Crime News

ಅಕ್ರಮ ಗಾಂಜಾ ಸಾಗಾಟ ಪ್ರಕರಣ

          ದಿನಾಂಕ: 24-02-2020 ರಂದು ಸೋಮವಾರಪೇಟೆ ಠಾಣೆ ಪಿ.ಎಸ್.ಐ ಶಿವಶಂಕರ್ ಮತ್ತು ಸಿಬ್ಬಂದಿಯವರು ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪದಿಂದ ಸೋಮವಾರಪೇಟೆಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಕೆಎ-12-ಬಿ-3933 ರ ಆಟೋರಿಕ್ಷಾದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿ ಮಾದಾಪುರ ಗ್ರಾಮದ ನಿವಾಸಿ ಇಮ್ರಾನ್ ಎಂಬುವವರುನ್ನು ಹಾಗೂ ಸ್ವತ್ತು ವಶಕ್ಕೆ ಪಡೆದು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

          ದಿನಾಂಕ: 23-02-2020 ರಂದು ಸೋಮವಾರಪೇಟೆ ತಾಲ್ಲೂಕು ದೊಡ್ಡಕುಂದ ಗ್ರಾಮದ ನಿವಾಸಿ ಕೊಡ್ಲಿಪೇಟೆ ವಿ.ಎಸ್.ಎಸ್.ಎನ್ ಸಹಕಾರ ಸಂಘದ ಸದಸ್ಯ ತೇಜಕುಮಾರ್ ಮತ್ತು ಸಂಘದ ಅಧ್ಯಕ್ಷರಾದ ತಮ್ಮಯ್ಯ ಎಂಬುವವರು ಸಂಘದಿಂದ ಪಡೆದಿರುವ ಸಾಲದ ವಿಚಾರದಲ್ಲಿ ಪರಸ್ಪರ ಜಗಳ ಮಾಡಿ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

          ದಿನಾಂಕ: 24-02-2020 ರಂದು ಸೋಮವಾರಪೇಟೆ ತಾಲ್ಲೂಕು ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ಸಿ.ಕೆ ಶಂಬು ಎಂಬುವವರಿಗೆ ಅದೇ ಗ್ರಾಮದ ನಿವಾಸಿ ಸತೀಶ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಶಂಭು ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಮರ ಬಿದ್ದು ಆಕಸ್ಮಿಕ ಸಾವು

          ದಿನಾಂಕ: 24-02-2020 ರಂದು ಸೋಮವಾರಪೇಟೆ ತಾಲ್ಲೂಕು ನಾಕೂರು ಗ್ರಾಮದ ನಿವಾಸಿ ಉಮೇಶ್ ಎಂಬುವವರು ಅಭ್ಯಾಲ ಗ್ರಾಮದ ಬಲ್ಲಾಂರಂಡ ದೇವಯ್ಯ ಎಂಬುವವರ ತೋಟದಲ್ಲಿ ಸಿಲ್ವರ್ ಮರ ಖರೀದಿಸಿ ಚಂದ್ರಶೇಖರ್ ಮತ್ತು ರಾಜೇಶ್ ಎಂಬುವವರೊಂದಿಗೆ ಮರ ಕತ್ತರಿಸುತ್ತಿದ್ದರು. ಮರ ಕತ್ತರಿಸುವಾಗ ಮರವನ್ನು ಹಗ್ಗದಿಂದ ಕಟ್ಟಿ ಎಳೆಯುತ್ತಿರುವಾಗಿ ಉಮೇಶ್ ರವರು ಅಜಾಗರೂಕತೆ ವಹಿಸಿದ್ದರಿಂದ ಮರದ ಕೊಂಬೆ ಉಮೇಶ್ ರವರ ಮೇಲೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ಮೃತರ ಸಹೋದರ ದಿನೇಶ್ ಎಂಬುವವರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

          ದಿನಾಂಕ: 23-02-2020 ರಂದು ವಿರಾಜಪೇಟೆ ತಾಲ್ಲೂಕು ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಕರಿಯ ಎಂಬುವವರು ಅವರ ಮನೆಯಲ್ಲಿರುವಾಗ ಸ್ವಾಮಿ ಎಂಬುವವರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ಕರಿಯ ರವರು ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಫಿ ಖರೀದಿಸಿ ಹಣ ನೀಡದೇ ವಂಚನೆ

          ವಿರಾಜಪೇಟೆ ತಾಲ್ಲೂಕು ಮಗ್ಗುಲ ಗ್ರಾಮದಲ್ಲಿ ಧನಲಕ್ಷ್ಮಿ ಕಾಫಿ ಕ್ಯೂರಿಂಗ್ ವರ್ಕ್ಸ್ ಮತ್ತು ಟ್ರೇಡರ್ಸ್ ನ್ನು ಮಗ್ಗುಲ್ ಗ್ರಾಮದ ಗುರುಪ್ರಸಾದ್, ವಿ.ಎಂ ಕೆಂಪಣ್ಣ, ಚಂದ್ರಿಕಾ, ಮೈತಾಡಿ ಗ್ರಾಮದ ರಾಯ್ ತಿಮ್ಮಯ್ಯ ಮತ್ತು ಚಂದ್ರಿಕಾ ತಿಮ್ಮಯ್ಯ ಎಂಬುವವರು ಪಾಲುದಾರಿಕೆಯೊಂದಿಗೆ ವ್ಯವಹಾರ ಮಾಡುತ್ತಿದ್ದಾರೆ. ಕೊಂಗಣ ಗ್ರಾಮದ ನಿವಾಸಿಗಳಾದ ನಾಮೇರ ಚಿಣ್ಣಪ್ಪ, ಬೆಳ್ಯಪ್ಪ, ಚೇತನ್, ಈರಪ್ಪ, ನಿತೀನ್ ಮೊಣ್ಣಪ್ಪ, ನಾಮೇರ ಸುನೀತ, ವಾಸು, ಬಿ.ಎಂ ನಾಣಯ್ಯ, ದೇವಮ್ಮ ಎಂಬುವವರಿಂದ ಒಟ್ಟು 17,09,690 ರೂ ಮೌಲ್ಯದ 1868 ಚೀಲ ಕಾಫಿ ಹಾಗೂ 708 ಕೆ.ಜಿ ಕಾಳುಮೆಣಸನ್ನು ಖರೀದಿಸಿ ಈ ವರೆಗೂ ಹಣ ನೀಡದೇ ಮೋಸ ಮಾಡಿದ್ದು ಈ ಬಗ್ಗೆ ನಾಮೇರ ಚಿಣ್ಣಪ್ಪ ಎಂಬುವವರು ದಿನಾಂಕ: 24-02-2020 ರಂದು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.