Crime News

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 28-02-2020 ರಂದು ವಿರಾಜಪೇಟೆ ಗ್ರಾಮದ ತಿತಿಮತಿ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಬಿ-5767 ರ ಆಟೋರಿಕ್ಷಾವನ್ನು ಅದರ ಚಾಲಕ ಪ್ರವೀಣ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿಕೊಂಡ ಪರಿಣಾಮ ಆಟೋದಲ್ಲಿದ್ದ ಮಂಜು ಮತ್ತು ಮನೋಜ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ          

ದಿನಾಂಕ: 28-02-2020 ರಂದು ಮಡಿಕೇರಿ ತಾಲ್ಲೂಕು ಹೊದವಾಡ ಗ್ರಾಮದ ನಿವಾಸಿ ಕೆ.ಯು ರಫೀಕ್ ಎಂಬುವವರು ಅವರ ಮನೆಗೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿ ಪಿ.ಯು ಮಜೀದ್ ಎಂಬುವವರು ಹಳೆ ವೈಷಮ್ಯದಿಂದ ಬಾಟಲಿಯಿಂದ ತಲೆಗೆ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ರಫೀಕ್ ರವರು ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.