Crime News

ಅಕ್ರಮ ಜೂಜಾಟ ಪ್ರಕರಣ

ವಿರಾಜಪೇಟೆ ನಗರದ ದೊಡ್ಡಟ್ಟಿ ಚೌಕಿ ಬಳಿಯಿರುವ ಭಾಗ್ಯಲಕ್ಷ್ಮಿ ಲಾಡ್ಜ್ ನ 4ನೇ ಮಹಡಿಯಲ್ಲಿದ್ದ ಸೌತ್ ಸ್ಪೋಟ್ಸರ್್ & ಹೆಲ್ತ್ ಕ್ಲಬ್  ನಲ್ಲಿ ದಿನಾಂಕ 05-02-2020 ದು ರಾತ್ರಿವೇಳೆ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಜೂಜಾಡುತ್ತಿದ್ದ ಖಚಿತ ವರ್ತಮಾನದ ಮೇರೆಗೆ ಮಡಿಕೇರಿಯ ಜಿಲ್ಲಾ ಅಪರಾಧ ಗುಪ್ತಚರ ದಳದ ಪ್ರಭಾರ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯವರು ದಾಳಿ ನಡೆಸಿ ಪ್ರತ್ಯೇಕ ಕೊಠಡಿಗಳಲ್ಲಿ ಜೂಜಾಡುತ್ತಿದ್ದ ಒಟ್ಟು 19 ಜನ ಜೂಜುಕೋರರನ್ನು ಬಂಧಿಸಿ ಜೂಜಾಟಕ್ಕೆ ಬಳಸಿದ್ದ ಒಟ್ಟು 1,00,160ರೂ ನಗದು ಹಣವನ್ನು ವಶಪಡಿಸಿಕೊಂಡಿರುತ್ತಾರೆ. ದಸ್ತಗಿರಿ ಮಾಡಲಾದ 19 ಜನ ಆರೋಪಿಗಳಲ್ಲಿ ಬಹುತೇಕರು ನೆರೆಯ ಕೇರಳ ರಾಜ್ಯದವರಾಗಿದ್ದು  ಈ ಬಗ್ಗೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 04-02-2020 ರಂದು ಮಡಿಕೇರಿ ತಾಲ್ಲೂಕು ಜೋಡುಪಾಲ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-54-5634 ರ ಲಾರಿಯನ್ನು ಅದರ ಚಾಲಕ ಶಾಕಿರ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬರೆಗೆ ಡಿಕ್ಕಿಯಾಗಿದ್ದರಿಂದ ಲಾರಿ ಜಖಂಗೊಂಡು ಚಾಲಕ ಹಾಗೂ ಲಾರಿಯಲ್ಲಿದ್ದ ಇಬ್ರಾಹಿಂ ಹಾಗೂ ರಜಾಕ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಲಾರಿ ಮಾಲೀಕ ಇಬ್ರಾಹಿಂ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 04-02-2020 ರಂದು ಮಡಿಕೇರಿ ನಗರದ ಕೊಹಿನೂರು ರಸ್ತೆಯಲ್ಲಿ ಕೆ-12-ಎಂ8764 ರ ಕಾರನ್ನು ಅದರ ಚಾಲಕ ಪವನ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕೆಎ-12-ಕೆ-7487 ರ ಸ್ಕೂಟರ್ ಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ನಲ್ಲಿದ್ದ ವೈಷ್ಣವ್ ಎಂಬುವವರ ಕಾಲಿಗೆ ಗಾಯವಾಗಿದ್ದು ಈ ಬಗ್ಗೆ ಎಂ.ಪಿ ಕೃಷ್ಣ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

          ದಿನಾಂಕ: 27-01-2020 ರಂದು ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಗ್ರಾಮದ ಹೊಸೂರು ರಸ್ತ ನಿವಾಸಿ ಮುರುಳೀಧರ ಎಂಬುವವರ ವಿಳಾಸಕ್ಕೆ NAAPTAL SHOPPING PVT.Ltd ಕಂಪನಿಯಿಂದ ಒಂದು ಪತ್ರ ಬಂದಿದ್ದು ಅದರಲ್ಲಿದ್ದ SCRATCH CARD ನ್ನು ತೆಗೆದು ನೋಡಿದಾಗ ಅದರಲ್ಲಿ XUV 500 ಕಾರು ಲಾಟರಿ ಮೂಲಕ ಬಂದಿರುವುದಾಗ ಮಾಹಿತಿ ಇರುತ್ತದೆ. ಇದನ್ನು ಪರಿಶೀಲಿಸಲು ದೂರವಾಣಿ ಮೂಲಕ ಕಂಪನಿಯನ್ನು ಸಂಪರ್ಕಿಸಿದಾಗ ಕಾರಿನ ಟೆಂಪರರಿ ರಿಜಿಸ್ಟ್ರೇಶನ್ ಹಾಗೂ ಟ್ರಾನ್ಸ್ ಪೋರ್ಟ್ ಶುಲ್ಕವೆಂದು ಹೇಳಿ ಪ್ರತಾಪ್ ಗೋಲ್ಡರ್ ಎಂಬುವವರು ಖಾತೆಗೆ ಹಂತ ಹಂತವಾಗಿ ಒಟ್ಟು 78,600 ರೂ ನಗದನ್ನು ಜಮೆ ಮಾಡಿಸಿಕೊಂಡು ಕಾರನ್ನು ನೀಡದೇ , ವಾಪಾಸ್ಸು ಹಣವನ್ನು ಸಹ  ನೀಡದೇ ಮೋಸ ಮಾಡಿರುವುದಾಗಿ ರಾಘವೇಂದ್ರ ಹಾಗೂ ಪ್ರತಾಪ್ ಗೋಲ್ಡರ್ ಎಂಬುವವರ ವಿರುದ್ದ ಮುರಳೀಧರ್ ರವರು ದಿನಾಂಕ: 05-02-2020 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 04-02-2020 ರಂದು ಸೋಮವಾರಪೇಟೆ ತಾಲ್ಲೂಕು ಹಳೆಕೋಟೆ ಗ್ರಾಮದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕೆಎ-12-ಕೆ-9915 ರ ಬೈಕನ್ನು ಅದರ ಸವಾರ ಶಿವಣ್ಣ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತಿದ್ದ ಲೋಕೇಶ್ ಮತ್ತು ಕಾರ್ತಿಕ್ ಎಂಬುವವರಿಗೆ ಡಿಕ್ಕಿಪಡಿಸಿದ್ದರಿಂದ ಗಾಯಗೊಂಡಿದ್ದು ಈ ಬಗ್ಗೆ ರವಿಚಂದ್ರ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

          ದಿನಾಂಕ: 05-02-2020 ರಂದು ವಿರಾಜಪೇಟೆ ತಾಲ್ಲೂಕು ಕೊಂಗಣ, ಬಿ.ಶೆಟ್ಟಿಗೇರಿ ಗ್ರಾಮದ ನಿವಾಸಿಗಳಾದ ಭೀಮಯ್ಯ, ಡಿಪಿನ್ ಮತ್ತು ಜಗನ್ ಎಂಬುವವರು ನೀರಿಗೆ ಅಡ್ಡಲಾಗ ಕಟ್ಟೆಯನ್ನು ನಿರ್ಮಿಸಿದ ವಿಚಾರದಲ್ಲಿ ಪರಸ್ಪರ ಜಗಳ ಮಾಡಿ ಹಲ್ಲೆ ಮಾಡಿಕೊಂಡು ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ಶ್ರೀಮಂಗಲ ಠಾಣೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.