Crime News

ಚಿನ್ನಾಭರಣ ಕಳವು

ದಿನಾಂಕ 30/05/2018ರಂದು ಶನಿವಾರಸಂತೆ ಬಳಿಯ ಮೂದ್ರವಳ್ಳಿ ನಿವಾಸಿ ಸುನಿಲ್ ಕುಮಾರ್  ಆಚಾರ್ ಎಂಬವರು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಮನೆಯ ಬಳಿ ಇರುವ ಸಿಮೆಂಟ್ ಕಂಬದ ಬಳಿ ಇಟ್ಟು ಹೋಗಿದ್ದು ಸಂಜೆ ಮನೆಗೆ ಬರುವಾಗ ಯಾರೋ ಕಳ್ಳರು ಸಿಮೆಂಟ್ ಕಂಬದ ಬಳಿ ಇಟ್ಟಿದ್ದ ಕೀಯನ್ನು ತೆಗೆದು ಮನೆಯ ಬಾಗಿಲು ತೆರೆದು ಮನೆಯೊಳಗಿದ್ದ ಸುಮಾರು ರೂ.45,000/- ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ, ಸಾವು

ದಿನಾಂಕ 29/05/2018ರಂದು ಕುಶಾಲನಗರ ಬಳಿಯ ಚಿಕ್ಕತ್ತೂರು ನಿವಾಸಿ ಚಂದ್ರಶೇಖರ್ ಎಂಬವರು ಅವರ ಸ್ನೇಹಿತರಾದ ರಕ್ಷಿತ್, ಗಿರೀಶ್ ಮತ್ತು ಅಭಿಷೇಕ್ ಎಂಬವರೊಂದಿಗೆ ಎರಡು ಬೈಕುಗಳಲ್ಲಿ ಕುಶಾಲನಗರಕ್ಕೆ ಹೋಗಿ ಮರಳಿ ಬರುತ್ತಿರುವಾಗ ಗುಮ್ಮನಕೊಲ್ಲಿ ಬಳಿ ಎದುರಿನಿಂದ ಮಂಜುನಾಥ ಎಂಬವರು ಅವರ ಮೋಟಾರು ಸೈಕಲನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗಿರೀಶ್ ಮತ್ತು ರಕ್ಷಿತ್‌ರವರು ಹೋಗುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ರಕ್ಷಿತ್ ಹಾಗೂ ಗಿರೀಶ್ ಇಬ್ಬರೂ ಬೈಕಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಮೈಸೂರಿಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ರಕ್ಷಿತ್ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

Leave a Reply

Your email address will not be published.