Crime News

ಮಹಿಳೆ ಆತ್ಮಹತ್ಯೆ ಪ್ರಕರಣ ದಾಖಲು:

ಮಡಿಕೇರಿ ನಗರದ ನಿವಾಸಿ ಧರ್ಮ ಎಂಬವರ ಪತ್ನಿ ಶ್ರೀಮತಿ ಮಂಜುಳ ಎಂಬವರು ದಿನಾಂಕ 20-2-2020 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಸಹೋದರ ಎಂ.ಜಯಪಾಲ್‍ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ

ಮಡಿಕೇರಿ ನಗರದ ಮಹದೇವ ಪೇಟೆ ನಿವಾಸಿ ಶ್ರೀಮತಿ ಭಾರತಿ ಎಂಬವರ ಪತಿ ಸತೀಶ್‍ ಎಂಬವರು ಮಡಿಕೇರಿ ನಗರದ ಆರ್‍.ಬಿ. ಜುವೆಲ್ಲರಿಯಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 5-2-2020 ರಂದು ಮೂಡಬಿದ್ರೆಯಲ್ಲಿರುವ ಅಣ್ಣನ ಮನೆಯಿಂದ ಮಡಿಕೇರಿಗೆ ಹೋಗುತ್ತೇನೆಂದು ತಿಳಿಸಿ ಬಂದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮದ್ಯಸೇವಿಸಿದ ವ್ಯಕ್ತಿ ಕೆರೆಗೆ ಬಿದ್ದು ಸಾವು

ಸಿದ್ದಾಪುರ ಠಾಣಾ ಸರಹದ್ದಿನ ಚೆನ್ನಂಗಿ ಗ್ರಾಮದ ನಿವಾಸಿ ಪಿ.ಎಂ. ಪ್ರವೀಣ ಎಂಬವರ ತಂದೆ 40 ವರ್ಷದ ಮಣಿ ಎಂಬವರು ದಿನಾಂಕ 21-2-2020 ರಂದು ರಾತ್ರಿ ಮದ್ಯಸೇವಿಸಿ ಮಲಗಿದ್ದು ರಾತ್ರಿ ಮತ್ತೆ ಎದ್ದು ಮೂತ್ರವಿಸರ್ಜನೆಗೆ ಮನೆಯಿಂದ ಹೊರಗೆ ಹೋಗಿದ್ದು ಮನೆಯ ಹತ್ತಿರವಿರುವ ಕರೆಯಲ್ಲಿ ಆಕಸ್ಮಿಕ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಪಿ.ಎಂ. ಪ್ರವೀಣ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಗೆ ಅವಾಚ್ಯ ನಿಂದನೆ ಕೊಲೆ ಬೆದರಿಕೆ:

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನ ಬಸವನತ್ತೂರು ಗ್ರಾಮದ ನಿವಾಸಿ ಹೆಚ್. ಲಿಂಗಯ್ಯ ಎಂಬವರು ದಿನಾಂಕ 20-2-2020 ರಂದು ತಮ್ಮ ಮೆನಯ ಬಳಿ ಕಾಂಪೌಂಡ್‍ನ್ನು ಕಟ್ಟಿಸುತ್ತಿರುವಾಗ್ಗೆ ಅದೇ ಗ್ರಾಮದ ಮಂಚಯ್ಯ, ರೇಣುಕಾ ಮತ್ತು ಉದಯಕುಮಾರ್‍ ಎಂಬವರುಗಳು ಕೆಲಸಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದು ಅಲ್ಲದೆ ರಾತ್ರಿ ಸಮಯದಲ್ಲಿ ಕಾಂಪೌಂಡ್‍ನ್ನು ಬೀಳಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಕೂಟರಿಗೆ ಕಾರುಡಿಕ್ಕಿ:

ಕುಶಾಲನಗರದ ಹೆಚ್‍.ಆರ್‍.ಪಿ. ಕಾಲೋನಿಯಲ್ಲಿ ವಾಸವಾಗಿರುವ ಕುಮಾರಿ ಅಕ್ಷಿತಾ ಎಂಬವರು ದಿನಾಂಕ 21-2-2020 ರಂದು ತಮ್ಮ ಬಾಪ್ತು ಸ್ಕೂಟರಿನಲ್ಲಿ ಕುಶಾಲನಗರದಿಂದ ನಂಜರಾಯಪಟ್ಟಣದ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಇಂಡಿಕಾ ಕಾರೊಂದು ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಕುಮಾರಿ ಅಕ್ಷಿತಾರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಬೈಕ್‍ ಡಿಕ್ಕಿ

ಕುಶಾಲನಗರ ಸಮೀಪದ ಬಸವನಳ್ಳಿ ಗ್ರಾಮದ ನಿವಾಸಿ ಬಿ.ಸಿ. ಲೋಕೇಶ್‍ ಎಂಬವರು ತನ್ನ ಅಳಿಯ ಶಿವಕುಮಾರ್‍ ರವರೊಂದಿಗೆ ದಿನಾಂಕ 19-2-2020 ರಂದು ಬಸವನಳ್ಳಿ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸುಂಟಿಕೊಪ್ಪ ಕಡೆಯಿಂದ ಬಂದ ಮೋಟಾರು ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಿ.ಸಿ. ಲೋಕೇಶ್ ಮತ್ತು ಶಿವಕುಮಾರ್‍ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಇಬ್ಬರೂ ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದು, ಬೈಕ್‍ ಸವಾರನಿಗೂ ಗಾಯಗಳಾಗಿದ್ದು, ಮಡಿಕೇರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.