Crime News

ಬೈಕ್ ಕಳವು ಪ್ರಕರಣ

          ದಿನಾಂಕ: 29-02-2020 ರಂದು ಮಡಿಕೇರಿ ತಾಲ್ಲೂಕು ಕರಿಕೆ ಗ್ರಾಮದ ಕಾವೇರಿ ಬಾರ್ ಬಳಿ ನಿಲ್ಲಿಸಿದ್ದ ತೆನೆಗುಂಡಿ ನಿವಾಸಿ ರಮೇಶ್ ಎಂಬುವವರ ಕೆಎ-12-ಇ-6678 ರ ಯಮಹ 135 ಬೈಕನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 03-03-2020 ರಂದು ನೀಡಿದ ಪುಕಾರಿನ ಮೇರೆ ಭಾಗಮಂಡಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

          ದಿನಾಂಕ: 23-02-2020 ರಂದು ಸೋಮವಾರಪೇಟೆ ತಾಲ್ಲೂಕು ಬಾಣಾವಾರ ಗ್ರಾಮದ ನಿವಾಸಿ ವಸಂತಕುಮಾರ್ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ಜಗದೀಶ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಅವಾಚ್ಯ ಪದಗಳಿಂದ ಬೈದು ಕಲ್ಲಿನಿಂದ ಹಲ್ಲೆ ಮಾಡಿ ಹಾಗೂ ವಸಂತ್ ರವರ ಪತ್ನಿಯವರಿಗೂ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ದಿನಾಂಕ: 03-03-2020 ರಂದು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

          ದಿನಾಂಕ: 03-03-2020 ರಂದು ಸೋಮವಾರಪೇಟೆ ತಾಲ್ಲೂಕು ರಾಮೇನಗಳ್ಳಿ ಗ್ರಾಮದ ನಿವಾಸಿ ಮನೋಜ್ ಕುಮಾರ್ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ರುದ್ರಪ್ಪ ಮತ್ತು ನಿರಂಜನ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಮನೋಜ್ ಕುಮಾರ್ ರವರ ನೀಡಿದ ಪುಕಾರನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಜೀಪು ಅಪಘಾತ, ವ್ಯಕ್ತಿ ಸಾವು

          ದಿನಾಂಕ: 03-03-2020 ರಂದು ವಿರಾಜಪೇಟೆ ತಾಲ್ಲೂಕು ಕಾರ್ಮಾಡು ನಿಟ್ಟೂರು ಗ್ರಾಮದ ಬಳಿ ಮುಖ್ಯಯ ರಸ್ತೆಯಲ್ಲಿ ಕೆಎ-36-ಎಂ-0497ಬ ರ ಜೀಪನ್ನು ಅದರ ಚಾಲಕ ರವಿ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂಧ ಜೀಪು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿ ಬಿದ್ದಿದ್ದರಿಂದ ಜೀಪಿನಲ್ಲಿದ್ದ ರಘು , ವಿಜಯ ಎಂಬುವವರು ಗಾಯಗೊಂಡು ಹರೀಶ ಎಂಬುವವರು ಮೃತಪಟ್ಟಿದ್ದು ಈ ಬಗ್ಗೆ ಪ್ರಭು ಎಂಬುವವರು ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

          ದಿನಾಂಕ: 02-03-2020 ರಂದು ರಾತ್ರಿ ಆನಂದಪುರ ವಿರಾಜಪೇಟೆ ತಾಲ್ಲೂಕು ಪುಲಿಯೇರಿ ಆನಂದಪುರ ನಿವಾಸಿ ಎನೋಸ್ ಮನೋಹರ ಎಂಬುವವರು ಅಮ್ಮತ್ತಿ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವಾಗ ಮಂದಣ್ಣ ಮತ್ತು ಚೋವಂಡ ದಿತಿನ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿದ್ದು  ಈ ಬಗ್ಗೆ ಎನೋಸ್ ಮನೋಹರ ರವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.