Crime News

ವ್ಯಕ್ತಿ ಆಕಸ್ಮಿಕ ಸಾವು

ಕೇರಳದ ಪಾಣತ್ತೂರು ನಿವಾಸಿ ಸತೀಶ್‌ ಎಂಬವರು ದಿನಾಂಕ 30/01/2020ರಂದು ಕರಿಕೆ ಬಳಿಯ ಚೆಂಬೇರಿ ಎಂಬಲ್ಲಿ ಮೂರ್ಚೆರೋಗ ಬಂದು ಕೆಳಗೆ ಬಿದ್ದು ತಲೆಗೆ ಪೆಟ್ಟಾದ ಕಾರಣ ಕಣ್ಣೂರು ಜಿಲ್ಲೆಯ ಪೆರಿಯಾರಿನ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 06/02/2020ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ ಪ್ರಕರಣ

ಮಡಿಕೇರಿ ನಗರದ ರಾಣಿಪೇಟೆ ನಿವಾಸಿ ಫಾರೂಕ್ ಪಾಷಾ ಎಂಬವರು ದಿನಾಂಕ 23/01/2020ರಂದು ಕುರಿಗಳ ವ್ಯಾಪಾರಕ್ಕೆಂದು ರಾಜಸ್ಥಾನಕ್ಕೆ ಹೋಗಿದ್ದು ದಿನಾಂಕ 31/01/2020ರಂದು ಕರೆ ಮಾಡಿ ತಾನು ಮುಂಬಯಿಯಲ್ಲಿ ಇರುವುದಾಗಿ ತಿಳಿಸಿದ್ದು ಇದುವರೆಗೂ ಮನೆಗೆ ಮರಳಿಬಂದಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 06/02/2020ರಂದು ಸೋಮವಾರಪೇಟೆ ಬಳಿಯ ಬಾಣಾವರ ನಿವಾಸಿ ಜಗದೀಶ ಎಂಬವರು ಅವರ ಬೈಕಿನಲ್ಲಿ ಹೋಗುತ್ತಿರುವಾಗ ಬಾಣಾವರದ ಮಕಾಡು ಹಾಡಿಯ ಬಳಿ ಎದುರಿನಿಂದ ಸಿದ್ದಲಿಂಗಪುರದ ಸತೀಶ್‌ ಎಂಬವರು ಅವರ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜಗದೀಶ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಜಗದೀಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಸಾವು

ವಿರಾಜಪೇಟೆ ಬಳಿಯ ಆರ್ಜಿ ನಿವಾಸಿ ವೈ.ಎಸ್.ಮುತ್ತಮ್ಮ ಎಂಬವರ ಮಗಳು ಅರ್ಪಿತಾ ಎಂಬವರು 06/02/2020ರಂದು ರಾಥ್ರಿ ಮನೆಯಲ್ಲಿ ಮಲಗಿದ್ದು ಮಾರನೇ ದಿನ ಬೆಳಿಗ್ಗೆ ಅರ್ಪಿತಾಳ ಗಂಡ ಮುನುರವರು ಮಗುವಿಗೆ ಹಾಲೂಡಿಸುವಂತೆ ಹೇಳಿ ಕರೆದಾಗ ಅರ್ಪಿತಾ ಮಾತನಾಡದೆ ಇದ್ದು ಪರಿಶೀಲಿಸಿದಾಗ ಮೃತಪಟ್ಟಿರುವುದಾಗಿದೆ. ಮೃತೆ ಅರ್ಪಿತಾ ಅಸತಮಾ ಕಾಯಿಲೆಯಿಂದ ಬಳಲುತ್ತಿದ್ದು ವಿಪರೀತ ಮದ್ಯವ್ಯಸನಿಬಯಾಗಿರುವ ಕಾರಣದಿಂದ ಮೃತರಾಗಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.