Crime News

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 25-01-2020 ರಂದು ಮಡಿಕೇರಿ ತಾಲ್ಲೂಕು ದೇವರಕೊಲ್ಲಿ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-19-ಇಎ-1029 ರ ಬೈಕನ್ನು ಅದರ ಸವಾರ ನಿರೂಪ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಮದ ಬರುತ್ತಿದ್ದ ಕೆಎ-05-ಎಂಎ-7291 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ನಿಂದ ಕೆಳಗೆ ಬಿದ್ದು ಬೈಕ್ ಸವಾರ ಹಾಗೂ ಹಿಂಬದಿ ಸವಾರ ಪ್ರಜ್ವಲ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಕಾರು ಚಾಲಕ ಖಾಸಿಂ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 25-01-2020 ರಂದು ವಿರಾಜಪೇಟೆ ತಾಲ್ಲೂಕು ಭದ್ರಗೊಳ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎಲ್-08-ಬಿಪಿ-7903 ರ ಬೈಕನ್ನು ಅದರ ಸವಾರ ರಾಮ್ ಮೋಹನ್ ಎಂಬುವವರು ಅತಿವೇಗ ಮತ್ತು  ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಗಾಯಗೊಂಡಿದ್ದವರನ್ನು ಪೊಲೀಸ್ ಹೈವೇ ಪಟ್ರೋಲ್ ವಾಹನದಲ್ಲಿ ಗೋಣಿಕೊಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮೈಸೂರು ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಡಲಾಗಿರುತ್ತದೆ.  ಈ ಬಗ್ಗೆ ಗಾಯಾಳುವಿನ ತಂದೆ ವಿನೋದ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನಕಲಿ ವಾಹನ ವಿಮೆ ಪಾಲಿಸಿ ನೀಡಿ ವಂಚನೆ

          ಸೋಮವರಪೇಟೆ ತಾಲ್ಲೂಕು ಕುಶಾಲನಗರ ಪಟ್ಟಣದ ಕರಿಯಪ್ಪ ಬಡಾವಣೆ ನಿವಾಸಿ ಶ್ರೀಮತಿ ಶಾಂತಾ ಎಂಬುವವರು ಅವರ ಹೆಸರಿನಲ್ಲಿರುವ ಕೆಎ-09-3069 ರ ಲಾರಿಯ ವಾಹನ ವಿಮೆ ಮಾನ್ಯತಾ ಅವಧಿ ಮುಕ್ತಯಾವಾಗಿದ್ದರಿಂದ ದಿನಾಂಕ: 17-02-2018 ರಂದು ಕುಶಾಲನಗರದಲ್ಲಿ ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಏಜೆನ್ಸಿ ಹೊಂದಿರುವ ಪುನೀತ್ ಎಂಬುವವರಿಗೆ ವಾಹನ ವಿಮೆ ನವೀಕರಿಸಲು ರೂ. 34,400 ನಗದು ಹಣವನ್ನು ಸಂದಾಯ ಮಾಡಿದ್ದರು. ನಂತರ ಪುನೀತ್ ದಿನಾಂಕ: 21-02-2018 ರಂದು ವಾಹನ ವಿಮೆಯ ನವೀಕರಿಸಿದ ಪಾಲಿಸಿ ಸಂ: 67240231170200007838 ನ್ನು ನೀಡಿರುತ್ತಾರೆ. ದಿನಾಂಕ: 26-04-2018 ರಂದು ಲಾರಿ ಅಪಘಾತಕ್ಕೆ ಒಳಗಾಗಿದ್ದು ಈ ಸಂಬಂಧ ಮುಂದಿನ ವಿಮಾ ಪರಿಹಾರ ಪ್ರಕ್ರಿಯೆಗಳಿಗೆ ಮೇಲ್ಕಂಡ ಪಾಲಿಸಿಯ ಮಾಹಿತಿಯನ್ನು ನೀಡಿರುತ್ತಾರೆ. ಆದರೆ ವಿಮಾ ಕಂಪನಿಯ ವಕೀಲರು ವಾಹನ ವಿಮೆಯ ಪಾಲಿಸಿಯನ್ನು ಪರಿಶೀಲಿಸಿದಾಗ ನಕಲಿ ಪಾಲಿಸಿ ಎಂಬುದಾಗಿ ತಿಳಿದುಬಂದಿರುತ್ತದೆ. ಈ ಬಗ್ಗೆ ಪುನೀತ್ ರವರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ನೀಡದೇ ಇದ್ದು ವಿಮಾ ಕಂಪನಿಯಲ್ಲಿ ವಿಚಾರಿಸಿದಾಗ ಪುನೀತ್ ರವರು ನಕಲಿ ವಾಹನ ವಿಮೆ ಪಾಲಿಸಿ ನೀಡಿ ವಂಚಿಸಿರುವುದಾಗಿ ತಿಳಿದುಬಂದಿದ್ದು ಈ ಬಗ್ಗೆ ಶ್ರೀಮತಿ ಶಾಂತಾ ರವರು ದಿನಾಂಕ: 25-01-2020 ರಂದು ನೀಡಿದ ಪುಕಾರಿನ ಮೇರೆ ಕುಶಾಲನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಾವು ಕಚ್ಚಿ ಮಹಿಳೆ ಸಾವು

          ದಿನಾಂಕ: 24-01-2020 ರಂದು ಕುಶಾಲನಗರ ಪಟ್ಟಣದ ರಾಧಾಕೃಷ್ಣ ಬಡಾವಣೆ ನಿವಾಸಿ ಶ್ರೀಮತಿ ಸುಚಿತ ಎಂಬುವವರು ಮನೆಯಲ್ಲಿ ಶೌಚಾಲಯಕ್ಕೆ ಹೋಗಿ ವಾಪಾಸ್ಸು ಬರುವಾಗ ಕಿರುಬೆರಳಿಗೆ ಯಾವುದೋ ಹಾವು ಕಚ್ಚಿದ್ದು ಕೂಡಲೇ ಚಿಕಿತ್ಸೆಗೆ ಕುಶಾಲನರ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 25-01-2020 ರಂದು ಶ್ರೀಮತಿ ಸುಚಿತ ರವರು ಮೃತಪಟ್ಟಿದ್ದು ಈ ಬಗ್ಗೆ ಮೃತರ ಸಹೋದರ ಪ್ರಭಾಕರ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ.