Crime News

ಕಳವು ಪ್ರಕರಣ

ದಿನಾಂಕ 04-06-2018 ರ ರಾತ್ರಿ ಸಮಯದಲ್ಲಿ ಮಡಿಕೇರಿಯ ಆಕಾಶವಾಣಿ ವಸತಿ ಗೃಹಗಳಿಗೆ ಯಾರೋ ಕಳ್ಳರು ಬೀಗ ಮುರಿದು ಒಳನುಗ್ಗಿದ್ದು, ಬಾಲನ್ ಎಂಬುವವರ ವಸತಿ ಗೃಹದಿಂದ ಒಂದು ಲ್ಯಾಪ್ ಟಾಪ್, 4 ಹಾರ್ಡ್ ಡಿಸ್ಕ್ ಗಳು, ಎಲ್.ಇ.ಡಿ ಟಿವಿ, 40,000 ರೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಮತ್ತೆರಡು ವಸತಿ ಗೃಹಗಳ ಬೀಗ ಮುರಿದು ಕಳ್ಳತನಕ್ಕೆ ಪ್ರಯತ್ನಿಸಿದ್ದು, ಈ ಬಗ್ಗೆ ಬಾಲನ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಲಾರಿ ಡಿಕ್ಕಿ ವ್ಯಕ್ತಿಯ ದುರ್ಮರಣ

ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಯಾಗಿ ಪಕ್ಕದಲ್ಲೇ ನಿಂತಿದ್ದ ವ್ಯಕ್ತಿ ಮೃತಪಟ್ಟ ಘಟನೆ ಸುಂಟಿಕೊಪ್ಪ ನಗರದ ಮಡಿಕೇರಿ ಕುಶಾಲನಗರ ಹೆದ್ದಾರಿಯಲ್ಲಿ ವರದಿಯಾಗಿದೆ. ದಿನಾಂಕ 04-05-2018 ರಂದು ಮಡಿಕೇರಿಯಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧದ ಕಟ್ಟಡಕ್ಕೆ ಕಾಂಕ್ರೀಟ್ ತುಂಬಿಸಿಕೊಂಡು ಕುಶಾಲನಗರದಿಂದ ಬರುತ್ತಿದ್ದ ಲಾರಿಯು ಸುಂಟಿಕೊಪ್ಪ ನಗರದ ವಂದನಾ ಬಾರ್ ಪಕ್ಕ ಅಪಘಾತವಾಗಿ ಮಗುಚಿ ಬಿದ್ದಿದ್ದು, ಸದರಿ ಲಾರಿಯನ್ನು ದಿನಾಂಕ 05-06-2018 ರಂದು ಕ್ರೇನ್ ಮೂಲಕ ಎತ್ತಿ ನಿಲ್ಲಿಸುತ್ತಿರುವಾಗ ಕುಶಾಲನಗರದ ಕಡೆಯಿಂದ ಕೆಎ-01-ಎಸಿ-3690 ರ ಲಾರಿಯನ್ನು ಚಾಲಕ ಗಿರೀಶ್ ಎಂಬುವವರು ಅಜಾಗರಕತೆಯಿಂದ ಚಾಲನೆ ಮಾಡಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿಪಡಿಸಿ ಲಾರಿಯ ಪಕ್ಕದಲ್ಲೇ ನಿಂತಿದ್ದ ರಾಜನ್ ಎಂಬವರ ಮೇಲೆ ಲಾರಿ ಹರಿದು ಮೃತಪಟ್ಟಿದ್ದು, ಪ್ರಶಾಂತ್ ಎಂಬವರಿಗೂ ಸಹಾ ಗಾಯವಾಗಿದ್ದು, ಈ ಬಗ್ಗೆ ಪುರುಷೋತ್ತಮ ರೈ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

ದಿನಾಂಕ 27-05-2018 ರಂದು ಸೋಮವಾರಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ನಿವಾಸಿಯಾದ ಪ್ರಕಾಶ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಕೀಯನ್ನು ಮನೆಯ ಹಿಂಬದಿಯಲ್ಲಿಟ್ಟಿದ್ದ ಡಬ್ಬಿಯಲ್ಲಿ ಇಟ್ಟು ಶನಿವಾರಸಂತೆಗ ಹೋಗಿದ್ದು, ಸಂಜೆ ಬರುವಾಗ ಕೀ ಇಟ್ಟಿದ್ದ ಸ್ಥಳದಲ್ಲಿ ಇಲ್ಲದೇ ಇದ್ದು, ಸ್ಕ್ರೂಡ್ರೈವರ್ ನಿಂದ ಬಾಗಿಲನ್ನು ತೆಗೆದು ಒಳ ಹೋಗಿ ನೋಡುವಾಗ ಬೀರುವಿನಲ್ಲಿಟ್ಟಿದ್ದ 75,000 ರೂ ನಗದು ಹಣ ಹಾಗೂ ಅಂದಾಜು 30 ಗ್ರಾಂ ಚಿನ್ನದ ಆಭರಣಗಳನ್ನು ಕಳವು ಮಾಡಿರುವುದು ಕಂಡು ಬಂದಿದ್ದು, ಈ ಬಗ್ಗೆ ಪ್ರಕಾಶರವರು ದಿನಾಂಕ 05-06-2018 ರಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published.