Crime News

ವ್ಯಕ್ತಿ ಆತ್ಮಹತ್ಯೆ

ಕುಶಾಲನಗರ ಬಳಿಯ ಕೂಡ್ಲೂರು ಗ್ರಾಮದ ನವಗ್ರಾಮ ನಿವಾಸಿ ಅರುಣ ಎಂಬವರು ದಿನಾಂಕ 28/02/2020 ರಿಂದ 29/02/2020 ರ ನಡುವೆ ಯಾವುದೋ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ಅರುಣ್‌ರವರು ವಿಪರೀತ ಸಾಲ ಮಾಡಿಕೊಂಡಿದ್ದು ಈ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 28/02/2020ರಂದು ಸೋಮವಾರಪೇಟೆ ಬಳಿಯ ಬಜೆಗುಂಡಿ ನಿವಾಸಿ ನವೀನ್‌ ಕುಮಾರ್‌ ಎಂಬವರೊಂದಿಗೆ ಸೋಮವಾಋಪೇಟೆ ನಗರದ ಅಸ್ಗರ್ ಗ್ಯಾರೇಜ್‌ ಬಳಿ ಅರುಣ, ಕುಮಾರ ಮತ್ತು ಸುರೇಶ ಎಂಬವರು ಹಣ ಹಾಗೂ ಹೆಲ್ಮೆಟ್ ವಿಚಾರದಲ್ಲಿ ಜಗಳವಾಡಿ ಕೈ ಹಾಗೂ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ; ಸಾವು

ದಿನಾಂಕ 29/02/2020ರಂದು ಶನಿವಾರಸಂತೆ ಬಳಿಯ ಮೆಣಸ ನಿವಾಸಿ ಬಸವರಾಜು ಎಂಬವರು ಅವರ ಬೈಕಿನಲ್ಲಿ ಆಲೂರು ಸಿದ್ದಾಪುರದ ಬಳಿ ಬರುತ್ತಿರುವಾಗ ಎದುರಿನಿಂದ ಒಂದು ಕೆಎ-13-ಬಿ-1324ರ ಗೂಡ್ಸ್ ರಿಕ್ಷಾವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಡು ಬಂದು ಬಸವರಾಜುರವರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕಿನಿಂದ ಬಿದ್ದು ತೀವ್ರವಾಗಿ ಗಾಯಗೊಂಡ ಬಸವರಾಜುರವರು ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 29/02/2020ರಂದು ಶನಿವಾರಸಂತೆ ಬಳಿಯ ನಂದಿಗುಂದ ನಿವಾಸಿ ಅವಿನಾಶ್‌ ಎಂಬವರು ಮುಳ್ಳೂರು ಕಾಡಿನಲ್ಲಿ ಕೇಬಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 29/02/2020ರಂದು ಮೂರ್ನಾಡು ನಿವಾಸಿ ಕೌಶಲ್ ಸೋಮಯ್ಯ ಎಂಬವರು ಅವರ ಜೀಪಿನಲ್ಲಿ ಪೆರಾಜೆಯ ಬಳಿ ಬರುತ್ತಿರುವಾಗ ಕೆಎ-12-ಎಲ್-5954ರ ಮೋಟಾರು ಬೈಕನ್ನು ಅದರ ಸವಾರನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೌಶಲ್‌ ಸೋಮಯ್ಯನವರ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ವಿರಾಜಪೇಟೆ ಬಳಿಯ ಬಿ.ಶೆಟ್ಟಿಗೇರಿ ನಿವಾಸಿ ಪಣಿ ಎರವರ ಅಪ್ಪು ಎಂಬವರು ದಿನಾಂಕ 22/02/2020ರಂದು ಮನೆಯಿಂದ ಹೋದವರು ಮರಳಿ ಬಾರದೆ ಇದ್ದು ದಿನಾಂಕ 29/02/2020ರಂದು ಅಪ್ಪುರವರ ಮೃತದೇಹವು ಕುಟ್ಟಂದಿ ನಿವಾಸಿ ಕರ್ತಮಾಡ ನಾಣಯ್ಯನವರ ತೋಟದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.