Crime News

ಆನ್ ಲೈನ್ ಹೂಡಿಕೆಯಲ್ಲಿ ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ವಂಚನೆ, ಆರೋಪಿಗಳ ಬಂಧನ:

ಸಾರ್ವಜನಿಕರಿಗೆ ಹಣದ ಆಮಿಷವೊಡ್ಡಿ, ದುಪ್ಪಟ್ಟು ಹಣ ಗಳಿಸುವ ಆಸೆ ತೋರಿಸಿ ಅವರಿಂದ ಹಣವನ್ನು ಹೂಡಿಕೆ ಮಾಡಿ ವಂಚಿಸುವ ಜಾಲವನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರ ನೇತೃತ್ವದ ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.

ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ನಿವಾಸಿಗಳಾದ ಡ್ಯಾನಿ, ಜಾನ್ ಮತ್ತು ಶಶಿಕಾಂತ್ ಎಂಬುವವರು 50 ಲಕ್ಷ ಹಣ ಠೇವಣಿ ಇರಿಸಿ ಕ್ಯಾಪಿಟಲ್ ರಿಲೇಶನ್ ಡಾಟ್ ಇನ್ ಎಂಬ ಹಣ ಚಲಾವಣೆ ಮಾಡುವ ವೆಬ್ ಸೈಟ್ ನಡೆಸುತ್ತಿರುವುದಾಗಿ ಮಡಿಕೇರಿ ನಗರದ ನಿವಾಸಿ ನವೀನ್ ಎಂಬುವವರಿಗೆ ತಿಳಿಸಿ ಅಧಿಕ ಲಾಭ ಗಳಿಸಲು ಹಣ ತೊಡಗಿಸಲು ಹೇಳಿದ ಮೇರೆ ನವೀನ್ ರವರು ದಿನಾಂಕ: 23-10-2019 ರಂದ 10 ಲಕ್ಷ ರೂ ಹಣವನ್ನು ಅವರಿಗೆ ನೀಡಿದ್ದರು . ಆದರೆ ಇದುವರೆಗೂ ಅರೋಪಿಗಳೂ ಯಾವುದೇ ಹಣ ಮರುಪಾವತಿ ಮಾಡದೇ ವಂಚಿಸಿರುವುದಾಗಿ ದಿನಾಂಕ: 02-03-2020 ರಂದು ನೀಡಿದ ಪುಕಾರಿನ ಮೇರೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು .

Capitalrelations.in ಎಂಬ Website ನ್ನು ಬೆಂಗಳೂರು ಮೂಲದ Website Developers ರವರ ಕಡೆಯಿಂದ ತಯಾರಿಸಿಕೊಂಡ ಕುಶಾಲನಗರದ ಏಳು ಜನ ಆರೋಪಿತರು ಅವರ ಆಪ್ತ ಸ್ನೇಹಿತರ ಮುಖಾಂತರ ಸಾರ್ವಜನಿಕರಿಗೆ Capitalrelations.in ಎಂಬ Website ನಲ್ಲಿ ಹಣವನ್ನು ಹೂಡಿಕೆ ಮಾಡಿದಲ್ಲಿ ಬಹಳ ಸುಲಭವಾಗಿ ಹಣ ಸಂಪಾದನೆ ಮಾಡಬಹುದೆಂಬ ಆಮಿಷವೊಡ್ಡಿ ಸುಮಾರು 3000ಕ್ಕೂ ಹೆಚ್ಚು ಸಾರ್ವಜನಿಕರಿಂದ ಹಣವನ್ನು ಹೂಡಿಕೆ ಮಾಡುವಂತೆ ಮಾಡಿ ಅವರಿಗೆ ಮೋಸ ಮಾಡಿರುವುದಾಗಿದೆ. ಸದರಿ 7 ಜನ ಆರೋಪಿಗಳಲ್ಲಿ ಮೂರು ಜನ ಆರೋಪಿತರುಗಳನ್ನು ಬಂದಿಸಲಾಗಿದ್ದು, ದಸ್ತಗಿರಿಯಾಗಿರುವ ಆರೋಪಿಗಳ ವಿವರ ಈ ಕೆಳಕಂಡಂತಿದೆ:

1. ಎ. ಜಾನ್ ತಂದೆ ಲೇ|| ಆರೋಗ್ಯ ಸ್ವಾಮಿ, 45 ವರ್ಷ, ರಿಯಲ್ ಎಸ್ಟೇಟ್ ಕೆಲಸ, ವಾಸ: 3ನೇ ಬ್ಲಾಕ್, ತ್ಯಾಗರಾಜರಸ್ತೆ, ಕುಶಾಲನಗರ. 2. ಶಶಿಕಾಂತ್ @ ಶಮ್ಮಿ ತಂದೆ ಮೋಹನ್, 37 ವರ್ಷ, ಬಿ.ಎಸ್.ಎಂ ಮೋಟಾರ್ಸ್ ನಲ್ಲಿ ಸೇಲ್ಸ್ಎಕ್ಸಿಕ್ಯೂಟೀವ್, ವಾಸ 4ನೇ ಬ್ಲಾಕ್, ಶಿವರಾಮಕಾರಾಂತ್ ಬಡಾವಣೆ, ಕುಶಾಲನಗರ. 3. ಆಂಟೋನಿ ಡಿ. ಕುನ್ನಾ @ ಡ್ಯಾನಿ ತಂದೆ ಜರ್ಮಿ. ಡಿ. ಕುನ್ನಾ, 39 ವರ್ಷ, ದಿವಾನ್ ಸಿಂಗ್

