Crime News

ಹೊಡೆದಾಟ ಪ್ರಕರಣ

          ದಿನಾಂಕ: 04-03-2020 ರಂದು ರಾತ್ರಿ ವಿರಾಜಪೇಟೆ ನಗರದ ಶಿವಾಸ್ ಜಂಕ್ಷನ್ ಬಳಿ ಎಂ.ಪಿ ಕಾವೇರಪ್ಪ, ಪಿ.ಸಿ ಬೋಪಣ್ಣ, ಪಿ.ಜಿ ಸೋಮಣ್ಣ, ಪಿ.ಕೆ ಕಾಳಯ್ಯ, ಜಾಫರ್ ಮತ್ತು ರವಿ ಎಂಬುವವರು ಸಾರ್ವಜನಿಕ ನೆಮ್ಮದಿಗೆ ತೊಂದರೆಯಾಗುವಂತೆ ಪರಸ್ಪರ ಜಗಳ ಮಾಡುತ್ತಾ ಕೈ ಮಿಲಾಯಿಸಿ ತಳ್ಳಾಡಿಕೊಂಡು ಹೊಡೆದಾಟ ಮಾಡಿಕೊಂಡಿದ್ದು  ಈ ಬಗ್ಗೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ

          ದಿನಾಂಕ: 05-03-2020 ರಂದು ವಿರಾಜಪೇಟೆ ತಾಲ್ಲೂಕು ಮಗ್ಗುಲ ಗ್ರಾಮದ ನಿವಾಸಿ ವಾಟೇರಿರ ಗಣಪತಿ ಎಂಬುವವರ ಮನೆಗೆ ವಿರಾಜಪೇಟೆ ಸೆಸ್ಸ್ಕ್ ಜೂನಿಯರ್ ಪವರ್ ಮ್ಯಾನ್ ಮಂಜುನಾಥ ಪಟ್ಟೇದ ಎಂಬುವವರು ಮೀಟರ್ ರೀಡರ್ ಪ್ರತಾಪ್ ಎಂಬುವವರೊಂದಿಗೆ ಮೀಟರ್ ರೀಡಿಂಗ್ ವ್ಯಾಲಿಡೇಶನ್ ಕರ್ತವ್ಯಕ್ಕೆ ಹೋಗಿದ್ದರು. ಎರಡು ವಿದ್ಯುತ್ ಮೀಟರ್ ಪರಿಶೀಲಿಸಿ ಬಿಲ್ಲನ್ನು ನೀಡಿದಾಗ ಗಣಪತಿರವರು ಅದನ್ನು ಬಿಲ್ ಮೊತ್ತ ಅಧಿಕವಾಗಿರುವುದಾಗಿ ಹೇಳಿ ತಿರಸ್ಕರಿಸಿರುತ್ತಾರೆ. ನಂತರ ಮಂಜುನಾಥರವರು ಪಕ್ಕದಲ್ಲಿದ್ದ ವಿದ್ಯುತ್ ಕಂಬವನ್ನು ಪರಿಶೀಲಿಸಿಲು ಹೋಗುವಾಗ ಗಣಪತಿರವರು ಮಂಜುನಾಥ ರವರನ್ನು ತಡೆದು ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕಸ್ಮಿಕ ಸಾವು

          ದಿನಾಂಕ: 04-03-2020 ರಂದು ವಿರಾಜಪೇಟೆ ತಾಲ್ಲೂಕು ದೇವಣಗೇರಿ ಗ್ರಾಮದ ನಿವಾಸಿ ಸನ್ನಿ ಎಂಬುವವರು ಸ್ನಾನ ಮಾಡಲು ಕೆರೆಗೆ ಹೋಗಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಳು ಮೆಣಸು ಕಳವು ಪ್ರಕರಣ

