Crime News

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

          ದಿನಾಂಕ: 18-02-2020 ರಂದು ಸೋಮವಾರಪೇಟೆ ತಾಲ್ಲೂಕು ಗರ್ವಾಲೆ ಗ್ರಾಮದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಗೋಪಿನಾಥ್ ಎಂಬುವವರು ಟಿಎನ್-32-ಜೆಡ್- 1938 ರ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಬೈಕ್ ಸಹಿತ ರಸ್ತೆಗೆ ಬಿದ್ದು ಸವಾರ ಮತ್ತು ಹಿಂಬದಿ ಸವಾರ ಹರೀಶ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಗೋಪಿನಾಥ್ ಎಂಬುವವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 25-02-2020 ರಂದು ಮೃತಪಟ್ಟಿರುತ್ತಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

          ದಿನಾಂಕ: 24-02-2020 ರಂದು ಸೋಮವಾರಪೇಟೆ ತಾಲ್ಲೂಕು ಬೆಟ್ಟದಳ್ಳಿ ಗ್ರಾಮದ ನಿವಾಸಿ ದರ್ಶನ್ ಎಂಬುವವರಿಗೆ ವಿಪರೀತ ಮದ್ಯಪಾನ ಮಾಡುತ್ತಿದ್ದು  ಯಾವುದೋ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಿ: 25-02-2020 ರಂದು ಮೃತಪಟ್ಟಿದ್ದು ಈ ಬಗ್ಗೆ ಮೃತರ ತಂದೆ ನೀಡಿದ ದೂರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ ಪ್ರಕರಣ

          ದಿನಾಂಕ: 16-02-2020 ರಂದು ಮಡಿಕೇರಿ ತಾಲ್ಲೂಕು ಪೆರಾಜೆ ಗ್ರಾಮದ ನಿವಾಸಿ ಟಿ.ಜೆ ಸೂರಜ್ ಎಂಬುವವರು ಯಾರಿಗೂ ಹೇಳದೆ ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಅಕ್ಕಪಕ್ಕದವರಲ್ಲಿ ಹಾಗೂ ಆತನ ಸ್ನೇಹಿತರಲ್ಲಿ ವಿಚಾರಿಸಿದ್ದು  ಈ ವರೆಗೂ ಪತ್ತೆಯಾಗದೇ  ಕಾಣೆಯಾಗಿದ್ದು ಈ ಬಗ್ಗೆ ಸೂರಜ್ ರವರ ತಾಯಿ ದಿನಾಂಕ: 25-02-2020 ರಂದು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

          ದಿನಾಂಕ: 24-02-2020 ರಂದು ವಿರಾಜಪೇಟೆ ತಾಲ್ಲೂಕು ನಿಟ್ಟೂರು ಗ್ರಾಮದ ನಿವಾಸಿ ಎಂ.ಪಿ ದೇವಯ್ಯ ಎಂಬುವವರು ಅವರ ತೋಟದ ಸುತ್ತ ನೆಟ್ಟಿದ್ದ ರೂ. 21,000 ಮೌಲ್ಯದ ತಂತಿ ಕಂಬ ಹಾಗು ತಂತಿ ಕಳವು ಆಗಿರುತ್ತದೆ.  ಅದೇ ಗ್ರಾಮದ ನಿವಾಸಿಗಳಾದ ಮಲ್ಲೇಂಗಡ ಗಣಪತಿ, ವಿನೀಶ ಮತ್ತು ಪೊನ್ನಪ್ಪ ಎಂಬುವವರು ಕಳವು ಮಾಡಿರುವುದಾಗಿ ಗುಮಾನಿ ಇರುವುದಾಗಿ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

          ವಿರಾಜಪೇಟೆ ತಾಲ್ಲೂಕು ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಭಾಗ್ಯಲಕ್ಷ್ಮಿ ಎಂಬುವವರ ಕುಟುಂಬಕ್ಕೆ ಸೇರಿದ ಅವರ ಮಾವ ಪ್ಔತಿ ಕಾರ್ಯಪ್ಪ ರವರ ಹೆಸರಿನಲ್ಲಿರುವ ಆಸ್ತಿಗೆ ಸಂಬಂದಿಸಿದಂತೆ ನ್ಯಾಯಾಲಯದಲ್ಲಿ ದಾವೆ ಇರುತ್ತದೆ. ಈ ವ್ಯಾಜ್ಯದ ಬಗ್ಗೆ ವಕೀಲರಾದ ಸಿ.ಕೆ ಪೂವಣ್ಣ ಮತ್ತು ಸಿ.ಎಸ್ ಕಾವೇರಪ್ಪ ಎಂಬುವವರು ವ್ಯಾಜ್ಯದ ಪ್ರತಿವಾದಿಗಳಾದ ಎಂ.ಎಂ ನಾಣಯ್ಯ ಮತ್ತು ಬೋಪಣ್ಣ ಎಂಬುವವರು ಸೇರಿಕೊಂಡು ವಂಚನೆ ಮಾಡುವ ಉದ್ದೇಶದಿಂದ ಸುಳ್ಳು ಅರ್ಜಿ ಹಾಕಿಸಿ ಮೋಸ ಮಾಡಿರುತ್ತಾರೆ.  ಇದರಿಂದ ಕ್ರಿಮಿನಲ್ ಒಳಸಂಚು ಮಾಡಿ ನಂಬಿಕೆ ದ್ರೋಹ ಹಾಗೂ ನ್ಯಾಯಾಲಯಕ್ಕೆ ಸುಳ್ಳು  ಮಾಹಿತಿ ನೀಡಿ ವಂಚನೆ  ಮಾಡಿದ ಬಗ್ಗೆ ದಿನಾಂಕ: 25-02-2020 ರಂದು ನೀಡಿದ ಪುಕಾರಿನ ಮೇರೆ ಶ್ರೀಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಸಿ ತನಿಖೆ ಕೈಗೊಂಡಿದ್ದಾರೆ.