ಫೈನಾನ್ಸ್ ಕಾರ್ಪೊರೇಷನ್ ನಲ್ಲಿ ಮೇನೇಜರ್, ವಾಸ: 1ನೇ ಬ್ಲಾಕ್, ಬಸವೇಶ್ವರ ಬಡಾವಣೆ, ಕುಶಾಲನಗರ.

Capitalrelations.in ನ ವ್ಯವಹಾರದಲ್ಲಿ ಶಶಿಕಾಂತ್ ಎಂಬ ಆರೋಪಿಯು Admin ಕಾರ್ಯನಿರ್ವಹಿಸುತ್ತಿದ್ದು, ಈ ವ್ಯವಹಾರದಲ್ಲಿ ಹಣ ತೊಡಗಿಸಲು ಇಚ್ಚಿಸುವ ಸಾರ್ವಜನಿಕರು  ಪ್ರಥಮವಾಗಿ ಶಶಿಕಾಂತ್ ಎಂಬುವವರನ್ನು ಸಂಪರ್ಕಿಸಿ ಅವರಿಂದ User ID, Password ನೊಂದಿಗೆ ಮೂರು EPIN ಖರೀದಿಸಬೇಕಾಗಿದ್ದು, (ತಲಾ ಒಂದು EPIN ಗೆ 1000 ದಂತೆ) ಇದಕ್ಕೆ 3000 ರೂಗಳನ್ನು ನೀಡಬೇಕಾಗಿದ್ದು, ಸದರಿ ಹಣವು ಆರೋಪಿಗಳ ಖಾತೆಗೆ ಜಮಾವಣೆಯಾಗುತ್ತದೆ. Capitalrelations.in ನಲ್ಲಿ ಹಣ ತೊಡಗಿಸಲು ಇಚ್ಚಿಸುವವರು Website ಗೆ User ID, Password ಆಗಿ ಸದರಿ EPIN ನ್ನು ಬಳಸಿ ಒಂದು EPIN ಗೆ 3000 ರೂ ಗಳಂತೆ ಹಣವನ್ನು ತೊಡಗಿಸುತ್ತಿದ್ದು,  ಪ್ರತಿದಿನ ಒಂದು User ID ಯಿಂದ ಮೂರು E-PIN ನ್ನು ಮಾತ್ರ ಬಳಸ ಬಹುದಾಗಿರುತ್ತದೆ, ಹಣವನ್ನು ಹೂಡಿಕೆ ಮಾಡಲು Login ಆದ ಕೂಡಲೇ ತಾವು ಹೂಡಿಕೆ ಮಾಡುತ್ತಿರುವ 3000 ಹಣವು ಯಾರ ಖಾತೆಗೆ ಹೋಗಬೇಕು ಎಂಬುದು ಮಾನೀಟರ್ ನಲ್ಲಿ ತೋರಿಸುತ್ತಿದ್ದು, ಹೂಡಿಕೆದಾರರು ಹಣವನ್ನು ಪಡೆಯುವ ಸದಸ್ಯರ ಮೊಬೈಲ್ ಗೆ ಕರೆ ಮಾಡಿ ತಾವು Google Pay, Phone Pay ಅಥವಾ Net Banking ಮೂಲಕ ಹಣವನ್ನು ಹಾಕುತ್ತಿರುವುದಾಗಿ ತಿಳಿಸಿ, ಹಣ ಸಂದಾಯವಾದ ರಸೀದಿಯನ್ನು Upload ಮಾಡಿದ ನಂತರ ಹಣ ಹೂಡಿಕೆ ಮಾಡಿದ ವ್ಯಕ್ತಿಯ Seniority ಪ್ರಾರಂಭವಾಗುತ್ತದೆ. ಈ ವ್ಯವಹಾರದಲ್ಲಿ ಪ್ರಥಮ ಬಾರಿ ಹೂಡಿಕೆ ಮಾಡಿದ ವ್ಯಕಿಗೆ ಏಳು ದಿನಗಳ ನಂತರ ಹಣ ದ್ವಿಗುಣಗೊಂಡು ತಲಾ ಒಂದು E-PIN ಗೆ 6000 ರೂ ಗಳು ಆತನ ಬ್ಯಾಂಕ್ ಖಾತೆಗೆ ಸಂದಾಯ ವಾಗುತ್ತದೆ.

