Crime News

ವ್ಯಕ್ತಿ ಕಾಣೆ ಪ್ರಕರಣ

          ದಿನಾಂಕ: 28-01-2020 ರಂದು ವಿರಾಜಪೇಟೆ ತಾಲ್ಲೂಕು ಅರವತ್ತೊಕ್ಲು ಗ್ರಾಮದ ನಿವಾಸಿ ದರ್ಶನ್ ಎಂಬುವವರು ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು  ಈ ಬಗ್ಗೆ ಚಂದ್ರಕುಮಾರ್ ಎಂಬುವವರು ನೀಡಿದ ದೂರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್ ಕಳವು ಪ್ರಕರಣ

          ದಿನಾಂಕ: 18-01-2020 ರಂದು ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆ ವಸತಿ ಗೃಹದಲ್ಲಿ ವಾಸವಿರುವ ಡಾ. ನಿಶಿದ್ ಜೋಸೆಫ್ ಎಂಬುವವರು ಅವರ ವಸತಿ ಗೃಹದ ಆವರಣದಲ್ಲಿ ನಿಲ್ಲಿಸಿದ್ದ ಕೆಎಲ್-02-ಎಲ್-4117 ರ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

          ದಿನಾಂಕ: 27-01-2020 ರಂದು ಕುಶಾಲನಗರ ಪಟ್ಟಣದ ಯೋಗಾನಂದ ಬಡಾವಣೆ ನಿವಾಸಿ ವರದರಾಜು ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿ ಬೀರುವಿನಲ್ಲಿಟ್ಟಿದ್ದ 2,33,000 ರೂ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಮೊಬೈಲ್ ಸೆಟ್ ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

          ಮಡಿಕೇರಿ ತಾಲ್ಲೂಕು ಕಾಟಕೇರಿ ಗ್ರಾಮದ ನಿವಾಸಿ ಅಬೂಬಕರ್ ಎಂಬುವವರು ಮಡಿಕೇರಿ ನಗರದ ಪತ್ರಿಕಾ ಭವನ ಕಟ್ಟಡದಲ್ಲಿರುವ ಅಯ್ಯಪ್ಪ ಫೈನಾನ್ಸ್ ಕಂಪನಿಯಿಂದ ದಿ: 04-04-2016 ರಂದು ರೂ. 20,000 ಸಾಲ ಪಡೆದುಕೊಂಡು ಬ್ಯಾಂಕ್ ಚೆಕ್ ನೀಡಿದ್ದರು. ನಂತರ ಸಾಲದ ಹಣವನ್ನು ಬಡ್ಡಿಯೊಂದಿಗೆ ಮರುಪಾವತಿ ಮಾಡಿರುತ್ತಾರೆ. ಆದರೆ ಫೈನಾನ್ಸ್ ಕಂಪನಿಯವರು ಚೆಕ್ ವಾಪಾಸ್ಸು ನೀಡದೇ ಖಾಸಗಿ ದೂರನ್ನು ದಾಖಲಿಸಿ ಮೊಸ ಮಾಡಿರುವುದಾಗಿ ಅಯ್ಯಪ್ಪ ಫೈನಾನ್ಸ್ ನ ಯಲ್ಲಪ್ಪ, ಪುರುಷೋತ್ತಮ, ರತ್ನಾಕರ ರೈ, ಸುಬ್ರಮಣಿ, ರಾಜೇಶ್ ಹಾಗೂ ಮೀರಾ ಎಂಬುವವರ ವಿರುದ್ದ ಅಬೂಬಕರ್ ರವರು ನ್ಯಾಯಾಲಯದಲ್ಲಿ ಸಲ್ಲಿಸಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.