Crime News

ವ್ಯಕ್ತಿ ಕಾಣೆ ಪ್ರಕರಣ

ಮೂರ್ನಾಡು ಬಳಿಯ ಹೊದ್ದೂರು ಗ್ರಾಮದ ಪಾಲೆಮಾಡು ಪೈಸಾರಿ ನಿವಾಸಿ ಶಿವಣ್ಣ ಎಂಬವರು ದಿನಾಂಕ 01/03/2020ರಂದು ಮಂಗಳೂರಿಗೆ ಕೆಲಸದ ನಿಮಿತ್ತ ಹೋಗುವುದಾಗಿ ಹೇಳಿ ಹೋದವರು ಇದುವರೆಗೂ ಮರಳಿ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 08/03/2020ರಂದು ಕೆದಮುಳ್ಳೂರು ನಿವಾಸಿ ರಾಮಣ್ಣ ಎಂಬವರು ಅವರ ಕಾರಿನಲ್ಲಿ ಯಶೋದ, ನಾರಾಯಣ, ಸುರೇಶ್‌ ಮತ್ತು ಗಾಯಿತ್ರಿ ಎಂಬವರೊಂದಿಗೆ ಪಿರಿಯಾಪಟ್ನದ ಮಳ್ಳೂರಿನಿಂದ ಮರಳಿ ಬರುತ್ತಿರುವಾಗ ಮಾಲ್ದಾರೆ ಬಳಿಯ ಕಲ್ಲಳ ಎಂಬಲ್ಲಿ ಎದುರಿನಿಂದ ಎಎಸ್‌-12-ಜಿ-1578ರ ಬೈಕನ್ನು ಅದರ ಚಾಲಕ ಉಣ್ಣಿಕೃಷ್ಣ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಮಣ್ಣರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಯಶೋದ, ಗಾಯಿತ್ರಿ ಮತ್ತು ರಾಮಣ್ಣರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 08/03/2020ರಂದು ಬಾಡಗ ಬಾಣಂಗಾಲಿ ನಿವಾಸಿ ಶಿಬು ಎಂಬವರು ಅವರ ಬೈಕಿನಲ್ಲಿ ನೆಲ್ಲಿ ಹುದಿಕೇರಿ ಕಡೆಯಿಂದ ಬರುತ್ತಿರುವಾಗ ಎದುರಿನಿಂದ ಒಂದು ರಿಕ್ಷಾವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಿಬುರವರ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಶಿಬುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ

ಶನಿವಾರಸಂತೆ ಬಳಿಯ ಹುಲುಸೆ ಗ್ರಾಮದ ರಿಕ್ರಿಯೇಷನ್ ಕ್ಲಬ್‌ ಒಂದರಲ್ಲಿ ಕ್ಲಬ್‌ನ ಕಾರ್ಯದರ್ಶಿ ಅಶೋಕ ಎಂಬವರು ಸರ್ಕಾರದ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ದೊರೆತ ಸುಳಿವಿನ ಮೇರೆಗೆ ಶನಿವಾರಸಂತೆ ಠಾಣೆಯ ಪಿಎಸ್‌ಐ ಕೃಷ್ಣ ನಾಯಕ್‌ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಅಕ್ರಮವಾಗಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದನ್ನು ಪತ್ತೆ ಹಚ್ಚಿ ಅಶೋಕ, ವಿಜಯ ಮತ್ತು ಧರ್ಮ ಎಂಬವರ ವಿರುದ್ದ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ, ಆರೋಪಿಗಳ ಬಂಧನ:

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೋಕಿನ ಕೂತಿ ಗ್ರಾಮದ ಕಡೆಯಿಂದ ಸೋಮವಾರಪೇಟೆ ಪಟ್ಟಣಕ್ಕೆ ರಾತ್ರಿ ಸಮಯದಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದ ಲಾರಿಯನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಪೊಲೀಸರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆ ದಿನಾಂಕ 07-03-2020ರಂದು ರಾತ್ರಿ 10;00 ಗಂಟೆಯ ಸಮಯದಲ್ಲಿ ಕೂತಿ ಗ್ರಾಮದ ಕಡೆಯಿಂದ ಸೋಮವಾರಪೇಟೆ ಪಟ್ಟಣಕ್ಕೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದ ಲಾರಿ ನೊಂದಣಿ ಸಂಖ್ಯೆ ಕೆಎ-12-ಬಿ-3497 ರನ್ನು ಪತ್ತೆಹಚ್ಚಿ ಲಾರಿಯಲ್ಲಿ ಮರಳು ಸಾಗಿಸುತ್ತಿದ್ದ ಸಿ.ಟಿ ದರ್ಶನ್ ಮತ್ತು ಕೆ.ಎಸ್ ಪ್ರೀತಮ್ ಎಂಬವರನ್ನು ಲಾರಿ ಸಮೇತ ವಶಕ್ಕೆ ಪಡೆದು ಆರೋಪಿಗಳಾದ ಸಿ.ಟಿ ದರ್ಶನ್ ಮತ್ತು ಕೆ.ಎಸ್ ಪ್ರೀತಮ್ ರವರ ವಿರುದ್ದ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಖದ್ದಮೆ  ದಾಖಲಿಸಲಾಗಿದೆ.      ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಸುಮನ್ ಡಿ.ಪಿ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಡಿಸಿಐಬಿಯ ಪ್ರಭಾರ ಇನ್ಸ್ ಪೆಕ್ಟರ್ ಹೆಚ್.ವಿ ಚಂದ್ರಶೇಖರ್ ಮತ್ತು ಸಿಬ್ಬಂದಿಯವರಾದ ಕೆ.ವೈ ಹಮೀದ್, ಕೆ.ಎಸ್ ಅನಿಲು ಕುಮಾರ್, ವಿ.ಜಿ ವೆಂಕಟೇಶ್, ಕೆ.ಆರ್ ವಸಂತ, ಎಂ.ಎನ್ ನಿರಂಜನ್, ಹಾಗೂ ಚಾಲಕ ಕೆ.ಎಸ್ ಶಶಿಕುಮಾರ್ ರವರುಗಳು ಕಾಯರ್ಚರಣೆ ನಡೆಸಿದ್ದು ಇವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆರವರು ಶ್ಲಾಘಿಸಿರುತ್ತಾರೆ.