Crime News

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 11-02-2020 ರಂದು ಮಡಿಕೇರಿ ತಾಲ್ಲೂಕು ಭಾಗಮಂಡಲ ಗ್ರಾಮದ ತಲಕಾವೇರಿ ರಸ್ತೆಯಲ್ಲಿ ರಾಜಶೇಖರ ಶೆಟ್ಟಿ ಎಂಬುವವರು ಅವರ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಬರೆಗೆ ಡಿಕ್ಕಿಯಾಗಿ ಕಾರು ಜಖಂಗೊಂಡು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ, ಕೃಷ್ಣಪ್ರಸಾದ್ ಹಾಗೂ ವಿಶ್ವನಾಥ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ದೀಕ್ಷಿತ್ ಎಂಬುವವರು ನೀಡಿದ ದೂರಿನ ಮೇರೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

          ದಿನಾಂಕ: 11-02-2020 ರಂದು ಮಡಿಕೇರಿ ತಾಲ್ಲೂಕು ಭಾಗಮಂಡಲ ಗ್ರಾಮದ ತಲಕಾವೇರಿ ರಸ್ತೆಯ ಬದಿಯ ಬರೆಗೆ ಕಾರು ಡಿಕ್ಕಿಯಾಗಿ ಅದರಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದರು. ಅಲ್ಲಿಯೇ ಇದ್ದ ಚೇರಂಗಾಲ ಗ್ರಾಮದ ನಿವಾಸಿ ಕೃಷ್ಣ ಎಂಬುವವರು ಗಾಯಗೊಂಡಿದ್ದ ಪ್ರಯಾಣಿಕರಿಗೆ ಪಕ್ಕದಲ್ಲಿಯೇ ಇದ್ದ ದೇವರಾಜ ಎಂಬುವವರ ಮನೆಯ ನೀರಿನ ಪೈಪ್ ನಿಂದ ನೀರನ್ನು ತೆಗೆದು ಗಾಯಾಳುಗಳಿಗೆ ನೀಡಿ ಉಪಚರಿಸುತ್ತಿದ್ದಾಗ ದೇವರಾಜರವರು ಅಲ್ಲಿಗೆ ಹೋಗಿ ಅವರ ಪೈಪ್ ನಿಂದ ನೀರನ್ನು ತೆಗೆದುಕೊಂಡ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಪದಗಳಿಂದ ಬೈದು ಕೃಷ್ಣ ರವರಿಗೆ ಕಲ್ಲಿನಿಂದ ಹೊಡೆದು ಗಾಯಪಡಿಸಿದ್ದು ಈ ಬಗ್ಗೆ ಮೋಹನ್ ಚಂದ್ರ ಎಂಬುವವರು ನೀಡಿದ ಪುಕಾರಿನ ಮೇರೆ ಭಾಗಮಂಡಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್ ಕಳವು ಪ್ರಕರಣ

          ಸೋಮವಾರಪೇಟೆ ತಾಲ್ಲೂಕು ಯರಪಾರೆ ಗ್ರಾಮದ ನಿವಾಸಿ ಅನಿಲ್ ಕುಮಾರ್ ಎಂಬುವರು ದಿನಾಂಕ: 09-02-2020 ರಂದು ಮಧ್ಯಾಹ್ನ ಅವರ ಬಜಾಜ್ ಪಲ್ಸರ್ ಬೈಕನ್ನು ಸೋಮವಾರಪೇಟೆ ಪಟ್ಟಣದಲ್ಲಿರುವ ಜೂನಿಯರ್ ಕಾಲೇಜು ವಾಹನ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿದ್ದು ನಂತರ ಸಂಜೆ ವಾಪಾಸ್ಸು ಹೋಗಿ ನೋಡಿದಾಗ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಅನಿಲ್ ಕುಮಾರ್ ರವರು ದಿ: 11-02-2020 ರಂದು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ ಪ್ರಕರಣ

          ದಿನಾಂಕ: 30-12-2020 ರಂದು ವಿರಾಜಪೇಟೆ ತಾಲ್ಲೂಕು ಅರವತ್ತೊಕ್ಲು ಗ್ರಾಮದ ನಿವಾಸಿ ಎಂ.ಎ ಬಾಬು ಎಂಬುವವರು ಪೆಯಿಂಟಿಂಗ್ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಅವರ ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಬಂದಿರುವುದಿಲ್ಲ. ನೆಂಟರಿಷ್ಟರ ಮನೆ ಹಾಗೂ ಇತರ ಕಡೆಗಳಲ್ಲಿ ಹುಡುಕಿದರೂ ಸಹಾ ಈ ವರೆಗೂ ಮನೆಗೆ ಬಾರದೇ  ಕಾಣೆಯಾಗಿದ್ದು ಈ ಬಗ್ಗೆ ಅವರ ಪತ್ನಿ ನೀಡಿದ ದೂರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.