CRime News

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 13-02-2020 ರಂದು ಸೋಮವಾರಪೇಟೆ ತಾಲ್ಲೂಕು ಗುಮ್ಮನಕೊಲ್ಲಿ ಗ್ರಾಮದ ಬಳಿ ಹೆದ್ದಾರಿ ರಸ್ತೆ ಯಲ್ಲಿ ಕೆಎ-12-ಆರ್-2575 ರ ಬೈಕನ್ನು ಅದರ ಸವಾರ ಮಧುಚಂದ್ರ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪ್ಪಾಜಿ ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಹಾಗೂ ಪಾದಚಾರಿ ಗಾಯಗೊಂಡಿದ್ದು ಈ ಬಗ್ಗೆ ಅಪ್ಪಾಜಿ ರವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

          ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಗ್ರಾಮದ ನಿವಾಸಿ ಶ್ರೀಮತಿ ನೀತುಚಂದ್ರ ಎಂಬುವವರು 2018ನೇ ಡಿಸೆಂಬರ್ ತಿಂಗಳಿನಲ್ಲಿ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಕಛೇರಿ ಹೊಂದಿದ್ದ ಕೇರಳ ರಾಜ್ಯದ ತಿರುವನಂತಪುರ ಮೂಲದ ಒಮೇಗ 3-6 ಎಂಬ ಕಂಪನಿಯೊಂದಿಗೆ ಕೋಳಿ ಸಾಕಾಣಿಕೆ ಹಾಗೂ ಮೊಟ್ಟೆ ಉತ್ಪಾದನೆ ಸಂಬಂಧ ಒಪ್ಪಂದ ಮಾಡಿಕೊಂಡು 5,00,000 ರೂ, ಹಣ ಪಾವತಿಸಿ ಕೋಳಿ ಸಾಕಾಣಿಕೆ ಮಾಡಿಕೊಂಡಿದ್ದರು. ನಂತರದ ದಿನಗಳಲ್ಲಿ ಕಂಪನಿಯವರು ಸತ್ತುಹೋದ ಕೋಳಿಗಳಿಗೆ ವಿಮೆ ಹಣ ನೀಡದೇ ಇದ್ದುದರಿಂದ ಕಂಪನಿಯವರನ್ನು ಭೇಟಿಯಾಗಿ ವಿಚಾರಿಸಿ ದಿನಾಂಕ: 13-09-2019 ರಂದು ಒಪ್ಪಂದ ರದ್ದು ಮಾಡಿಕೊಂಡಿದ್ದು ದಿನಾಂಕ: 13-12-2019 ರಂದು ಹಣ ನೀಡುವುದಾಗಿ ಹೇಳಿದ್ದರು. ನಂತರ ಕಂಪನಿಯವರು ಹಣ ವಾಪಾಸ್ಸು ನೀಡದೇ ವಂಚನೆ ಮಾಡಿದ್ದು ಒಮೇಗಾ 3-6 ಕಂಪನಿಯ ಪ್ರಮೋದ್ ಎಸ್.ಎಲ್ ಮತ್ತು ತರರ ವಿರುದ್ದ ದಿನಾಂಕ: 14-02-2020 ರಂದು ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆತ್ಮಹತ್ಯೆ ಪ್ರಕರಣ

          ದಿನಾಂಕ: 14-02-2020 ರಂದು ಸೋಮವಾರಪೇಟೆ ತಾಲ್ಲೂಕು ಹಾರಂಗಿ ಜಲಾಶಯದ ಹಿನ್ನೀರಿಗೆ ಬಿದ್ದು ಯುವಕ ಹಾಗೂ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ಮೂಲದ ಸಚಿನ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದು ಯುವತಿಗೆ ಬೇರೆಯವರೊಂದಿಗೆ ವಿವಾಹ ನಿಶ್ಚಯವಾಗಿದ್ದರಿಂದ ಬೇಸರಗೊಂಡು ಇಬ್ಬರೂ ಸಹಾ ಜಲಾಶಯದ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಯುವತಿಯ ತಾಯಿ ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.