Crime News

ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸಿದ ಅಪರಾಧಿಗಳಿಗೆ ಶಿಕ್ಷೆ:

          ದಿನಾಂಕ: 07-07-2016 ರಂದು ಮಡಿಕೇರಿ ಸಂಚಾರ ಠಾಣೆ ಪಿ.ಎಸ್.ಐ ಆಗಿದ್ದ ಸಂತೋಷ್ ಕಶ್ಯಪ್ ರವರು ಸಿಬ್ಬಂದಿಯವರೊಂದಿಗೆ ನಗರ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಮಡಿಕೇರಿ ನಗರದ ಶಾಂತಿ ಚರ್ಚ್ ಮುಂಭಾಗ ಕೆಎ-12-9773 ರ ಆಟೋರಿಕ್ಷಾದಲ್ಲಿ ಸುಂದರ್ ರಾಜ್ ಮತ್ತು ನವೀನ್ ಎಂಬುವವರು 28 ಗಾಂಜಾ ಪ್ಯಾಕ್ ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಇಟ್ಟುಕೊಂಡಿದ್ದ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳ ವಿರುದ್ದ ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮಡಿಕೇರಿ ನಗರ ಠಾಣೆ ಪಿಎಸ್ಐ ರವರು ತನಿಖೆ ನಡೆಸಿ ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.           ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜೆ.ಎಂ.ಎಫ್ ಸಿ ನ್ಯಾಯಲಯವು ಆರೋಪಿಗಳ ವಿರುದ್ದ ರೋಪ ಸಾಬೀತಾಗಿದ್ದರಿಂದ ದಿನಾಂಕ: 19-02-2020 ರಂದು ಅಪರಾಧಿಗಳಿಗೆ ಆರು ತಿಂಗಳು ಕಠಿಣ ಸಜೆ ಮತ್ತು ತಲಾ 5000 ರೂ ದಂಡ ವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಮಡಿಕೇರಿ ನಗರ ಠಾಣೆ ಪಿ.ಎಸ್.ಐ ಆಗಿದ್ದ ಎಂ.ಎಂ. ಭರತ್ ರವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಪ್ರಧಾನ ಜೆ.ಎಂ.ಎಫ್.ಸಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ಸಂತೋಷ್ ಬಿ.ಎಸ್ ರವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ..

ಕಾರು ಕಳವು ಪ್ರಕರಣ

          ದಿನಾಂಕ: 18-02-2020 ರಂದು ಮಡಿಕೇರಿ ತಾಲ್ಲೂಕು ಕಾರುಗುಂದ ಗ್ರಾಮದ ನಿವಾಸಿ ವಕೀಲರಾದ ಪಿ.ಆರ್ ಚಂದನ್ ರವರು ಮಡಿಕೇರಿ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕೆಎ-12-ಎನ್-9638 ರ ಓಮ್ನಿ ಕಾರನ್ನು ನಿಲ್ಲಿಸಿ ಲಾಕ್ ಮಾಡಿ ನ್ಯಾಯಾಲಯಕ್ಕೆ ಹೋಗಿ ವಾಪಾಸ್ಸು ಬಂದು ನೋಡಿದಾಗ ನಿಲ್ಲಿಸಿದ್ದ ಸ್ಥಳದಿಂದ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಚಂದನ್ ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವು

          ದಿನಾಂಕ: 17-02-2020 ರಂದು ವಿರಾಜಪೇಟೆ ತಾಲ್ಲೂಕು ತೆರಾಲು ಗ್ರಾಮದ ಬೊಳ್ಳೇರ ಪೊನ್ನಪ್ಪ ಎಂಬುವವರ ತೋಟದ ಲೈನ್ ಮನೆಯ ನಿವಾಸಿಗಳಾದ ಜೇನುಕುರುಬರ ಪುಟ್ಟ ಮತ್ತು ವಿನೋದ್ ಎಂಬುವವರು ಸ್ನಾನ ಮಾಡುವ ಸಲುವಾಗಿ ಮನೆಯ ಬಳಿ ಇದ್ದ ಕೆರೆಗೆ ಹೋಗಿದ್ದರು. ವಿನೋದ್ ರವರು ಕೆರೆಯಲ್ಲಿ ಸ್ನಾನ ಮಾಡುತ್ತಿರುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗುತ್ತಿದ್ದವರನ್ನು ಕಂಡು ರಕ್ಷಿಸಲು ಪುಟ್ಟ ರವರು ನೀರಿಗೆ ಇಳಿದಿದ್ದು ಇಬ್ಬರೂ ಸಹಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಮೃತ ವಿನೋದ್ ರವರ ಪತ್ನಿ ನೀಡಿದ ದೂರಿನ ಮೇರೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಯುವಕ ಆತ್ಮಹತ್ಯೆ

          ದಿನಾಂಕ: 17-02-2020 ರಂದು ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆ ಗ್ರಾಮದ ಹೋಂಸ್ಟೇ ಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ವಿರಾಜಪೇಟೆ ತಾಲ್ಲೂಕು ಕೋಣನಕೇರಿ ಗ್ರಾಮದ ನಿವಾಸಿ ಸಂಜು ಎಂಬುವವರು ವೈಯಕ್ತಿಕ ಕಾರಣದಿಂದ  ಜೀವನದಲ್ಲಿ ಜಿಗುಪ್ಸೆಗೊಂಡು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.