Crime News

ಅಪಘಾತ ಪ್ರಕರಣ

ದಿನಾಂಕ 01-06-2018 ರಂದು ಕುಶಾಲನಗರದ ಗುಂಡುರಾವ್ ಬಡಾವಣೆಯ ನಿವಾಸಿಯಾದ ವಿಜಯ್ ರವರು ರಾಜೇಶ ಮತ್ತು ರಮೇಶರವರೊಂದಿಗೆ ಮದ್ಯಾಹ್ನ ಊಟಕ್ಕೆಂದು ಬೈಚನಹಳ್ಳಿ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಐ.ಬಿ. ರಸ್ತೆಯ  ಕಡೆಯಿಂದ ಶ್ರೀ ಗುರುರಾಘವೇಂದ್ರ ಮೋಟರ್ ಸರ್ವಿಸ್ ಬಸ್ಸನ್ನು ಚಾಲಕ ಮೋಹನ್ ಕುಮಾರ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ನಡೆದುಕೊಂಡು ಹೋಗುತ್ತಿದ್ದ ರಾಜೇಶರವರಿಗೆ ಡಿಕ್ಕಿಪಡಿಸಿ ರಂಗನಾಥ ಎಂಟರ್ ಪ್ರೈಸಸ್ ಅಂಗಡಿಗೆ ಡಿಕ್ಕಿಪಡಿಸಿದ್ದು ಗಾಯಗೊಂಡ ರಾಜೇಶರವರು ಮೃತಪಟ್ಟಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ

ದಿನಾಂಕ 01-06-2018 ರಂದು ಸೋಮವಾರಪೇಟೆ ನಗರದ ನಿವಾಸಿ ಮಂಜಮ್ಮ ಎಂಬುವವರ ಮನೆಯ ಪಕ್ಕದ ನಿವಾಸಿಯಾದ ಕಿರಣರವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಮಂಜಮ್ಮನವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

ದಿನಾಂಕ 01-06-2018 ರಂದು ಸೋಮವಾರಪೇಟೆ ನಗರದ ನಿವಾಸಿ ಸತ್ಯ ಎಂಬುವವರು ಸ್ನೇಹಿತನ ಜನ್ಮ ದಿನವನ್ನು ಆಚರಿಸುತ್ತಿದ್ದ ವೇಳೆ ಊಟದ ಎಲೆ ಕಾಳಯ್ಯನವರ ಮನೆಯ ಹತ್ತಿರ ಬಿದ್ದಿದ್ದು, ಕಾಳಯ್ಯನವರು ವಿಚಾರಿಸುತ್ತಿರುವಾಗ ಮುತ್ತಾಲಿ ಎಂಬುವವರು ಸತ್ಯರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತದಿಂದ ಗಾಯಗೊಂಡಿದ್ದ ವ್ಯಕ್ತಿಯ ಸಾವು

ದಿನಾಂಕ 23-05-2018 ರಂದು ಮಡಿಕೇರಿ ತಾಲೂಕಿನ ಐಕೊಳ ಗ್ರಾಮದ ನಿವಾಸಿಯಾದ ಮೊಣ್ಣರವರು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಮ್ಮತ್ತಿ ಒಂಟಿಯಂಗಡಿಯ ನಿವಾಸಿಯಾದ ಜೋಸೆಫ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ನಡೆದುಕೊಂಡು ಹೋಗುತ್ತಿದ್ದ ಮೊಣ್ಣರವರಿಗೆ ಡಿಕ್ಕಿಪಡಿಸಿದ್ದು, ಗಾಯಗೊಂಡ ಮೊಣ್ಣರವರು  ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ದಿನಾಂಕ 01-06-2018 ರಂದು ಮೃತಪಟ್ಟಿರುತ್ತಾರೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

ಹೆಗ್ಗಳ ಗ್ರಾಮದ ನಿವಾಸಿಯಾದ ಪ್ರವೀಣ್ ಗೊಸ್ಸಾಲ್ವೇಸ್ ಎಂಬುವವರು ಬೆಂಗಳೂರಿನಲ್ಲಿ ವಾಸವಿದ್ದು, ದಿನಾಂಕ 01-06-2018 ರಂದು ಅವರು ಹೆಗ್ಗಳ ಗ್ರಾಮದಲ್ಲಿರುವ ಮನೆಗೆ ಹೋಗಿ ನೋಡುವಾಗ ಮನೆಯಲ್ಲಿಟ್ಟಿದ್ದ ಹೆಚ್ ಪಿ ಕಂಪೆನಿಗೆ ಸೇರಿದ ಗ್ಯಾಸ್ ಸಿಲಿಂಡರ್  ಹಾಗೂ 3 ಗ್ರಾಂ ತೂಕದ ಚಿನ್ನದ ಉಂಗುರವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಶೇಖರಣೆ

ದಿನಾಂಕ 01-06-2018 ರಂದು ಮಡಿಕೇರಿಯ ಗಣಿ ಮತ್ತು ಭೂ ಇಲಾಖೆಯ ಭೂ ವಿಜ್ಞಾನಿಯಾಗಿರುವ ನಾಗೇಂದ್ರಪ್ಪ ಎಂಬುವವರಿಗೆ ಸಿಕ್ಕಿದ ಮಾಹಿತಿ ಮೇರೆಗೆ  ವಿರಾಜಪೇಟೆ ತಾಲೂಕು ಈಚೂರು ಗ್ರಾಮದಲ್ಲಿ ಹರಿಯುತ್ತಿರುವ ಕೊಂಗಣ ಹೊಳೆಯಿಂದ ತೆಪ್ಪಗಳನ್ನು ಬಳಸಿ ಅಕ್ರಮವಾಗಿ ಮರಳನ್ನು ತೆಗೆದು ಶೇಖರಿಸಿಟ್ಟ ಸ್ಥಳಕ್ಕೆ ದಾಳಿ ಮಾಡಿ ತೆಪ್ಪಗಳನ್ನು ಹಾಗೂ ಮರಳನ್ನು ವಶಪಡಿಸಿಕೊಂಡು ಪ್ರದೀಪ ಎಂಬುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published.