Crime News

ವಂಚನೆ ಪ್ರಕರಣ

          ಸೋಮವಾರಪೇಟೆ ತಾಲ್ಲೂಕು ಕಿರಗಂದೂರು ಗ್ರಾಮದ ನಿವಾಸಿಗಳಾದ ರಶೀನ್ ಕುಮಾರ್, ದಿಲೀಪ್ ಕುಮಾರ್, ಬಿಳಿಗೇರಿ ಗ್ರಾಮದ ಪೊನ್ನಪ್ಪ ಮತ್ತು ದೊಡ್ಡಹಣಕೋಡು ಗ್ರಾಮದ ಕೌಶಿಕ್ ಎಂಬುವವರು 2019ನೇ ಆಗಸ್ಟ್ ತಿಂಗಳಿನಲ್ಲಿ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಕಛೇರಿ ಹೊಂದಿದ್ದ ಕೇರಳ ರಾಜ್ಯದ ತಿರುವನಂತಪುರ ಮೂಲದ ಒಮೇಗ 3-6 ಎಂಬ ಕಂಪನಿಯೊಂದಿಗೆ ಕೋಳಿ ಸಾಕಾಣಿಕೆ ಹಾಗೂ ಮೊಟ್ಟೆ ಉತ್ಪಾದನೆ ಸಂಬಂಧ ಒಪ್ಪಂದ ಮಾಡಿಕೊಂಡು ಕ್ರಮವಾಗಿ 5,50,000 ರೂ, 2,50,000 ರೂ, 2,35,000 ರೂ ಹಾಗೂ 8,35,000 ರೂ ಹಣ ಪಾವತಿಸಿ ಕೋಳಿ ಸಾಕಾಣಿಕೆ ಮಾಡಿಕೊಂಡಿದ್ದರು. ನಂತರದ ದಿನಗಳಲ್ಲಿ ಕಂಪನಿಯವರು ನೀಡಿದ ಮಾಹಿತಿಯಂತೆ ಕೋಳಿಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಮೊಟ್ಟೆ ಉತ್ಪಾದನೆಯಾಗದೇ ಇದ್ದುದರಿಂದ ಹಾಗೂ ಸತ್ತುಹೋದ ಕೋಳಿಗಳಿಗೆ ವಿಮೆ ಹಣ ನೀಡದೇ ಇದ್ದುದರಿಂದ ಕಂಪನಿಯವರನ್ನು ಭೇಟಿಯಾಗಿ ವಿಚಾರಿಸಿದಾಗ ದಿನಾಂಕ: 13-12-2019 ರಂದು ಹಣ ನೀಡುವುದಾಗಿ ಹೇಳಿದ್ದರು. ದಿನಾಂಕ: 13-12-2019 ರಂದು ನಂಜನಗೂಡಿನಲ್ಲಿರುವ ಕಂಪನಿಯ ಕಛೇರಿಗೆ ಹೋಗಿ ನೋಡಿದಾಗ ಕಂಪನಿಯವರು ಕಛೇರಿಯನ್ನು ಖಾಲಿ ಮಾಡಿಕೊಂಡು ಹೋಗಿರುತ್ತಾರೆ. ನಂತರ ಕಂಪನಿಯವರಿಗೆ ಕರೆಮಾಡಿ ಹಣದ ಬಗ್ಗೆ ವಿಚಾರ ಮಾಡಿದಾಗ ಜೀವ ಬೆದರಿಕೆ ಹಾಕಿ ಹಣ ನೀಡದೇ ವಂಚನೆ ಮಾಡಿದ್ದು ಒಮೇಗಾ 3-6 ಕಂಪನಿಯ ಪ್ರಮೋದ್ ಸಂಪತ್ ಶೆರ್ಲಿ, ಪ್ರಮೋದ್ ಲಜರ್, ಪ್ರಮೋದ್ ಶೆರ್ಲಿ, ಬೆನ್ಸಿನ್ ಎಲ್ ಬೆನ್ನಿ, ವಿಷ್ಣು, ಮಧು, ರೇಷ್ಮ, ಅರುಣ್ ರಾಮಚಂದ್ರನ್, ವಿಷ್ಣುಕುಮಾರ್, ಸುನಿಲ್ ರಾಬಿನ್ ಎಂಬುವವರು ವಿರುದ್ದ ರಶೀನ್ ಕುಮಾರ್, ದಿಲೀಪ್ ಕುಮಾರ್, ಪೊನ್ನಪ್ಪ ಮತ್ತು ಕೌಶಿಕ್ ರವರು ದಿನಾಂಕ: 01-02-2020 ರಂದು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ದಿನಾಂಕ: 15-01-2020 ರಂದು ವಿರಾಜಪೇಟೆ ತಾಲ್ಲೂಕು ಮಂಚಳ್ಳಿ ಗ್ರಾಮದ ನಿವಾಸಿ ಸೋಮಣ್ಣ ಎಂಬುವವರು ತಮ್ಮ ಮನೆಯ ಪಕ್ಕದ ಗೋದಾಮಿನಲ್ಲಿ ತಲಾ 30 ಕೆಜಿಯಂತೆ 30 ಚೀಲ ಕಾಳು ಮೇಣಸನ್ನು ಇಟ್ಟಿದ್ದರು. ನಂತರ ದಿನಾಂಕ: 01-02-2020 ರಂದು ಗೋದಾಮನ್ನು ತೆರದು ನೋಡಿದಾಗ ಯಾರೋ ಕಳ್ಳರು ಒಳನುಗ್ಗಿ 28 ಚೀಲ ಕಾಳು ಮೇಣಸನ್ನು ಕಳವು ಮಾಡಿಕೊಂಡು ಹೋಗಿದ್ದು   ಈ ಬಗ್ಗೆ ಸೋಮಣ್ಣ ರವರು ನೀಡಿದ ಪುಕಾರಿನ ಮೇರೆ ಕುಟ್ಟ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಂಗ್ರಹಣೆ ಪ್ರಕರಣ

ದಿನಾಂಕ: 01-02-2020 ರಂದು ವಿರಾಜಪೇಟೆ ತಾಲ್ಲೂಕು ಕುಮಟೂರು ಗ್ರಾಮದ ರಾಮತೀರ್ಥ ಹೊಳೆಯಿಂದ ಯಾರೋ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ತೆಗೆದೆ ಹೊಳೆಯ ದಡದಲ್ಲಿ ಸಂಗ್ರಹಿಸಿ ಇಟ್ಟಿದ್ದ ಪ್ರಕರಣವನ್ನು ಶ್ರೀಮಂಗಲ ಠಾಣೆ ಪಿಎಸ್ಐ ದಿನೇಶ್ ಕುಮಾರ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

          ದಿನಾಂಕ: 25-01-2020 ರಂದು ಮಡಿಕೇರಿ ತಾಲ್ಲೂಕು ದೇವರಕೊಲ್ಲಿ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-19-ಇಎ-1029 ರ ಬೈಕನ್ನು ಅದರ ಸವಾರ ನಿರೂಪ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-05-ಎಂಎ-7291 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ನಿಂದ ಕೆಳಗೆ ಬಿದ್ದು ಬೈಕ್ ಸವಾರ ಹಾಗೂ ಹಿಂಬದಿ ಸವಾರ ಪ್ರಜ್ವಲ್ ಎಂಬುವವರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಾಕಾರಿಯಾಗದೆ ದಿನಾಂಕ: 01-02-2020 ರಂದು ಗಾಯಾಳು ಪ್ರಜ್ವಲ್ ಎಂಬುವವರು ಮೃತಪಟ್ಟಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.