          ದಿನಾಂಕ: 04-03-2020 ರಂದು ರಾತ್ರಿ ವಿರಾಜಪೇಟೆ ತಾಲ್ಲೂಕು ದೇವರಪುರ ಹೆಬ್ಬಾಲೆ ಗ್ರಾಮದ ನಿವಾಸಿ ಕಿರಣ್ ಕುಮಾರ್ ಎಂಬುವವರು ಅವರ ಮನೆಯ ಮುಂದೆ ಒಣಗಲು ಹಾಕಿದ್ದ ರೂ. 30,000 ಮೌಲ್ಯದ 1 ಕ್ವಿಂಟಾಲ್ ಕಾಳುಮೆಣಸನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅದೇ ಗ್ರಾಮದ ನಿವಾಸಿಗಳಾದ ತುಂಡು ಮತ್ತು ರಾಜು ಎಂಬುವವರು ಕಳುವು ಮಾಡಿರುವ ಸಂಶವಿರುವುದಾಗಿ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿದ್ದಾರೆ.

ವಿದ್ಯುತ್ ತಂತಿ ಸ್ಪರ್ಶ, ಇಬ್ಬರು ಮಹಿಳೆಯರ ಸಾವು.

          ದಿನಾಂಕ: 05-03-2020 ರಂದು ವಿರಾಜಪೇಟೆ ತಾಲ್ಲೂಕು ಕುಂದ ಗ್ರಾಮದ ರಮೇಶ್ ಎಂಬುವವರು ಕಾಫಿ ತೋಟದಲ್ಲಿ ಕಾಳು ಮೆಣಸು ಕುಯ್ಯುವ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆಯರಿಬ್ಬರು ಕಾಳು ಮೆಣಸು ಕುಯ್ಯಲು ಉಪಯೋಗಿಸುತ್ತಿದ್ದ ಅಲ್ಯುಮಿನಿಯಂ ಏಣಿಯು ತೋಟದ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿ ಮೃತಪಟ್ಟಿರುತ್ತಾರೆ. ತೋಟದ ಮಾಲೀಕರಾದ ರಮೇಶ್ ಮತ್ತು ತೋಟದ ಉಸ್ತುವಾರಿ ದಯಾನಂದ್ ಎಂಬುವವರು ಕಾಫಿ ತೋಟದ ಮೇಲ್ಭಾಗದಲ್ಲಿ ವಿದ್ಯುತ್ ತಂತಿ ಹಾದುಹೋಗಿದ್ದರೂ ಸಹಾ ಅಜಾಗರೂಕತೆಯಿಂದ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಕಾರ್ಮಿಕರಿಂದ  ಕೆಲಸ ಮಾಡಿಸಿದ ಪರಿಣಾಮ ಈ ದುರ್ಘಟನೆ ನಡೆದಿದ್ದು ಈ ಬಗ್ಗೆ ಜಿ.ಎಸ್ ನಂಜಪ್ಪ ಎಂಬುವವರು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಳು ಮೆಣಸು ಕಳವು ಪ್ರಕರಣ

          ದಿನಾಂಕ: 05-03-2020 ರಂದು ವಿರಾಜಪೇಟೆ ತಾಲ್ಲೂಕು ನಿಟ್ಟೂರು ಗ್ರಾಮದ ನಿವಾಸಿ ದೇವಯ್ಯ ಎಂಬುವವರು ಅವರ ತಾಯಿಗೆ ಸೇರಿದ ತೋಟಕ್ಕೆ ಹೋದಾಗ ಅದೇ ಗ್ರಾಮದ ನಿವಾಸಿಗಳಾದ ಮಲ್ಲೇಂಗಡ ಪೊನ್ನಪ್ಪ ಮತ್ತು ಪಾಪು ಎಂಬುವವರು ರೂ. 3000 ಮೌಲ್ಯದ ಹಸಿ ಕಾಳು ಮೆಣಸನ್ನು ಕಳವು ಮಾಡುತ್ತಿದ್ದು ಈ ಬಗ್ಗೆ ದೇವಯ್ಯ ರವರು ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

