Crime News

ಕೊಲೆ ಯತ್ನ ಪ್ರಕರಣ

          ದಿನಾಂಕ: 19-02-2020 ರಂದು ವಿರಾಜಪೇಟೆ ತಾಲ್ಲೂಕು ನಡಿಕೇರಿ ಗ್ರಾಮದ ನಿವಾಸಿ ಕಳ್ಳಿಚಂಡ ಚಂಗಪ್ಪ ಎಂಬುವವರು ಅವರ ತೋಟದ ಕೆಲಸ ಮುಗಿಸಿ ವಾಪಾಸ್ಸು ಮನೆಗೆ ಬೈಕ್ ನಲ್ಲಿ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿ ಮಾಣಿಯಪಂಡ ಸಜಿ ಎಂಬುವವರು ಹಳೆ ವೈಷಮ್ಯದಿಂದ ದಾರಿ ತಡೆದು ಅವರ ಟ್ರ್ಯಾಕ್ಟರ್ ನ್ನು ಹಿಮ್ಮುಖವಾಗಿ ಚಾಲನೆ ಮಾಡಿ ಗುದ್ದಿಸಲು ಯತ್ನಿಸಿದಾಗ ಚಂಗಪ್ಪ ರವರು ತಪ್ಪಸಿಕೊಂಡಿರುತ್ತಾರೆ.ಪುನಃ ಸಜಿರವರು ಕೊಲೆ ಮಾಡುವ ಉದ್ದೇಶದಿಂದ ಕಲ್ಲನ್ನು ತಲೆಗೆ ಎಸೆದು ಕತ್ತಿಯನ್ನು ಬೀಸಿದಾಗ ಚಂಗಪ್ಪ ರವರು ತಪ್ಪಿಸಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 18-02-2020 ರಂದು ಸೋಮವಾರಪೇಟೆ ತಾಲ್ಲೂಕು ಗರ್ವಾಲೆ ಗ್ರಾಮದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಗೋಪಿನಾಥ್ ಎಂಬುವವರು ಟಿಎನ್-32-ಎಜೆಡ್- 1938 ರ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಬೈಕ್ ಸಹಿತ ರಸ್ತೆಗೆ ಬಿದ್ದು ಸವಾರ ಮತ್ತು ಹಿಂಬದಿ ಸವಾರ ಹರೀಶ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಯತ್ನ ಪ್ರಕರಣ          

ದಿನಾಂಕ: 19-02-2020 ರಂದು ಸೋಮವಾರಪೇಟೆ ತಾಲ್ಲೂಕು ಕೂತಿ ಗ್ರಾಮ ನಿವಾಸಿ ನವೀನ್ ಎಂಬುವವರು ನಗರೂರು ಗ್ರಾಮದ ಪೆಟ್ರೋಲ್ ಬಂಕ್ ನಲ್ಲಿ ಅವರ ಪಿಕ್ ಅಪ್ ಗೆ ಪೆಟ್ರೋಲ್ ಹಾಕಿಸುತ್ತಿರುವಾಗ ಅಲ್ಲಿಗೆ ನೇಗಳ್ಳೆ ಗ್ರಾಮದ ನಿವಾಸಿಗಳಾದ ಪ್ರಶಾಂತ್, ಗಿರೀಶ್, ವಿಕ್ಕಿ ,ಕೇವಿಲಾಶ್ ಮತ್ತು ಇತರರು ಎರಡು ಕಾರುಗಳಲ್ಲಿ ಬಂದು ವೈಯಕ್ತಿಕ ವಿಚಾರದಲ್ಲಿ ವೈಷಮ್ಯದಿಂದ ನವೀನ್ ರವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹಳೆ ಬಿ.ಇ.ಒ ಕಛೇರಿಯ ಬಳಿ ಹಾಗೂ ನೇಗಳ್ಳೆ ಗ್ರಾಮದ ಕೆರೆಯ ಬಳಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಗಂಭೀರ ಸ್ವರೂಪದ ಗಾಯಪಡಿಸಿ ಕೊಲೆ ಮಾಡಲು ಯತ್ನಿಸಿದ್ದು ಈ ಬಗ್ಗೆ ನವೀನ್ ರವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.