Crime News

ಕಳ್ಳತನ ಪ್ರಕರಣ ಪತ್ತೆ, ಆರೋಪಿಗಳ ಬಂಧನ:

ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಳಿಗೇರಿ ಗ್ರಾಮದಲ್ಲಿ ಮನೆಯ ಬೀಗ ಒಡೆದು ಕಳವು ಮಾಡಿದ್ದ ಆರೋಪಿಗಳನ್ನು ಬಂದಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದಿನಾಂಕ 11-11-2019 ರಂದು ರಾತ್ರಿ ಬಿಳಿಗೇರಿ ಗ್ರಾಮದಲ್ಲಿ ತಮ್ಮ ಕೆಲಸಗಳ ನಿಮಿತ್ತ ಮನೆಗೆ ಬೀಗ ಹಾಕಿ ತೆರಳಿದ್ದ ಸಂದರ್ಭ, ರಾತ್ರಿವೇಳೆಯಲ್ಲಿ ಸದರಿ ಮನೆಗಳನ್ನು ಬೀಗ ಹೊಡೆದು ಕಳವು ಮಾಡಿದ 2 ಪ್ರಕರಣಗಳು ದಾಖಲಾಗಿದ್ದು, ಸದರಿ ಪ್ರಕರಣವನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಸಿಪಿಐ ಸೋಮವಾರಪೇಟೆ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿ, ಮಾನ್ಯ ಪೊಲೀಸ್ ಅಧೀಕ್ಷಕರು ಹಾಗೂ ಸೋಮವಾರಪೇಟೆ ಉಪಾಧೀಕ್ಷಕರು ರವರು ಸೂಚನೆಗಳನ್ನು ನೀಡಿದ್ದು, ಅದರಂತೆ ಕಾರ್ಯಪ್ರವೃತ್ತರಾದ ಸಿಪಿಐ ಸೋಮವಾರಪೇಟೆ ರವರ ತಂಡ ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಿ ಆರೋಪಿಗಳನ್ನು ಬಿಳಿಗೇರಿ ಹಾಗೂ ಶಿವಮೊಗ್ಗದಲ್ಲಿ ಬಂದಿಸುವಲ್ಲಿ ಯಶಸ್ವಿಯಾಗಿದೆ.

ದಸ್ತಗಿರಿ ಮಾಡಲಾದ ಆರೋಪಿಯ ವಿವರ :

(1). ಸತೀಶ @ ಸತಿ ತಂದೆ ಲೇ|| ಮಣಿ, 32 ವರ್ಷ, ಕೂಲಿ ಕೆಲಸ, ಕಾಜೂರು ಗ್ರಾಮ ಸುಭದ್ರ ಗಂಡ ರಾಜು ರವರ ತೋಟದಲ್ಲಿ ಕೂಲಿ ಕೆಲಸ, ಐಗೂರು, ಸೋಮವಾರಪೇಟೆ. (2). ಕಿರಣ್.ಎಸ್ ತಂದೆ ಸುರೇಶ್, 23 ವರ್ಷ, ಡ್ರೈವರ್ ಕೆಲಸ, ಜಲ್ಲಿ ಕ್ರಷರ್ ಮುಂಭಾಗ, ಎ ಬ್ಲಾಕ್, ಬೊಮ್ಮನಕಟ್ಟೆ, ಶಿವಮೊಗ್ಗ. (3). ಚಂದ್ರಶೇಖರ.ಕೆ @ ಚಂದು @ ಚಂದ್ರು ತಂದೆ ಕೃಷ್ಣಪ್ಪ, 23 ವರ್ಷ, ಡ್ರೈವರ್ ಕೆಲಸ, ತೊಪ್ಪಿನಗಟ್ಟ, 2 ನೇ ಕ್ರಾಸ್, ಹರಿಗೆ ಗ್ರಾಮ, ಶಿವಮೊಗ್ಗ.

ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಕಳವು ಮಾಲಿನ ವಿವರ : (1) 96 ಗ್ರಾಂ ತೂಕದ ಚಿನ್ನಾಭರಣ ಬೆಲೆ ಸುಮಾರು 3,64,800/- (2) 128 ಗ್ರಾಂ ತೂಕದ ಬೆಳ್ಳಿ ಸಾಮಾಗ್ರಿಗಳು ಬೆಲೆ ಸುಮಾರು 5,760 (3). 1 ಮೊಬೈಲ್ (4). ಕೃತ್ಯಕ್ಕೆ ಉಪಯೋಗಿಸಿದ ಸ್ಪ್ಲೆಂಡರ್ ಬೈಕ್ (5). ಮನೆ ಬೀಗ ಒಡೆಯಲು ಬಳಸಿದ್ದ 2 ಕಬ್ಬಿಣದ ರಾಡನ್ನು ವಶಪಡಿಸಿಕೊಳ್ಳಲಾಗಿದೆ. ಸದರಿ ಪ್ರಕರಣವನ್ನು ಡಾ|| ಸುಮನ್.ಡಿ.ಪಿ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಹಾಗೂ ಶ್ರೀ. ಹೆಚ್.ಎಂ. ಶೈಲೇಂದ್ರ ಉಪಾಧೀಕ್ಷಕರು ಸೋಮವಾರಪೇಟೆ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ. ನಂಜುಂಡೇಗೌಡ, ಸಿಪಿಐ ಸೋಮವಾರಪೇಟೆ ವೃತ್ತ ರವರ ನೇತೃತ್ವದಲ್ಲಿ, ಶ್ರೀ. ಶಿವಶಂಕರ್ ಪಿಎಸ್ಐ ಸೋಮವಾರಪೇಟೆ ಪೊಲೀಸ್ ಠಾಣೆ, ಶ್ರೀ. ವಿರೂಪಾಕ್ಷ, ಪಿಎಸ್ಐ ಅಪರಾಧ ಸೋಮವಾಪೇಟೆ ಪೊಲೀಸ್ ಠಾಣೆ, ಸಿಬ್ಬಂದಿಯವರಾದ ಶ್ರೀ. ಮಧು, ಶ್ರೀ. ಟಿ.ಎಸ್.ಸಜಿ, ಶ್ರೀ. ಪ್ರವೀಣ್.ಎಸ್. ಶ್ರೀ. ನವೀನ್ ಕುಮಾರ್, ಶ್ರೀ. ಜಗಧೀಶ, ಶ್ರೀ. ಮಂಜುನಾಥ, ಚಾಲಕರಾದ ಶ್ರೀ. ಕುಮಾರ್ ಹಾಗೂ ಕುಶಾಲನಗರ ಉಪವಿಭಾಗದ ಕ್ರೈಂ ಕರ್ತವ್ಯದ ಸಿಬ್ಬಂದಿಗಳಾದ ಶ್ರೀ. ಬಿ.ಎಸ್. ದಯಾನಂದ, ಶ್ರೀ. ಸಂದೇಶ್.ಎಸ್.ಎಸ್, ಶ್ರೀ. ಪ್ರಕಾಶ್, ಕೊಡಗು ಜಿಲ್ಲಾ ಸಿಡಿಆರ್ ಸೆಲ್ನ ಸಿಬ್ಬಂದಿಗಳಾದ ಶ್ರೀ. ರಾಜೇಶ್, ಶ್ರೀ. ಗಿರೀಶ್ ರವರ ಪರಿಶ್ರಮದಲ್ಲಿ ಭೇಧಿಸಿದ್ದು, ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಪ್ರಕರಣವನ್ನು ಭೇದಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿ, ನಗದು ಬಹುಮಾನವನ್ನು ಘೋಷಸಿರುತ್ತಾರೆ. ಕೊಡಗು ಜಿಲ್ಲೆಯ ಸಾರ್ವಜನಿಕರು ಬೇರೆ ಊರುಗಳಿಗೆ ತೆರಳುವ ಸಂದರ್ಭ ಯಾವುದೇ ಬೆಲೆ ಬಾಳುವ ಚಿನ್ನಾಭರಣಗಳನ್ನು ಮನೆಯಲ್ಲಿಡಬಾರದೆಂದು ಹಾಗೂ ಹಾಗೆ ತೆರಳುವ ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿ ಪರಿಚಯಸ್ಥರನ್ನು ಉಳಿದುಕೊಳ್ಳುವ ಬಗ್ಗೆ ನೋಡಿಕೊಂಡು ಇಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಕೋರಿಕೆ.

ಅಕ್ರಮ ಗಾಂಜಾ ಮಾರಾಟ ಪ್ರಕರಣ

          ದಿನಾಂಕ: 10-02-2020 ರಂದು ಮಡಿಕೇರಿ ತಾಲ್ಲೂಕು ಕುಂಜಿಲ ಗ್ರಾಮದ ಬಳಿ ಇಗ್ಗುತಪ್ಪ ರಸ್ತ ಬದಿಯಲ್ಲಿ ಕುಂಜಿಲ ಗ್ರಾಮದ ನಿವಾಸಿ ಆಶ್ರಫ್ ಎಂಬುವವರು ತನ್ನ ಕೆಎ-12-ಎ-7376 ರ ಟಾಟಾ ಏಸ್ ವಾಹನದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ನಾಪೋಕ್ಲು ಠಾಣೆಯ ಪಿಎಸ್ಐ ಆರ್. ಮಂಚಯ್ಯ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಆಶ್ರಪ್ ರವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

          ದಿನಾಂಕ: 09-02-2020 ರಂದು ವಿರಾಜಪೇಟೆ ತಾಲ್ಲೂಕು ಅಮ್ಮತ್ತಿ ಕಾವಾಡಿ ಗ್ರಾಮದ ನಿವಾಸಿ ಸತೀಶ್ ಎಂಬುವವರಿಗೆ ಆತನ ಅಣ್ಣ ಅಯ್ಯಪ್ಪ ಎಂಬುವವರು ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಹೊಡೆದು ಮಾರಾಣಾಂತಿಕ ಹಲ್ಲೆ ಮಾಡಿದ್ದು ಈ ಬಗ್ಗ ಸತೀಶ್ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.