Crime News

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

  ಸಿದ್ದಾಪುರ ಪೊಲೀಸ್‍ ಠಾಣಾ ವ್ಯಾಪ್ತಿಯ ಮಾಲ್ದಾರೆ ಗ್ರಾಮದ ಮಲಾತ್‍ಪುರದಲ್ಲಿ ವಾಸವಾಗಿದ್ದ ಹೆಚ್‍.ಜಿ.ಗೋವಿಂದ ಎಂಬವರು ದಿನಾಂಕ 7-3-2020 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಅಪಘಾತ:

ದಿನಾಂಕ 06-03-2020 ರಂದು ವಿ.ಸ್ಕಂದ, ಬೆಂಗಳೂರು ರವರು ತನ್ನ ಸ್ನೇಹಿತರೊಂದಿಗೆ ಮಡಿಕೇರಿಗೆ ಪ್ರವಾಸಕ್ಕೆಂದು ರಾತ್ರಿ 09-00 ಗಂಟೆಗೆ ಬೆಂಗಳೂರಿನಿಂದ ಕಾರಿನಲ್ಲಿ ಹೊರಟು ಅಲ್ಲಿಂದ ನಂಜನಗೂಡು ದೇವಾಸ್ಥಾನಕ್ಕೆ ಭೇಟಿ ನೀಡಿ ಬೆಳಗಿನ ಸಮಯ ಮಡಿಕೇರಿಗೆ ಹೊರಟಿರುತ್ತಾರೆ. ಕಾರನ್ನು ರಜತ ಎಂಬವರು ಚಾಲನೆ ಮಾಡಿಕೊಂಡು ಬರುತ್ತಿರುವಾಗ ಕುಶಾಲನಗರ ನಿಸರ್ಗಧಾಮ ಬಳಿ ಕಾರು ಏಕಾ ಏಕಿ ರಸ್ತೆಯ ಬಲ ಭಾಗದಲ್ಲಿದ್ದ ಸೂಚನಾ ಫಲಕದ ಕಂಬಕ್ಕೆ ತಾಗಿ ಅಲ್ಲಿಂದ ಮುಂದೆ ರಸ್ತೆ ಬದಿಯ ಹಳ್ಳಕ್ಕೆ ಮಗುಚಿಕೊಂಡ ಪರಿಣಾಮ ಕಾರಿನಲ್ಲಿದ್ದ ವಿವೇಕ್, ಮನೋಜ್, ಹಾಗೂ ಕಾರು ಚಾಲನೆ ಮಾಡುತ್ತಿದ್ದ ರಜತ್ ರವರುಗಳಿಗೆ ಗಾಯಗಳಾಗಿದ್ದು, ಕುಶಾಲನಗರ ಟ್ರಾಫಿಕ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ:

ಕುಶಾಲನಗರದ ಕೂಡ್ಲೂರು ಗ್ರಾಮದ ನಿವಾಸಿ ರಂಗಸ್ವಾಮಿ ಎಂಬವರು ದಿನಾಂಕ 7-3-2020 ರಂದು ತಮ್ಮ ಬಾಪ್ತು ಆಟೋ ರಿಕ್ಷಾವನ್ನು ಕುಶಾಲನಗರದ ಕನ್ನಡಾಂಬೆ ಆಟೋ ನಿಲ್ದಾಣದಲ್ಲಿ ನಿಲ್ಲಿಸಿಕೊಂಡಿರುವಾಗೆ ಸದರಿಯವರಿಗೆ ಹಾಗು ಶಶಿಕುಮಾರ್‍ ಎಂಬವರ ನಡುವೆ ಆಟೋ ರಿಕ್ಷಾವನ್ನು ನಿಲ್ಲಿಸುವ ವಿಚಾರದಲ್ಲಿ ಜಗಳವಾಗಿ ಶಶಿಕುಮಾರ್ ರವರು ರಂಗಸ್ವಾಮಿಯ ಮೇಲೆ ಹಲ್ಲೆ ನಡೆಸಿದ್ದು, ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಣದ ವಿಚಾರದಲ್ಲಿ ವ್ಯಕ್ತಿಮೇಲೆ ಹಲ್ಲೆ:

ದಿನಾಂಕ 7-3-2020 ರಂದು ಕೂಡಿಗೆ ಗ್ರಾಮದ ಎ.ಎಸ್‍.ಕೃಷ್ಣ ಎಂಬವರು ಅದೇ ಗ್ರಾಮದ ಹರೀಶ ಎಂಬವರ ಮನೆಯ ಬಳಿ ಹೋಗಿ ತನಗೆ ಕೊಡಬೇಕಿದ್ದ ಹಣವನ್ನು ಹಿಂತಿರುಗಿಸುವಂತೆ ಹರೀಶನನ್ನು ಕೇಳಿದ ಸಂದರ್ಭದಲ್ಲಿ  ಹರೀಶರವರು ಅವಾಚ್ಯಶಬ್ದಗಳಿಂದ ಎ.ಎಸ್. ಕೃಷ್ಣರವರನ್ನು ನಿಂದಿಸಿದ್ದು ಅಲ್ಲದೆ ಹರೀಶ, ಮಹೇಶ ಹಾಗು ಅವರ ತಾಯಿ ಅನುಸೂಯ ರವರುಗಳು ಸೇರಿ ಎ.ಎಸ್‍. ಕೃಷ್ಣರವರ ಮೇಲೆ ಹಲ್ಲೆ ನಡೆಸಿ ನೋವನ್ನುಂಟುಮಾಡಿದ ಬಗ್ಗೆ ನೀಡಿದ ದೂರಿನಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.