Capitalrelations.in ನಲ್ಲಿ ಹಣವನ್ನು ಹೂಡಿಕೆ ಮಾಡಿ ಮೊದಮೊದಲು ಲಾಭ ಪಡೆದಂತಹ ಸಾರ್ವಜನಿಕರು, ಹಣದ ದುರಾಸೆಯಿಂದ ಬೇರೆ ಬೇರೆ ಹೆಸರುಗಳಲ್ಲಿ E-PIN ಪಡೆದುಕೊಂಡು Login ಆಗಿ ಹಣವನ್ನು ಹೂಡಿಕೆ ಮಾಡಿ, ಈಗ ಸರಿ ಸುಮಾರು 15 ಕೋಟಿಯಷ್ಟು ಹಣದ ವ್ಯವಹಾರ ನಡೆದಿರುವುದು ಹಾಗೂ ಈ ಜಾಲ ಕರ್ನಾಟಕದಾದ್ಯಂತ ಹಬ್ಬಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.

ಸದರಿ ವ್ಯವಹಾರವು ಬ್ಯಾಂಕ್ ಖಾತೆಗಳ ಮುಖಾಂತರವೆ ನಡೆಯುತ್ತಿದ್ದರೂ ಸಹ ಇಂತಹ ವ್ಯವಹಾರಗಳು ಕಾನೂನು ಬಾಹಿರವಾಗಿರುತ್ತದೆ. ಇಂತಹ ವ್ಯವಹಾರಗಳನ್ನು ಮಾಡುವ ಅನೇಕ Website ಗಳು ಸಹಾಯ ಹಸ್ತ ನೀಡುವ ಸೋಗಿನಲ್ಲಿ ಹಾಲಿ ಅಂತರ್ಜಾಲದಲ್ಲಿ ಚಾಲ್ತಿಯಲ್ಲಿರುತ್ತವೆ…

ಉದಾಹರಣೆಗೆ : helpingplanet.in, kinghelping.in, justmoney.in, crowdfunding.in, caringclub.in, infiniteclub.in

ಕೊಡಗು ಜಿಲ್ಲೆಯ ಸಾರ್ವಜನಿಕರು ಹಣದ ಆಮಿಷವೊಡ್ಡುವ ವ್ಯಕ್ತಿಗಳು ತಮ್ಮನ್ನು ಸಂಪರ್ಕಿಸಿದಾಗ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಮುಂದೆ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕಾರ ನೀಡಲು ಕೋರಿದೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 29-02-2020 ರಂದು ವಿರಾಜಪೇಟೆ ತಾಲ್ಲೂಕು ಹಳ್ಳಿಗಟ್ಟು ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಗೋಣಿಕೊಪ್ಪ ನಿವಾಸಿ ನಾಗರಾಜು ಎಂಬುವವರು ಬೈಕನ್ನು ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಗಾಯಾಳುವಿನ ಸಹೋದರ ಮಣಿಕಂಠ ಎಂಬುವವರು ದಿನಾಂಕ: 02-03-2020 ರಂದು ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 02-03-2020 ರಂದು ವಿರಾಜಪೇಟೆ ತಾಲ್ಲೂಕು ಪೊನ್ನಂಪೇಟೆ ಗ್ರಾಮದ ಕಾರು ನಿಲ್ದಾಣದ ಬಳಿ ಕೆ-12-ಬಿ-0781 ರ ಆಟೋರಿಕ್ಷಾವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ಬದಿಯಲ್ಲಿ ನಿಂತಿದ್ದ ಶಾಲಾ ವಿದ್ಯಾರ್ಥಿನಿಯೋರ್ವಳಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯಗೊಂಡಿದ್ದು ಈ ಬಗ್ಗೆ ಗಾಯಾಳುವಿನ ತಂದೆ ಕೃಷ್ಣ ಎಂಬುವವರು ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ    

          ದಿನಾಂಕ: 29-02-2020 ರಂದು ಸೋಮವಾರಪೇಟೆ ತಾಲ್ಲೂಕು ಚಿಕ್ಕಾಕುಂದ ಗ್ರಾಮದ ಬಳಿ ಮುಖಱಯ ರಸ್ತೆಯಲ್ಲಿ ಕೆಎ-12-ಎ-9764 ರ ಪಿಕ್ ಅಪ್ ಜೀಪನ್ನು ಅದರ ಚಾಲಕ ಖಲಂದರ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಎಲ್-1504 ರ ಟಿವಿಎಸ್ ಎಕ್ಸೆಲ್ ಸೂಪರ್ ಸ್ಕೂಟರ್ ಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ನಲ್ಲಿದ್ದ ಬಷೀರ್ ಅಹಮ್ಮದ್ ಎಂಬುವವರು ಗಾಯಗೊಂಡಿದ್ದು ಪಿಕ್ ಅಪ್ ಚಾಲಕನು ನಿಲ್ಲಿಸದೇ ಹೋಗಿದ್ದು ಈ ಬಗ್ಗೆ ರೆಹಮಾನ್ ಖಾನ್ ಎಂಬುವವರು ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

          ದಿನಾಂಕ: 02-03-2020 ರಂದು ಸೋಮವಾಪೇಟೆ ತಾಲ್ಲೂಕು ತೊರೆನೂರು ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-45-ಇಎ-1963 ರ ಬೈಕನ್ನು ಅದರ ಸವಾರ ಸಣ್ಣಪುಟ್ಟ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ಪಾರ್ವತಮ್ಮ ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.