Crime News

ಹಲ್ಲೆ ಪ್ರಕರಣ

          ದಿನಾಂಕ: 07-02-2020 ರಂದು ಸೋಮವಾರಪೇಟೆ ತಾಲ್ಲೂಕು ಉಲುಗುಲಿ ಗ್ರಾಮದ ಜನತಾ ಕಾಲೋನಿ ನಿವಾಸಿ ಶ್ರೀಮತಿ ಮಮತ ಎಂಬುವವರಿಗೆ ಅವರ ಪಕ್ಕದ ಮನೆಯ ನಿವಾಸಿ ಪ್ರಶಾಂತ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಮಮತ ರವರು ನೀಡಿದ ಪುಕಾರಿನ  ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

          ದಿನಾಂಕ: 08-02-2020 ರಂದು ಬೆಳಿಗ್ಗೆ ಸೋಮವಾರಪೇಟೆ ತಾಲ್ಲೂಕು ಕಣ್ಣಾರಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಲಕ್ಷ್ಮಮ್ಮ ಎಂಬುವವರು ಅವರ ಸೊಸೆಯೊಂದಿಗೆ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿ ಸಂಜೆ ವಾಪಾಸ್ಸು ಬಂದು ನೋಡಿದಾಗ ಯಾರೋ ಕಳ್ಳರು ಮನೆಯೊಳಗಿದ್ದ ಗಾಡ್ರೆಜ್ ಬೀರು ಲಾಕರ್ ಮುರಿದು ಅದರಲ್ಲಿ ಇಟ್ಟಿದ್ದ 8,000 ರು ನಗದು ಹಣ ಮತ್ತು 16,000 ರೂ ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

          ದಿನಾಂಕ: 08-02-2020 ರಂದು ಬೆಳಿಗ್ಗೆ ಸೋಮವಾರಪೇಟೆ ತಾಲ್ಲೂಕು ಅವರೆದಾಳು ಗ್ರಾಮದ ನಿವಾಸಿ ಶ್ರೀಮತಿ ಶಾಂತ  ಎಂಬುವವರು ಮನೆಗೆ ಬೀಗ ಹಾಕಿಕೊಂಡು ಸೋಮವಾರಪೇಟೆಗೆ ಹೋಗಿ ಸಂಜೆ ವಾಪಾಸ್ಸು ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಸ್ನಾಹ ಗೃಹದ ಬಳಿ ಇಟ್ಟಿದ್ದ ಮನೆಯ ಬೀಗದ ಕೀಲಿ ತೆಗೆದುಕೊಂಡು ಮನೆಯ ಬೀಗ ತೆಗೆದು ಒಳನುಗ್ಗಿ ಮನೆಯೊಳಗೆ ಟಿವಿ ಮೇಲೆ ಇಟ್ಟಿದ್ದ 24,000 ರೂ ಮೌಲ್ಯದ ಚಿನ್ನಾಭರಣ ಕಳವು ಮಾಡಿ ಮನೆಗೆ ಪುನಃ ಬೀಗ ಹಾಕಿ ಕೀಲಿಯನ್ನು ಸ್ನಾಹಗೃಹದ ಕಿಟಕಿಯಲ್ಲಿ ಇಟ್ಟು ಹೋಗಿದ್ದು ಈ ಬಗ್ಗೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಬಾಲಕ ಸಾವು

          ದಿನಾಂಕ: 09-02-2020 ರಂದು ಸೋಮವಾರಪೇಟೆ ತಾಲ್ಲೂಕು ಕೂಡ್ಲೂರು ಗ್ರಾಮದ ಬಸವೇಶ್ವರ ಬಡಾವಣೆ ನಿವಾಸಿ ರವಿ ಎಂಬುವವರ ಮಗ ಮನೆಯಿಂದ ಸ್ವಲ್ಪ ದೂರದಲ್ಲಿರುವ ಹಳೆಯ ಕಲ್ಲುಕೋರೆಯಲ್ಲಿ ತುಂಬಿದ್ದ ನೀರಿನಲ್ಲಿ ಸ್ನಾನ ಮಾಡುತ್ತಿರುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದು ಕೂಡಲೇ ವಿಚಾರ ತಿಳಿದ ರವಿಯವರು ಬಾಲಕನನ್ನು ಮೇಲಕ್ಕೆತ್ತಿ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು ಈ ಬಗ್ಗೆ ರವಿ ರವರು ನೀಡಿದ ದೂರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ದೇವಾಲಯ ಹುಂಡಿ ಹಣ ಕಳವು ಪ್ರಕರಣ

          ದಿನಾಂಕ: 08-02-2020 ರಂದು ಮಡಿಕೇರಿ ನಗರದಲ್ಲಿರುವ ಶ್ರೀ ಓಂಕಾರೇಶ್ವರ ದೇವಾಲಯದ ಕಾಣಿಕೆ ಹುಂಡಿಯ ಹಣವನ್ನು ಯಾರೋ ಕಳ್ಳರು ಎರಡು ಕಬ್ಬಿಣದ ತಂತಿಯ ತುದಿಗೆ ಅಂಟು ಬಳಸಿ ಹುಂಡಿಯೊಳಗಿಂದ ಹಣ ಕಳವು ಮಾಡಿದ್ದು ಈ ಬಗ್ಗೆ ದೇವಾಲಯ ನೌಕರರಾದ ಅರುಣ ಎಂಬುವವರು ನೀಡಿದ ಪುಕಾರಿನ  ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 09-02-2020 ರಂದು ಮಡಿಕೇರಿ ತಾಲ್ಲೂಕು ಮೊಣ್ಣಂಗೇರಿ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-21-ಪಿ-6055 ರ ಮಹಿಂದ್ರಾ ಜೀಪನ್ನು ಅದರ ಚಾಲಕ ಉಸ್ಮಾನ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆಎ-51-ಎನ್-4685 ರ ಆಲ್ಟೋ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಹಾಗೂ ಜೀಪು ಜಖಂಗೊಂಡು ಕಾರಿನಲ್ಲಿದ್ದ ಸುರೇಶ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಆತ್ಮಹತ್ಯೆ

          ದಿನಾಂಕ: 09-02-2020 ರಂದು ಸೋಮವಾರಪೇಟೆ ಪಟ್ಟಣದ ಚೌಡ್ಲು ಗ್ರಾಮದ ಆಲೆಕಟ್ಟೆ ರಸ್ತೆ ನಿವಾಸಿ ರಾಮನ್ ಕುಟ್ಟಿ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದು ಈ ಬಗ್ಗೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದು ಈ ಬಗ್ಗೆ ಮೃತರ ಮಗ ವಿನೋದ್ ಎಂಬುವವರು ನೀಡಿದ ದೂರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.