Crime News

ಅಕ್ರಮ ಗಾಂಜಾ ಸಾಗಾಟ, ಆರೋಪಿಗಳ ಬಂಧನ:

ಮೈಸೂರು ನಗರದಿಂದ ಕೊಡಗು ಜಿಲ್ಲೆಯ ವಿವಿಧ ಭಾಗಗಳಿಗೆ ಗಾಂಜಾವನ್ನುಸರಬರಾಜು ಮಾಡುತ್ತಿದ್ದ ನಾಲ್ಕು ಜನರನ್ನು ಬಂದಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.  

ಕೊಡಗು ಜಿಲ್ಲೆಗೆ ಹೊರಗಿನಿಂದ ಗಾಂಜಾ ಎಂಬ ಮಾದಕ ವಸ್ತು ಸರಬರಾಜಾಗುತ್ತಿದ್ದು, ಯುವಕರು ಮಾದಕವಸ್ತುಗಳ ವ್ಯಸನಿಗಳಾಗಿದ್ದಾರೆ, ಈ ಪಿಡುಗನ್ನು ತಪ್ಪಿಸಬೇಕೆಂದು ಅನೇಕ ಸಂಘ ಸಂಸ್ಥೆಗಳು ಪೊಲೀಸರಿಗೆ ದೂರುಗಳನ್ನು ಬರೆದುಕೊಂಡಿದ್ದು, ಈ ವಿಷಯವನ್ನು ಬಹಳ ಸೂಕ್ಷ್ಮವೆಂದು ಪರಿಗಣಿಸಿ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸದರಿ ಪ್ರಕರಣದ  ಬಗ್ಗೆ ಕಾರ್ಯಾಗಾರವನ್ನು ನಡೆಸಿ ಕೊಡಗು ಜಿಲ್ಲೆಯಿಂದ ಮಾದಕ ವಸ್ತುಗಳನ್ನು ಹತ್ತಿಕ್ಕುವ ಬಗ್ಗೆ ನಿರ್ದೇಶನವನ್ನು ನೀಡಲಾಗಿರುತ್ತದೆ. ಈ ಬಗ್ಗೆ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಸೋಮವಾರಪೇಟೆ ಉಪ-ವಿಭಾಗದ ಉಪಾಧೀಕ್ಷಕರು ತಂಡಗಳನ್ನು ರಚಿಸಿ ಮಾದಕ  ವಸ್ತುಗಳ  ಸರಬರಾಜಿನ  ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಉಪವಿಭಾಗದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ತಿಳುವಳಿಕೆ ನೀಡಿದ್ದು, ಮೈಸೂರಿನಿಂದ ಕೊಡಗು ಜಿಲ್ಲೆಗೆ ಮಾದಕ ವಸ್ತು ಸರಬರಾಜಿನ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಕುಶಾಲನಗರ  ವೃತ್ತ ನಿರೀಕ್ಷಕರವರ  ತಂ ಡ ಆರೋಪಿಗಳು ಕೆಂಪು ಬಣ್ಣದ ಮಾರುತಿ-800 ಕಾರ್ ಸಂಖ್ಯೆ: ಕೆಎ-03 ಎಂಎಫ್-1033 ರಲ್ಲಿ ಮೈಸೂರಿನಿಂದ ಗಾಂಜಾವನ್ನು ಖರೀದಿಸಿ ಸುಂಟಿಕೊಪ್ಪ ವ್ಯಾಪ್ತಿಗೆ ತರುತ್ತಿದ್ದವರನ್ನು ದಿನಾಂಕ: 20-02-2020 ರಂದು ರಾತ್ರಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಹಳ್ಳಿಯ ರಾಜ್ಯ ಹೆದ್ದಾರಿ – 275 ರಲ್ಲಿ ತಡೆದು ನಿಲ್ಲಿಸಿ ವಾಹನವನ್ನು ಪರಿಶೀಲಿಸಲಾಗಿ ಸದರಿ ವಾಹನದ ಡಿಕ್ಕಿಯಲ್ಲಿನ ಒಂದು ಕಿಟ್ ಬ್ಯಾಗಿನಲ್ಲಿ, ಖಾಕಿ ಬಣ್ಣದ ಟೇಪ್ ಸುತ್ತಿದ್ದ ಮೂರು ದೊಡ್ಡ ಬಂಡಲ್ಗಳು ಕಂಡು ಬಂದಿದ್ದು, ಅವುಗಳನ್ನು ತೆರೆದು ನೋಡಲಾಗಿ ಅದರಲ್ಲಿ ಒಣಗಿದ ಗಾಂಜಾ ಇರುವುದು ಕಂಡುಬಂದ ಮೇರೆಗೆ ಕಾರಿನಲ್ಲಿದ್ದ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದು ಕೂಲಂಕುಶವಾಗಿ ವಿಚಾರ ಮಾಡಲಾಗಿ ಆರೋಪಿಗಳು ಗಾಂಜಾ ವ್ಯಸನಿಗಳಾಗಿದ್ದು, ಹಣ ಸಂಪಾದನೆ ಮಾಡುವ ಉದ್ದೇಶದಿಂದ ಸುಮಾರು ಮೂರು ವರ್ಷಗಳಿಂದ ಮೈಸೂರು ನಗರದ ಮಂಡಿ ಮಾರ್ಕೆಟ್ ಬಳಿಯಿಂದ ಗಾಂಜಾವನ್ನು ಖರೀದಿಸಿ ತಂದು ಸಣ್ಣ ಪ್ಯಾಕೆಟ್ ಗಳಿಗೆ ತುಂಬಿ 300, 400 ರೂಗಳಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿರುತ್ತದೆ.

