Crime News

ರಸ್ತೆ ಅಪಘಾತ, ವ್ಯಕ್ತಿ ಸಾವು

ದಿನಾಂಕ 25/01/2020ರಂದು ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಭದ್ರಗೊಳ ಬಳಿ ಕೇರಳದ ತಳಿಪರಂಬು ನಿವಾಸಿ ರಾಮ್‌ ಮೋಹನ್‌ ಎಂಬವರು ಬೆಂಗಳೂರಿನಿಂದ ತಳಿಪರಂಬುವಿಗೆ ಅವರ ಬೈಕಿನಲ್ಲಿ ಬರುತ್ತರುವಾಗ ಭದ್ರಗೊಳದ ಬಳಿ ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 26/01/2020ರಂದು ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಫಿ ಕಳವು ಪ್ರಕರಣ

ಕುಟ್ಟ ಬಳಿಯ ಕೋತೂರು ನಿವಾಸಿ ಕೊಟ್ಟಂಗಡ ಪಿ ಸೋಮಣ್ಣ ಎಂಬವರ ಕಾಫಿ ಕಣದಲ್ಲಿ ಒಣಗಲು ಹಾಕಿದ್ದ ಸುಮಾರು ರೂ 9,000/- ಮೌಲ್ಯದ ಕಾಫಿ ಹಣ್ಣನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 20/01/2020ರಂದು ಕುಶಾಲನಗರ ಬಳಿಯ ಕೂಡ್ಲೂರು ನಿವಾಶಿ ಯಶೋದ ಎಂಬವರು ಮನೆಯಲ್ಲಿರುವಾಗ ಅವರ ಹಿಂದಿನ ಮನೆಯ ನಿವಾಸಿ ಧರ್ಮ, ರೂಪಾ ಮತ್ತು ಪುನಿ ಎಂಬವರು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಯಶೋದರವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 26/01/2020ರಂದು ಸುಂಟಿಕೊಪ್ಪ ಬಳಿಯ ಉಲುಗುಲಿ ಗ್ರಾಮದ ಟಿಸಿಎಲ್‌ ತೋಟದ ನಿವಾಸಿ ಕಮಲ ಎಂಬವರು ಸುಂಟಿಕೊಪ್ಪ ನಗರದ ಕನ್ನಡ ವೃತ್ತ ಬಳಿ ರಸ್ತೆ ದಾಟುತ್ತಿರುವಾಗ ಕೆಎ-12-ಎ-9583ರ ಗೂಡ್ಸ್ ವಾಹನವನ್ನು ಅದರ ಚಾಲಕ ಷರೀಫ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಮಲರವರಿಗೆ ಡಿಕ್ಕಿಪಡಿಸಿದ ಪರಿಣಾಮ ಕಮಲರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರದ ಕೊಂಬೆ ಬಿದ್ದು ವ್ಯಕ್ತಿ ಸಾವು

ದಿನಾಂಕ 26/01/2020ರಂದು ಸುಂಟಿಕೊಪ್ಪ ಬಳಿಯ ಹಾಲೇರಿ ಗ್ರಾಮದ ಪ್ಯಾಲೇಸ್‌ ಫೀಲ್ಡ್ ತೋಟದಲ್ಲಿ ಅಸ್ಸಾಂ ರಾಜ್ಯದ ಕಾರ್ಮಿಕ ಅಮೀರ್‌ ಅಲಿ ಎಂಬಾತನು ಕಾಫಿ ಕುಯ್ಯುತ್ತಿರುವಾಗ ಮರದ ಮೇಲಿದ್ದ ಮಂಗಗಳು ಮರಗಳ ಕೊಂಬೆಗಳನ್ನು ಅಲ್ಲಾಡಿಸಿದ ಪರಿಣಾಮ ಒಣಗಿದ ಕೊಂಬೆಯೊಂದು ಅಮೀರ್‌ ಅಲಿರವರ ಮೇಲೆ ಬಿದ್ದು ಗಾಯಗಳಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ವಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರ್ಸ್ ಕಳವು ಪ್ರಕರಣ

ದಿನಾಂಕ 24/01/2020ರಂದು ರಾತ್ರಿ ವೇಳೆ ಮಡಿಕೇರಿ ನಗರದ ದೇಚೂರು ನಿವಾಸಿ ಸಿ.ಜಿ.ಬೆಳ್ಳಿಯಪ್ಪ ಎಂಬವರು ಮಡಿಕೇರಿ ನಗರದ ಪಿ.ಕೆ.ಅಜೀಜ್ ಅಂಗಡಿಯ ಉಗ್ರಾಣದ ಬಳಿಯ ರಸ್ತೆಯ್ಲಲಿ ನಡೆದುಕೊಂಡು ಹೋಗುತ್ತಿರುವಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ಬೆಳ್ಳಿಯಪ್ಪರವರನ್ನು ಹಿಂದಿನಿಂದ ಬಿಗಿಯಾಗಿ ತಬ್ಬಿ ಹಿಡಿದು ಅವರ ಪ್ಯಾಂಟಿನ ಹಿಂದಿ ಜೇಬಿನಲ್ಲಿದ್ದ ಪರ್ಸನ್ನು ಅದರಲ್ಲಿದ್ದ ಸುಮಾರು ರೂ. 4,500/- ರ ಸಮೇತ ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.