Crime News

ರಸ್ತೆ ಅಪಘಾತ

ದಿನಾಂಕ 11/03/2020ರಂದು ಸುಂಟಿಕೊಪ್ಪದ ನಿವಾಸಿ ಶ್ಯಾಂ ಎಂಬವರು ಅವರೊಂದಿಗೆ ಸುಂಟಿಕೊಪ್ಪದ ಸುನಿಲ್ ಎಂಬವರನ್ನು ಕರೆದುಕೊಂಡು ಕೆಎ-12-ಯು-1317ರ ಸ್ಕೂಟರಿನಲ್ಲಿ ಹಾರಂಗಿಯಿಂದ ಗುಡ್ಡೆಹೊಸೂರು ಕಡೆಗೆ ಬರುತ್ತಿರುವಾಗ ಬೊಳ್ಳೂರು ಗ್ರಾಮದ ಬಳಿ ಸ್ಕೂಟರ್ ಚಾಲಿಸುತ್ತಿದ್ದ ಶ್ಯಾಂರವರು ಸ್ಕೂಟರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಸ್ಕೂಟರ್ ಶ್ಯಾಂರವರ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದು ಶ್ಯಾಂ ಹಾಗೂ ಸುನಿಲ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ಮಡಿಕೇರಿಯ ಜಿ.ಟಿ. ರಸ್ತೆಯ ಬಳಿ ಇರುವ ಲಯನ್ಸ್ ಕ್ಲಬ್‌ನ ಹಿಂಭಾಗದಲ್ಲಿ ವಾಸವಿರುವ ಜಸಿಂತ ಎಂಬವರ ತಾಯಿ ಜಾಲಿ ಥೋಮಸ್ ಎಂಬವರಿಗೆ ಶ್ರೀಮಂಗಲ ಬಳಿಯ ಪೂಕೊಳತೋಡು ಬಳಿ ಇರುವ ತೋಟದ ಮನೆಗೆ ದಿನಾಂಕ 12/03/2020 ರಂದು ಸಂಜೆ ವೇಳೆ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲನ್ನು ಮುರಿದು ತೆರೆದು ಒಳಗಿದ್ದ ಸುಮಾರು ರೂ. 50,000/- ಬೆಲೆ ಬಾಳುವ ಪೀಠೋಪಕರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 13/03/2020ರಂದು ಕೂಡ್ಲೂರು ಚೆಟ್ಟಳ್ಳಿ ನಿವಾಸಿ ಬಾಬು ಎಂಬವರು ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಬಾಬುರವರು ಮೈಸೂರಿನಲ್ಲಿ ಶುಂಠಿ ವ್ಯಾಪಾರ ಮಾಡುತ್ತಿದ್ದು ಕೇರಳದ ಮಾನಂದವಾಡಿಯ ಬಾಬು ಎಂಬವರು ಅವರಿಗೆ ಹಣ ನೀಡಬೇಕಿದ್ದು ಈ ಕಾರಣಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರರಕಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ಮಡಿಕೇರಿ ಬಳಿಯ ಬೆಟ್ಟಗೇರಿ ಗ್ರಾಮದ ಬಕ್ಕದ ನಿವಾಸಿ ಎಂ.ಎಂ.ಹಮೀದ್ ಎಂಬವರು ಬಕ್ಕ ಬೆಟ್ಟಗೇರಿ ನಿವಾಸಿ ಬೊಟ್ಟೋಳಂಡ ಪ್ರೇಮ ಪೊನ್ನಣ್ಣ ಎಂಬವರ ಲೈನು ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಸುಮಾರು ರೂ. 1,29,000/- ಮೌಲ್ಯದ ಕಾಫಿ ಹಾಗೂ ಕರಿ ಮೆಣಸನ್ನು ದಿನಾಂಕ 12/03/2020ರ ರಾತ್ರಿ ವೇಳೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ಕುಟ್ಟ ಬಳಿಯ ಬೆಟ್ಟತ್ತಾಡಿ ನಿವಾಸಿ ಸುನಿಲ್‌ ಕುಮಾರ್ ಎಂಬವರು ಫೇಸ್‌ ಬುಕ್ ಪುಟದಲ್ಲಿ ಲೋಕೇಶ ಎಂಬಾತನು ಒಂದು ಸ್ವಿಫ್ಟ್ ಕಾರು ಮಾರಾಟಕ್ಕಿರುವ ಬಗ್ಗೆ ತಿಳಿಸಿದ್ದು ಅದರಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಕಾರು ಖರೀದಿಯ ಬಗ್ಗೆ ಮಾತು ಕತೆ ನಡೆಸಿ ಮುಂಗಡವಾಗಿ ಲೋಕೇಶನು ಎರಡು ಪ್ರತ್ಯೇಕ ಬ್ಯಾಂಕ್ ಖಾತೆಗಳಿ ರೂ. 1,83,767/- ನ್ನು ಜಮಾ ಮಾಡಿಸಿಕೊಂಡು ನಂತರ ಕಾರನ್ನು ನೀಡದೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್‌ ವಿಶೇಷ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.