Crime News
ಹಲ್ಲೆ ಪ್ರಕರಣ
ದಿನಾಂಕ 09/02/2020ರಂದು ಪೊನ್ನಂಪೇಟೆ ಬಳಿಯ ಬೆಸಗೂರು ನಿವಾಸಿ ಪೊನ್ನಿಮಾಡ ಸುಶೀಲ ಎಂಬವರ ಮೇಯಲು ಬಿಟ್ಟ ಹಸುವೊಂದು ಅವರ ಗ್ರಾಮದ ನಿವಾಸಿ ಅನಿತಾ ಎಂಬವರ ಗದ್ದೆಯಲ್ಲಿ ಮೇಯುತ್ತಿದ್ದು ಅದನ್ನು ಅನಿತಾ, ತಮ್ಮಯ್ಯ ಮತ್ತು ಶಿವಪ್ಪ ಎಂಬವರು ಸೋಮಯ್ಯ ಎಂಬವರ ಕಣದಲ್ಲಿ ಕಟ್ಟಿ ಹಾಕಿ ಹೊಡೆಯುತ್ತಿದ್ದುದನ್ನು ಕೇಳಲು ಹೋದ ಸುಶೀಲರವರಿಗೆ ಅನಿತಾ, ತಮ್ಮಯ್ಯ ಮತ್ತು ಶಿವಪ್ಪರವರು ಸೇರಿ ಕೈ ಹಾಗೂ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕೆಳಗೆ ಬಿದ್ದು ವ್ಯಕ್ತಿ ಸಾವು
ದಿನಾಂಕ 08/02/2020ರಂದು ಕುಟ್ಟ ಬಳಿಯ ಬೆನ್ ಹೋಂ ಸ್ಟೇ ಎಸ್ಟೇಟಿನ ನಿವಾಸಿ ಮುರುಗಯ್ಯ ಎಂಬವರು ಬೆಳಗಿನ ಜಾವ ಶೌಚಾಲಯಕ್ಕೆ ಹೋಗಲೆಂದು ಲೈಟಿನ ಸ್ವಿಚ್ ಹಾಕುವಾಗ ಆಯತಪ್ಪ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 14/02/2020ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.