ದಸ್ತಗಿರಿ ಮಾಡಿದ ಆರೋಪಿಗಳ ವಿವರ:

(1). ಅಮ್ಜದ್ ಶರೀಫ್ @ ಅಮ್ಜದ್ ತಂದೆ ಅಹ್ಮದ್ ಶರೀಫ್, 31 ವರ್ಷ, ಪೇಂಟರ್ ಕೆಲಸ, ವಾಸ: ಕೆಇಬಿ ಹತ್ತಿರ ಸುಂಟಿಕೊಪ್ಪ, ಸೋಮವಾರಪೇಟೆ ತಾಲ್ಲೂಕು. (2). ಸಮೀರ್ ತಂದೆ ಹಸೈನಾರ್, 30 ವರ್ಷ, ಕೂಲಿ ಕೆಲಸ, ಗಿರಿಯಪ್ಪ ಹೌಸ್, ಚೆಟ್ಟಳ್ಳಿ ರಸ್ತೆ, ಸುಂಟಿಕೊಪ್ಪ, ಸೋಮವಾರಪೇಟೆ ತಾಲ್ಲೂಕು. (3). ಅಫ್ರೀದ್ ತಂದೆ ಅಸ್ಲಾಂ, 27 ವರ್ಷ, ಪೇಂಟರ್-ಮೇಸನ್ ಕೆಲಸ, ವಾಸ ಅಪ್ಪಾರಂಡ ಬಡಾವಣೆ, ಸುಂಟಿಕೊಪ್ಪ, ಸೋಮವಾರಪೇಟೆ ತಾಲ್ಲೂಕು. (4). ರವಿ ತಂದೆ ನರಸಿಂಹ ಮೂರ್ತಿ, 27 ವರ್ಷ, ಪೇಂಟರ್ ಕೆಲಸ, ವಾಸ: ಕೆಇಬಿ ಹತ್ತಿರ ಸುಂಟಿಕೊಪ್ಪ, ಸೋಮವಾರಪೇಟೆ ತಾಲ್ಲೂಕು. ಆರೋಪಿಗಳಿಂದ ವಶಪಡಿಸಿಕೊಂಡ ಮಾಲಿನ ವಿವರ: (1). 6 ಕೆಜಿ 70 ಗ್ರಾಂ ಒಣಗಿದ ಗಾಂಜಾ ಬೆಲೆ ಸುಮಾರು 1,50,000/- (2). ಕೆಂಪು ಬಣ್ಣದ ಮಾರುತಿ-800 ಕಾರ್ ಸಂಖ್ಯೆ: ಕೆಎ-03 ಎಂಎಫ್-1033

