳದಿಂದ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ  ಬಾಡಗಬಾಣಂಗಾಲ ಗ್ರಾಮದಲ್ಲಿ ನಡೆದಿದೆ.  ಹುಂಡಿ ಬಾಡಗಬಾಣಂಗಾಲ ಗ್ರಾಮದ ಜೆ.ಕೆ. ರಾಜು @ ಸಣ್ಣಕೂಸು ಎಂಬವರು ದಿನಾಂಕ 27-3-2018 ರಂದು 9-30 ಗಂಟೆ ಸಮಯದಲ್ಲಿ ಕೌಟುಂಬಿಕ ವಿಚಾರದಲ್ಲಿ ಜಗಳ ಮಾಡಿ ತನ್ನ ಪತ್ನಿ ಶ್ರೀಮತಿ ಪದ್ಮಾ ಎಂಬವರ ಮೇಲೆ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ಯುವತಿ ಆತ್ಮಹತ್ಯೆ:

     ಎದೆನೋವಿನಿಂದ ಬಳಲುತ್ತಿದ್ದ ಯುವತಿಯೋರ್ವಳು ನೇಣಿಗೆ ಶರಣಾದ ಘಟನೆ ಮಡಿಕೇರಿ ತಾಲೋಕು  ಎಮ್ಮೆಮಾಡು ಗ್ರಾಮದಲ್ಲಿ ನಡೆದಿದೆ.  ಎಮ್ಮೆಮಾಡು ಗ್ರಾಮದ ನಿವಾಸಿ ಕೆ.ಎಂ. ದಾವೋದ್ ಎಂಬವರ ಪುತ್ರಿ 18 ವರ್ಷ ಪ್ರಾಯದ ಸಜೀನ ಎಂಬವರು ಕೆಲವು ಸಮಯದಿಂದ ಎದೆನೋವಿನಿಂದ ಬಳಲುತ್ತಿದ್ದು ಇದರಿಂದ ಜಿಗುಪ್ಸೆಕೊಂಡ ಆಕೆ ದಿನಾಂಕ 28-3-2018 ರಂದು 12-30 ಗಂಟೆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ಮೇಲೆ ಹಲ್ಲೆ:

     ಶನಿವಾರಸಂತೆ ಠಾಣಾ ಸರಹದ್ದಿನ ಚಿಕ್ಕಬಂಡಾರ ಗ್ರಾಮದ ನಿವಾಸಿ ಚಿಕ್ಕಯ್ಯ ಎಂಬವರು ದಿನಾಂಕ 28-3-2018 ರಂದು 12-00 ಗಂಟೆ ಸಮಯದಲ್ಲಿ ಬೆಸೂರು ಗ್ರಾಮ ಪಂಚಾಯ್ತಿ ಪಿ.ಡಿ.ಒ.ರವರಲ್ಲಿ ನೀರಿನ ಸಮಸ್ಯೆ ಬಗ್ಗೆ ಮಾತನಾಡಲು ಹೋಗಿದ್ದ ಸಂದರ್ಭದಲ್ಲಿ ಅಲ್ಲೇ ಇದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಾರ್ವತಿ ಎಂಬವರು ಚಿಕ್ಕಯ್ಯನವರನ್ನು ದಾರಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಕೆನ್ನೆಗೆ ಹಲ್ಲೆ ಮಾಡಿ ನೋವು ಪಡಿಸಿದ್ದು ಅಲ್ಲದೆ ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾರು ಟಿಂಬರ್ ಲಾರಿಗೆ ಡಿಕ್ಕಿ, ಒಬ್ಬನ ಸಾವು:

     ದಿನಾಂಕ 28-3-2018 ರಂದು ಸಂಜೆ 7-20 ಗಂಟೆ ಸಮಯದಲ್ಲಿ ಸುಬ್ರಮಣಿ, ಅರುಣ್ಯ ಪಾಂಡ್ಯನ್,  ಅಮನ್ ಅನಸ್ ಆರ್. ಮತ್ತು ಅಮೀರ್ ಬಾಷಾ ಎಂಬವರುಗಳು ಟಿ.ಎನ್. 11-ಡಿ-1474ರ ಕಾರಿನಲ್ಲಿ ಮಡಿಕೇರಿಯಿಂದ ಪಿರಿಯಾಪಟ್ಟಣದ ಕಡೆಗೆ ಹೋಗುತ್ತಿದ್ದಾಗ ಕಾರನ್ನು ಚಾಲನೆ ಮಾಡುತ್ತಿದ್ದ ಸುಬ್ರಮಣಿರವರು ಕಾರನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿ ಮುಂದುಗಡೆ ರಸ್ತೆಯಲ್ಲಿ ಹೋಗುತ್ತಿದ್ದ ಮರ ತುಂಬಿದ ಲಾರಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿ ದ್ದ ಚಾಲಕ ಸೇರಿ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗೆ ಕುಶಾಲನಗರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಗಾಯಾಳು ಅರುಣ್ಯ ಪಾಂಡ್ಯನ್ ಮೃತಪಟ್ಟಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಜೂಜು ಪ್ರಕರಣ ದಾಖಲು:

     ಅಕ್ರಮವಾಗಿ ಜುಜಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದಾರೆ,  ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲೋನಿಯಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಡುತ್ತಿರುವ ಬಗ್ಗೆ ಬಂದ ಮಾಹಿತಿ ಆದಾರದ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣಾ ಪಿಎಸ್ ಐ ಆರ್. ಮಂಚಯ್ಯನವರು ಸಿಬ್ಬಂದಿಯೊಂದಿಗೆ ದಿನಾಂಕ 27-3-2018 ರಂದು ರಾತ್ರಿ 11-30 ಗಂಟೆ ಸಮಯದಲ್ಲಿ  ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲೋನಿಯ ಬಾಣೆಯಲ್ಲಿ ಅಕ್ರಮವಾಗಿ 6 ಜನರ ಗುಂಪು ಜೂಜಾಟ ನಡೆಸುತ್ತಿದ್ದುದನ್ನು ಪತ್ತೆಹಚ್ಚಿ ಅವರ  ಮೇಲೆ ದಾಳಿ ಮಾಡಿ ಆಟಕ್ಕೆ ಬಳಸಿದ ರೂ.1570/- ಗಳನ್ನು, ಜೂಜಾಟಕ್ಕೆ ಬಳಸಿದಇಸ್ಪೀಟ್ ಎಲೆ ಮತ್ತು ಇತರೆ ಸಾಮಾಗ್ರಿಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

Leave a Reply

Your email address will not be published.