Crime News

ಕಳವು ಪ್ರಕರಣ

          ದಿನಾಂಕ: 12-03-2020 ರಂದು ರಾತ್ರಿ ವಿರಾಜಪೇಟೆ ತಾಲ್ಲೂಕು ಕುಟ್ಟಂದಿ ಗ್ರಾಮದ ನಿವಾಸಿ ಕೆ.ವಿ ಡೇವಿಡ್ ಎಂಬುವವರು ಬಾವಿಗೆ ನೀರೆತ್ತಲು ಅಳವಡಿಸಿದ್ದ 1 ಹೆಚ್ ಪಿ ಸಾಮರ್ಥ್ಯದ 8930 ರೂ ಬೆಲೆಬಾಳುವ ಒಂದು ವಿದ್ಯುತ್ ಮೋಟರನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಸಾಗಾಟ ಪ್ರಕರಣ

          ದಿನಾಂಕ: 14-03-2020 ರಂದು ಸೋಮವಾರಪೇಟೆ ಠಾಣೆ ಪಿಎಸ್ಐ ಶಿವಶಂಕರ್ ಮತ್ತು ಸಿಬ್ಬಂದಿಯವರು ಸೋಮವಾರಪೇಟೆ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿ ಗೌಡಳ್ಳಿ ಗ್ರಾಮದ ನಿವಾಸಿ ಶಶಿಕುಮಾರ್ ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕಾನೂನ ಕ್ರಮ ಕೈಗೊಂಡಿದ್ದಾರೆ.