          ದಿನಾಂಕ: 05-03-2020 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ನಿವಾಸಿ ಕಾವೇರಪ್ಪ ಎಂಬುವವರು ಬಸ್ ಕಂಡಕ್ಟರ್ ಕೆಲಸ ಮಾಡುತ್ತಿದ್ದು ಬಸ್ಸಿನಲ್ಲಿ ಹೋಗುತ್ತಿರುವಾಗ ಟಿ.ಶೆಟ್ಟಿಗೇರಿ ನಿವಾಸಿ ಚೇತನ್ ಎಂಬುವವರು ಬಸ್ಸನ್ನು ಟಿ.ಶೆಟ್ಟಿಗೇರಿ ಗ್ರಾಮದ ಬಳಿ ಅಡ್ಡಗಟ್ಟಿ ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಪದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಕಾವೇರಪ್ಪ ರವರು ನೀಡಿದ ಪುಕಾರಿನ ಮೇರೆ ಶ್ರೀಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

          ದಿನಾಂಕ: 05-03-2020 ರಂದು ವಿರಾಜಪೇಟೆ ತಾಲ್ಲೂಕು ಪೂಜೆಕಲ್ಲು ನಿವಾಸಿ ಕರ್ಣ ಎಂಬುವವರಿಗೆ ಅದೇ ಗ್ರಾಮದ ನಿವಾಸಿಗಳಾದ ಷಣ್ಮುಗ ಮತ್ತು ಅವರ ಕೆಲಸದವರಾದ ಬೊಳಿಯ ಎಂಬುವವರು ಜೀಪಿಗೆ ದಾರಿ ಕೊಡುವ ವಿಚಾರದಲ್ಲಿ ಜಗಳಮಾಡಿ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಕರ್ಣ ರವರು ನೀಡಿದ ಪುಕಾರಿನ ಮೇರೆ ಕುಟ್ಟ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದೇವಸ್ಥಾನದ ಬೀಗ ಮುರಿದು ಹುಂಡಿ ಹಣ ಕಳವು.

          ದಿನಾಂಕ: 03-03-2020 ರಂದು ರಾತ್ರಿ ವಿರಾಜಪೇಟೆ ತಾಲ್ಲೂಕು ಪಾಲಿಬೆಟ್ಟ ಗ್ರಾಮದ ಶ್ರೀ ಗಣಪತಿ ದೇವಸ್ಥಾನದ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಒಡೆದು ಒಳಗಿದ್ದ ಹುಂಡಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಹುಂಡಿಯಲ್ಲಿ ಅಂದಾಜು 23,000 ಹಣವಿರುವುದಾಗಿ ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

          ದಿನಾಂಕ: 05-03-2020 ರಂದು ಸೋಮವಾರಪೇಟೆ ತಾಲ್ಲೂಕು ನೆಲ್ಯಹುದಿಕೇರಿ ನಿವಾಸಿ ಮಧು ಎಂಬುವವರಿಗೆ ಅದೇ ಗ್ರಾಮದ ನಿವಾಸಿಗಳಾದ ಅಪ್ಪು, ಸುರೇಶ, ಚಿಂಚು ಮತ್ತು ಪ್ರದೀಪ ಎಂಬುವವರು ಕೆಲಸದ ವಿಚಾರದಲ್ಲಿ ಜಗಳಮಾಡಿ ಹಲ್ಲೆ ಮಾಡಿ ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಮಧು ರವರು ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆ ಕಳವು ಪ್ರಕರಣ

          ದಿನಾಂಕ: 02-03-2020 ರಂದು ರಾತ್ರಿ ಸೋಮವಾರಪೇಟೆ ತಾಲ್ಲೂಕು ಮತ್ತಿಕಾಡು ಗ್ರಾಮದ ದೇವಿ ಎಸ್ಟೇಟ್ ನಿವಾಸಿ ಶ್ರೀಮತಿ ಶಾರದಾ ಮೇದಪ್ಪ ಎಂಬುವವರ ಮನೆಯ ಮೇಲ್ಚಾವಣಿಯ ಹಂಚುಗಳನ್ನು ಯಾರೋ ಕಳ್ಳರು ತೆಗೆದು ಒಳನುಗ್ಗಿ ರೂ. 8000 ಮೌಲ್ಯದ ದಿನಬಳಕೆ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 05-03-2020 ರಂದು ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.