ಈ ಕಾರ್ಯಾಚರಣೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ಆಧೀಕ್ಷಕರಾದ ಶ್ರೀಮತಿ. ಡಾ|| ಸುಮನ್.ಡಿ.ಪಿ ಐಪಿಎಸ್ ಹಾಗೂ ಸೋಮವಾರಪೇಟೆ ಉಪವಿಭಾಗದ ಡಿವೈಎಸ್.ಪಿ ಶ್ರೀ ಹೆಚ್.ಎಂ. ಶೈಲೇಂದ್ರ ರವರ  ಮಾರ್ಗದರ್ಶನದಲ್ಲಿ  ಕುಶಾಲನಗರ  ವೃತ್ತ ನಿರೀಕ್ಷಕರಾದ ಶ್ರೀ. ಎಂ. ಮಹೇಶ್ ರವರ ನೇತೃತ್ವದಲ್ಲಿ ಕುಶಾಲನಗರ ಗ್ರಾಮಾಂತರ ಪಿಎಸ್ಐ ಶ್ರೀ. ನಂದೀಶ್, ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ಪಿಎಸ್ಐ ಶ್ರೀ. ಹೆಚ್.ವೈ. ವೆಂಕಟರಮಣ, ಎಎಸ್ಐ ಶ್ರೀ. ಗೋಪಾಲ್ ಹಾಗೂ ಸಿಬ್ಬಂದಿಗಳಾದ  ಶ್ರೀ. ಪ್ರಕಾಶ್, ಶ್ರೀ. ದಯಾನಂದ, ಶ್ರೀ. ಸಂದೇಶ್, ಶ್ರೀ. ಸಂಪತ್, ಶ್ರೀ. ಲೋಕೇಶ್, ಶ್ರೀ. ಅಜಿತ್, ಶ್ರೀ. ರವೀಂದ್ರ, ಶ್ರೀ. ನಾಗರಾಜ್, ಶ್ರೀ. ವಿವೇಕ್, ಸಿಡಿಆರ್ ಸೆಲ್ ನ ಶ್ರೀ. ರಾಜೇಶ್, ಶ್ರೀ. ಗಿರೀಶ್, ಚಾಲಕರುಗಳಾದ  ಶ್ರೀ. ಗಣೇಶ್, ಪ್ರವೀಣ್, ರಾಜು ರವರು ಪಾಲ್ಗೊಂಡಿದ್ದರು.

ಈ ಪ್ರಕರಣವನ್ನು ಪತ್ತೆಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿಯವರ  ಕಾರ್ಯವನ್ನು ಶ್ಲಾಫಿಸಿ ನಗದು ಬಹುಮಾನವನ್ನು ಘೋಷಿಸಲಾಗಿದೆ. ಕೊಡಗು ಜಿಲ್ಲೆಯಾದ್ಯಂತ ಗಾಂಜಾ ಮಾರಾಟದ ಜಾಲ ಹಬ್ಬಿಕೊಂಡಿದ್ದು, ಯುವಕರು ಮಾದಕವಸ್ತುಗಳ ವ್ಯಸನಿಗಳಾಗುತ್ತಿದ್ದು, ಇದನ್ನು ತಡೆಯುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಿ ಯಾವುದೇ ಮಾದಕ ವಸ್ತುಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಮ್ಮ ಗ್ರಾಮದ ಬೀಟ್ ಅಧಿಕಾರಿಗಳಿಗಾಗಲೀ ಅಥವಾ ಸಂಬಂಧಪಟ್ಟ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗಾಗಲೀ ನೀಡುವಂತೆ ಕೋರಲಾಗಿದೆ. ಇದಲ್ಲದೇ ಕೊಡಗು ಜಿಲ್ಲೆಯಾದ್ಯಂತ ಸುಮಾರು 30 ಕಡೆಗಳಲ್ಲಿ ಸಲಹಾ ಪೆಟ್ಟಿಗೆಗಳನ್ನು ಇರಿಸಿದ್ದು, ಯಾವುದೇ ಅಕ್ರಮ ಚಟುವಟಿಕಗೆಳ  ಬಗ್ಗೆ ಮಾಹಿತಿಯನ್ನು ಸಾರ್ವಜನಿಕರು ನೀಡಬಹುದಾಗಿರುತ್ತದೆ. ಮಾಹಿತಿ ನೀಡಿದ ಸಾರ್ವಜನಿಕರು ತಮ್ಮ ಹೆಸರು ನಮೂದಿಸುವ ಅಗತ್ಯವಿರುವುದಿಲ್ಲ. ಹೆಸರು ನಮೂದಿಸಿ ಮಾಹಿತಿ ನೀಡಿದ ಸಾರ್ವಜನಿಕರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಹಾಗೂ ಸೂಕ್ತ ಬಹುಮಾವನ್ನು ನೀಡಲಾಗುವುದು.

