Crime News

ಕ್ಷುಲ್ಲಕ ಕಾರಣಕ್ಕೆ ಹಲ್ಲೆ:

ಮಡಿಕೇರಿ ತಾಲೋಕು, ಮದೆನಾಡು ಗ್ರಾಮದ ನಿವಾಸಿ ಹೆಚ್‍.ಆರ್‍. ಭುಜಂಗ ಎಂಬವರು ದಿನಾಂಕ 8-2-2020 ರಂದು ಮದೆನಾಡು ಗ್ರಾಮದಲ್ಲಿರುವ ತನ್ನ ತಮ್ಮನ ಕಾಫಿ ತೋಡದಿಂದ ಕಾಫಿ ನರ್ಸರಿ ಮಾಡುವ ಸಂಬಂಧ ಕಾಫಿ ಹಣ್ಣುಗಳನ್ನು ಕುಯ್ಯುತ್ತಿರುವಾಗ ತನ್ನ ತಮ್ಮ ಹಾಗು ಆತನ ಹೆಂಡತಿ ಅಲ್ಲಿಗೆ ಬಂದು ಕಾಫಿ ಹಣ್ಣುಗಳನ್ನು ಕುಯ್ಯುತ್ತಿರುವ ಬಗ್ಗೆ ಪ್ರಶ್ನಿಸಿದ್ದು ಇದರಿಂದ  ಇಬ್ಬರ ನಡುವೆ ಜಗಳವಾಗಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದುಕೊಂಡು ಪರಸ್ಪರ  ದೊಣ್ಣೆ ಕತ್ತಿಯಿಂದ ಹಲ್ಲೆ ಮಾಡಿಕೊಂಡುರುವ ಬಗ್ಗೆ ಉಭಯ ಕಡೆಯವರು ಪ್ರತ್ಯೇಕವಾಗಿ ನೀಡಿದ ದೂರುಗಳ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ್ಪರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.

ಕಾಡಾನೆ ದಾಳಿ ವ್ಯಕ್ತಿ ದುರ್ಮರಣ:

ಸಿದ್ದಾಪುರ ಠಾಣಾ ಸರಹದ್ದಿನ ಕರಡಿಗೋಡು ಗ್ರಾಮ ನಿವಾಸಿ ಎಸ್.ಪಿ. ಮಹೇಶ್  ಎಂಬವರ ತಂದೆ 69 ವರ್ಷ ಪ್ರಾಯದ ಎಸ್‍.ಆರ್‍. ಪೆಮ್ಮಯ್ಯ ಎಂಬವರು ದಿನಾಂಕ 7-2-2020 ರಂದು ಮಾಲ್ದಾರೆ ಗ್ರಾಮಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಾಡಾನೆಯೊಂದುದಾಳಿ ಮಾಡಿದ ಪರಿಣಾಮ ಸದರಿ ಪೆಮ್ಮಯ್ಯನವರು ಸಾವನಪ್ಪಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಚಾಚುವಿನಿಂದ ಇರಿದು ಕೊಲೆಗೆ ಯತ್ನ:

ದಿನಾಂಕ 8-2-2020 ರಂದು  ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರದ ನಿವಾಸಿ ಅಫೀಜ್ ಅಹಮ್ಮದ್ ಎಂಬವರು ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿ ತಮ್ಮ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವಾಗ್ಗೆ ಗಣೇಶ್ ಮೆಡಿಕಲ್ಸ್‍ ಮುಂಭಾಗ ಒಬ್ಬ ವ್ಯಕ್ತಿ ವಿನಾಕಾರಣ ಔಷಧಿ ಖರೀದಿಸುತ್ತಿರುವ ಒಬ್ಬ ಮಹಿಳೆಯನ್ನು ಬೈಯುತ್ತಿದ್ದು ಅದನ್ನು ಅಫೀಜ್‍ ಅಹಮ್ಮದ್ ನವರು ವಿಚಾರಿಸಿದ ಕಾರಣಕ್ಕೆ ಸದರಿ ವ್ಯಕ್ತಿ ಹರೀಶ್ ಎಂಬಾತ ತನ್ನ ಕೈಯಲ್ಲಿದ್ದ ಚಾಕುವಿನಿಂದ ಅಫೀಜ್‍ರವರ ಹೊಟ್ಟೆಯ ಭಾಗಕ್ಕೆ ಕೊಲೆ ಮಾಡುವ ಉದ್ದೇಶದಿಂದ ಚುಚ್ಚಿ ಗಾಯಪಡಿಸಿದ್ದು ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆಗೆ ನುಗ್ಗಿ ಚಿನ್ನಾಭರಣ ಕಳವು:

ದಿನಾಂಕ 07-02-2020 ರಂದು ಸಂಜೆ 08-15 ಗಂಟೆಗೆ ವಿರಾಜಪೇಟೆ ಸಮೀಪದ ಆರ್ಜಿಗ್ರಾಮದ ನಿವಾಸಿ ಬಿ.ಪಿ.ಪವನ್  ತಮ್ಮ ಸಂಸಾರ ಸಮೇತ ಸಂಬಂಧಿಕರ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಪುತ್ತೂರಿಗೆ ಹೋಗಿದ್ದು, ಈ ದಿನ ದಿನಾಂಕ 08-02-2020 ರಂದು ಸಂಜೆ 08-30 ಗಂಟೆಗೆ ವಾಪಾಸ್ಸು ಮನೆಗೆ ಬಂದು ಮನೆಗೆ ಹಾಕಿದ್ದ ಬೀಗವನ್ನು ತೆರೆದು ಒಳಗೆ ಹೋಗಿ ಮನೆಯ ಬೆಡ್ ರೂಮಿನಲ್ಲಿ ನೋಡಿದಾಗ ಬೆಡ್ ರೂಮಿನಲ್ಲಿದ್ದ ಬೀರುಗಳನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿದ್ದು, ಬಟ್ಟೆ ಬರೆಗಳನ್ನು ತೆಗೆದು ನೆಲದ ಮೇಲೆ ಮತ್ತು ಮಂಚದ ಮೇಲೆ ಹಾಕಿದ್ದು, ಬೀರುವಿನಲ್ಲಿದ್ದ ಲಾಕರ್ ನಲ್ಲಿಟ್ಟದ್ದ ಸುಮಾರು 3,80,000/- ರೂ ಮೌಲ್ಯದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಮನೆಯ ಮೇಲ್ಚಾವಣಿಯ ಹಂಚನ್ನು ತೆಗೆದು ಒಳಪ್ರವೇಶಿಸಿ ಕಳ್ಳತನ ಮಾಡಿ ನಂತರ ಮನೆಯ ಹಿಂಭಾಗಿಲನ್ನು ತೆರೆದು ಹೊರ ಹೋಗಿದ್ದು ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ಅಪರಿಚಿತ ವ್ಯಕ್ತಿ ಆತ್ಮಹತ್ಯೆ:

ಗೋಣಿಕೊಪ್ಪ ಠಾಣಾ ಸರಹದ್ದಿನ ಗೋಣಿಕೊಪ್ಪ ನಗರದ ಕೆ.ಇ.ಬಿ.ಕಛೇರಿಯ ಹತ್ತಿರ ವಾಸವಾಗಿರುವ ಎ.ಯು.ಸುಬೇರ್‍  ಎಂಬವರಿಗೆ ದಿನಾಂಕ 8-2-2020 ರಂದು  ಅವರ ಮನೆಯ ಪಕ್ಕದಲ್ಲಿ ಮರವೊಂದಕ್ಕೆ ಅಪರಿಚಿತ ವ್ಯಕ್ತಿಯೋರ್ವ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಇರುವುದು  ಕಂಡು ಬಂದ ಬಗ್ಗೆ ಮಾಹಿತಿಯನ್ನು ಗೋಣಿಕೊಪ್ಪ ಠಾಣೆಗೆ ವರದಿಯನ್ನು ನೀಡಿದ್ದು ಅದರಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕ್ ಅಪಘಾತ

ದಿನಾಂಕ 8-2-2020 ರಂದು ಶ್ರೀಮಂಗಲ ಠಾಣಾ ಸರಹದದಿನ ಕೋಂಗೇರಿ ಗ್ರಾಮದ ಕೆ.ಕೆ. ಕಿರಣ‍್ ಎಂಬವರ ಮಗ ಕೆ.ಕೆ. ಸೋಮಣ್ಣ ಎಂಬವರು ಹೈಸೊಡ್ಲೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಮೋಟಾರ್‍ ಸೈಕಲ್‍ ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ರಸ್ತೆಯ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದು, ಈ ಸಂಬಂಧ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ತೋಳೂರುಶೆಟ್ಟಳ್ಳಿ ಗ್ರಾಮದದ ನಿವಾಸಿ ಹರೀಶ್ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 8-2-2020 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಮೃತರ ಪತ್ನಿ ಟಿ.ಹೆಚ್. ಅನಿತ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‍ಗಳ ಮುಖಾಮುಖಿ ಡಿಕ್ಕಿ ಮೃತಪಟ್ಟ ಸವಾರ:

ದಿನಾಂಕ 6-2-2020 ರಂದು ಸೋಮವಾರಪೇಟೆ ಠಾಣಾ ಸರಹದ್ದಿನ ಬಾಣಾವರ ಗ್ರಾಮದ ನಿವಾಸಿ ರಾಜೇಶ್‍ ಎಂಬವರು ಬಿ.ಸಿ. ಜಗದೀಶ್‍ ರವರೊಂದಿಗೆ ಬುಲೆಟ್‍ ಮೋಟಾರ್‍ ಸೈಲಿನಲ್ಲಿ  ಬಾಣವಾರದ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಮೋಟಾರ್‍ ಸೈಕಲ್ ಹಾಗು ರಾಜೇಶ್‍ ರವರು ಚಲಾಯಿಸುತ್ತಿದ್ದ ಮೇಟಾರ್‍ ಸೈಕಲ್‍ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಎರಡೈ ಬೈಕಿನಲ್ಲಿದ್ದವರು ಗಾಯಗೊಂಡು  ಚಿಕಿತ್ಸೆ ಸಮಯದಲ್ಲಿ ಬುಲೆಟ್‍ ಸವಾರ ರಾಜೇಶ್‍ರವರು ಮೃತಪಟ್ಟಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಕಣ ದಾಲಾಗಿದೆ.