Crime News

ಕೊಲೆ ಯತ್ನ ಪ್ರಕರಣ

          ದಿನಾಂಕ: 27-01-2020 ರಂದು ಮಡಿಕೇರಿ ತಾಲ್ಲೂಕು ಚೆರಿಯಪರಂಬು ಗ್ರಾಮದ ಮಸೀದಿಗೆ ಸೇರಿದ ಕಟ್ಟಡದಲ್ಲಿ ಬಾಡಿಗೆಗೆ ವಾಸವಿರುವ ಅಸ್ಸಾಂ ಮೂಲದ ದುಲ್ ಮುಲ್ಲಾ ಎಂಬುವವರು ವೈಯಕ್ತಿಕ ಕಾರಣದಿಂದ ಅವರ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಕುತ್ತಿಗೆಗೆ ಕಡಿದು ಗಾಯಗೊಳಿಸಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಕಸ್ಮಿಕವಾಗಿ ಹೊಳೆಗೆ ಬಿದ್ದು ಸಾವು

          ದಿನಾಂಕ: 27-01-2020 ರಂದು ಮಡಿಕೇರಿ ತಾಲ್ಲೂಕು ಕರಿಕೆ ಗ್ರಾಮದ ಕುಂಡತ್ತಿಕಾನ ನಿವಾಸಿ ಉದಯ  ಎಂಬುವವರು ಹೊಳೆಯಲ್ಲಿ ಮೀನು ಹಿಡಿಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಮೃತರ ಸಹೋದರ ದುರ್ಗದಾಸ್ ಎಂಬುವವರು ನೀಡಿದ ಪುಕಾರಿನ ಮೇರೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಆತ್ಮಹತ್ಯೆ

          ದಿನಾಂಕ: 26-01-2020 ರಂದು ವಿರಾಜಪೇಟೆ ತಾಲ್ಲೂಕು ಪೈತ್ ಎಸ್ಟೇಟ್ ಲೈನ್ ಮನೆಯ ನಿವಾಸಿ ಮೈಸೂರು ಜಿಲ್ಲೆ ನಂಜನಗೂಡು ನಿವಾಸಿ ಕಿರಣ್ ಎಂಬುವವರು ಅನಾರೋಗ್ಯವಿದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತನ ತಾಯಿ ನೀಡಿದ ಪುಕಾರಿನ ಮೇರೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಯತ್ನ ಪ್ರಕರಣ

          ದಿನಾಂಕ: 27-01-2020 ರಂದು ವಿರಾಜಪೇಟೆ ತಾಲ್ಲೂಕು ಕಣ್ಣಂಗಾಲ ಗ್ರಾಮದ ನಿವಾಸಿ ಜೇನುಕುರುಬರ ಮಣಿ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ಜೇನುಕುರುಬರ ಗಣೇಶ ಎಂಬುವವರು ವೈಯಕ್ತಿಕ ಕಾರಣಕ್ಕೆ ಅವಾಚ್ಯ ಪದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ಜೇನಕುರುಬರ ಮಣಿ ರವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರ್ತವ್ಯಕ್ಕೆಅಡ್ಡಿಪಡಿಸಿ ಹಲ್ಲೆ

          ದಿನಾಂಕ: 27-01-2020 ರಂದು ವಿರಾಜಪೇಟೆ ತಾಲ್ಲೂಕು ಬಿಳುಗುಂದ ಗ್ರಾಮದ ನಿವಾಸಿ ಅಮಾನುಲ್ಲಾಖಾನ್ ಎಂಬುವವರ ಮನೆಯ ವಿದ್ಯುತ್ ಬಿಲ್ ಪಾವತಿಯಾಗದೇ ಇದ್ದುದರಿಂದ ವಿದ್ಯುತ್ ಸಂಪರ್ಕ ನಿಲುಗಡೆಗೊಳಿಸಿದ್ದು, ಸೆಸ್ಕ್ ಅಮ್ಮತ್ತಿ ಭಾಗದ ಜೂನಿಯರ್ ಪವರ್ ಮ್ಯಾನ್ ಆಗಿರುವ ಬೀರಪ್ಪ ಎಂಬುವವರು ವಿದ್ಯುತ್ ಮಾಪಕ ಓದುಗರಾದ ನಾಗೇಂದ್ರ ಎಂಬುವವರೊಂದಿಗೆ ಮೀಟರ್ ಪರಿಶೀಲಿಸಿದಾಗ ಮಾಪಕ ವ್ಯತ್ಯಾಸ ಕಂಡುಬಂದಿದ್ದರಿಂದ ವಿರಾಜಪೇಟೆ ಸೆಸ್ಕ್ ಕಛೇರಿಗೆ ತಿಳಿಸಿ ಬಿಲ್ ಮಾಹಿತಿ ಪಡೆದುಕೊಂಡು 22, 612 ರೂ ಬಾಕಿ ಇರುವುದಾಗಿ ಅಮಾನುಲ್ಲಾಖಾನ್ ರವರಿಗೆ ತಿಳಿಸಿದಾಗ ಅವರ ಮಗ ಜಿಯಾ ಎಂಬುವವರು ಏಕಾಏಕಿ ಬೀರಪ್ಪ ರವರ ಕೈಯನ್ನು ತಿರುಗಿಸಿ, ಹಲ್ಲೆ ಮಾಡಿ, ಸಮವಸ್ತ್ರವನ್ನು ಹರಿದುಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.