Crime News

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 06-02-2020 ರಂದು ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-12-ಬಿ-5573 ರ ಲಾರಿಯನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೇ ನಿರ್ಲಕ್ಷತೆಯಿಂದ ಬಲಕ್ಕೆ ತಿರುಗಿಸಿದ್ದರಿಂದ ಹಿಂಬದಿಯಿಂದ ಹೋಗುತ್ತಿದ್ದ ಕೆಎ-13-ವೈ-9399 ರ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ಶಿವಲಿಂಗ, ಲೋಕೇಶ, ಮಲ್ಲೇಶ ಎಂಬುವವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ದೊಡ್ಡಯ್ಯ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಒಎಲ್ ಎಕ್ಸ್ ವಂಚನೆ ಪ್ರಕರಣ

          ದಿನಾಂಕ:02-02-2020 ರಂದು ಮಡಿಕೇರಿ ತಾಲ್ಲೂಕು ಬಿಳಿಗೇರಿ ಗ್ರಾಮದ ನಿವಾಸಿ ಅಬ್ದುಲ್ ಕರೀಮ್ ಎಂಬುವವರು ಒಎಲ್ಎಕ್ಸ್ ನಲ್ಲಿ ಕೆಎ-04-ಎಂಯು-8902 ನೋಂದಣಿ ಸಂಖ್ಯೆಯ ಆಲ್ಟೋ 800 ಕಾರನ್ನು ನೋಡಿ ಮಂಜುನಾಥ ಎಂಬ ಹೆಸರಿನ ವ್ಯಕ್ತಿಯ ಜಾಹಿರಾತು ಗುರುತು ಸಂಖ್ಯೆ 1558840160 ಇರುವಿಕೆಯ ಬಗ್ಗೆ ಒಎಲ್ಎಕ್ಸ್ ಚಾಟ್ ಮೂಲಕ ಖಚಿತಪಡಿಸಿಕೊಂಡು ಕಾರು ಖರೀದಿಸಲು ನಿರ್ದರಿಸಿ ಹಂತ ಹಂತವಾಗಿ ತನ್ನ ದೂರವಾಣಿ ಸಂಖ್ಯೆಯಿಂದ ಗೂಗಲ್ ಪೇ ಮೂಲಕ 83,999 ರೂ ಹಣವನ್ನು ಸಂದಾಯ ಮಾಡಿದ್ದರು. ನಂತರ ಅಪರಿಚಿತ ವ್ಯಕ್ತಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸದೇ ವಾಹನವನ್ನು ಕಳುಹಿಸದೇ ಮೋಸ ಮಾಡಿದ್ದು ಈ ಬಗ್ಗೆ ಅಬ್ದುಲ್ ಕರೀಂ ರವರು ದಿನಾಂಕ: 06-02-2020 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 04-02-2020 ರಂದು ಮಡಿಕೇರಿ ತಾಲ್ಲೂಕು ಜೋಡುಪಾಲ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-54-5634 ರ ಲಾರಿಯನ್ನು ಅದರ ಚಾಲಕ ಶಾಕಿರ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬರೆಗೆ ಡಿಕ್ಕಿಯಾಗಿದ್ದರಿಂದ ಲಾರಿ ಜಖಂಗೊಂಡು ಚಾಲಕ ಹಾಗೂ ಲಾರಿಯಲ್ಲಿದ್ದ ಇಬ್ರಾಹಿಂ ಹಾಗೂ ರಜಾಕ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಲಾರಿ ಮಾಲೀಕ ಇಬ್ರಾಹಿಂ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 06-02-2020 ರಂದು ವಿರಾಜಪೇಟೆ ತಾಲ್ಲೂಕು ಬಿಟ್ಟಂಗಾಲ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-45-ಎಸ್-3994 ರ ಬೈಕನ್ನು ಅದರ ಸವಾರ ಸಯ್ಯದ್ ಅಫ್ಜಲ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಿಯಂತ್ರಣ ತಪ್ಪಿ  ರಸ್ತೆಗೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದು ಈ ಬಗ್ಗೆ ಅನೀಸ್ ಖಾನ್ ಎಂಬುವವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.