ಕೊಲೆ ಯತ್ನ ಪ್ರಕರಣ

          ದಿನಾಂಕ: 20-02-2020 ರಂದು ವಿರಾಜಪೇಟೆ ತಾಲ್ಲೂಕು ನಡಿಕೇರಿ ಗ್ರಾಮದ ನಿವಾಸಿ ಮಾಣಿಯಪಂಡ ಅರ್ಜುನ್ ಎಂಬುವವರು ಅವರ ಮಗ ಸಜಿ ಎಂಬುವವರ ಮನೆಗೆ ಹಾಲನ್ನು ತೆಗೆದುಕೊಂಡು ಹೋಗುತ್ತಿರುವಾಗ ಕಳ್ಳಿಚಂಡ ಅಯ್ಯಪ್ಪ ಎಂಬುವವರ ಮನೆಯ ಬಳಿ ತಲುಪಿದಾಗ ಕಳ್ಳಿಚಂಡ ಅಯ್ಯಪ್ಪ ಮತ್ತು ಅವರ ಮಗ ಸುನಿಲ್ ರವರು ಹಳೆ ವೈಷಮ್ಯದಿಂದ ಅಯ್ಯಪ್ಪರವರು ಕೋವಿಯನ್ನು ತೋರಿಸಿ ಹಾಗೂ ಸುನಿಲ್ ರವರು ಪಿಸ್ತೂಲ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಕೊಲೆ ಮಾಡಲು ಪ್ರಯತ್ನಿಸಿ ಹಾಗೂ ಸಜಿಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು ಈ ಬಗ್ಗೆ ಅರ್ಜುನ್ ರವರು ನೀಡಿದ ಪುಕಾರಿ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಅಪಘಾತ, ಚಾಲಕ ಸಾವು

          ದಿನಾಂಕ: 20-02-2020 ರಂದು ಮಡಿಕೇರಿ ತಾಲ್ಲೂಕು ಇಬ್ನಿವಳವಾಡಿ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-09-ಎಂಡಿ-2528 ರ ಕಾರನ್ನು ಅದರ ಚಾಲಕ ರಫೀಕ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯ ಬರೆಗೆ ಡಿಕ್ಕಿಯಾಗಿ ಮಗುಚಿ ಬಿದ್ದಿದ್ದರಿಂದ ಕಾರಿನಲ್ಲಿದ್ದ ಚಾಲಕ ರಫೀಕ್ ಹಾಗೂ ಅಫ್ರೀನಾ ಎಂಬುವವರು ಗಾಯಗೊಂಡಿದ್ದುವ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಕಾರು ಚಾಲಕ ರಫೀಕ್ ಮೃತಪಟ್ಟಿದ್ದು ಈ ಬಗ್ಗೆ ಲತೀಫ್ ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.