Crime News

ಹಲ್ಲೆ ಪ್ರಕರಣ

          ದಿನಾಂಕ: 16-03-2020 ರಂದು ಸೋಮವಾರಪೇಟೆ ತಾಲ್ಲೂಕು ಚಿಕ್ಕತ್ತೂರು ಗ್ರಾಮದ ನಿವಾಸಿ ಪ್ರಭಾಕರ್ ಎಂಬುವವರು ಗಣೇಶ್ ಎಂಬುವವರ ಕಾರಿನ ಗಾಜನ್ನು ಒಡೆದುಹಾಕಿದ್ದು ಗಣೇಶ್, ಮಂಜುಳಾ, ಶ್ರೀಮತಿ ಶಶಿಕಲಾ ಎಂಬುವವರು ಈ ಬಗ್ಗೆ ಪೊಲೀಸ್ ಠಾಣೆಗೆ ಪುಕಾರಿ ನೀಡುವ ಸಲುವಾಗಿ ಹೊರಟು ನಿಂತಿರುವಾಗ ಅಲ್ಲಿಗೆ ಪ್ರಭಾಕರ್ ರವರು ಬಂದು ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ನೋವುಪಡಿಸಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕವಾಗಿ ಮರದಿಂದ ಬಿದ್ದು ವ್ಯಕ್ತಿ ಸಾವು

          ದಿನಾಂಕ: 16-03-2020 ರಂದು ಸೋಮವಾರಪೇಟೆ ತಾಲ್ಲೂಕು ಕುಮಾರಳ್ಳಿ ಬಾಚಳ್ಳಿ ಗ್ರಾಮದ ನಿವಾಸಿ ನಾಪಂಡ ಕಾರ್ಯಪ್ಪ ಎಂಬುವವರು ಕಾಫಿ ತೋಟದಲ್ಲಿ ಮೆಣಸಿನ ಬಳ್ಳಿಗೆ ನೆರಳಾಗಿದ್ದ ಮರವನ್ನು ಕಡಿಯಲು ಹೋಗಿದ್ದಾಗ ಆಕಸ್ಮಿಕವಾಗಿ ಮರದಿಂದ ಬಿದ್ದು ಗಾಯಗೊಂಡು ಮೃತಪಟ್ಟಿದ್ದು ಈ ಬಗ್ಗೆ ಮೃತರ ಸಹೋದರ ಚೆನ್ನಪ್ಪ ಎಂಬುವವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

          ದಿನಾಂಕ: 15-03-2020 ರಂದು ವಿರಾಜಪೇಟೆ ತಾಲ್ಲೂಕು ಬೆಸಗೂರು ಗ್ರಾಮದ ನಿವಾಸಿ ಗಿರೀಶ್ ಮತ್ತು ದರ್ಶನ್ ಎಂಬುವವರು ನೀರಿನ ಮೋಟರ್ ಆಫ್ ಮಾಡಲು ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿಗಳಾದ ಜಾಗೇಶ, ಅರುಣ,ಮೋಹನ್, ಜೀವನ್ ಮತ್ತು ವಸಂತ ಎಂಬುವವರು ದಾರಿ ತಡೆದು ಅವಾಚ್ಯ ಪದಗಳಿಂದ ಬೈದು ಕೈಗಳಿಂದ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಲಿಂಕ್ ಮಾಡುವ ನೆಪದಲ್ಲಿ ವಂಚನೆ

          ದಿನಾಂಕ: 16-03-2020 ರಂದು ವಿರಾಜಪೇಟೆ ತಾಲ್ಲೂಕು ಕುಟ್ಟ ಗ್ರಾಮದ ನಿವಾಸಿ ರಾಜ ಎಂಬುವವರ ಮೊಬೈಲ್ ಗೆ ವಿಜಯ ಬ್ಯಾಂಕ್ ಮೇನೇಜರ್ ಎಂದು ಹೇಳಿ ಕರೆ ಮಾಡಿ ಪಾನ್ ಕಾರ್ಡ್  ಗೆ ಆಧಾರ್ ನಂಬರ್ ಲಿಂಕ್ ಮಾಡುವುದಾಗಿ ಹೇಳಿ ಮೊಬೈಲ್ ಗೆ ಬಂದಿದ್ದ ಒ.ಟಿ.ಪಿ ಸಂಖ್ಯೆಯನ್ನು ಪಡೆದುಕೊಂಡು ಬ್ಯಾಂಕ್ ಖಾತೆಯಿಂದ 81,900 ರೂ ಹಣವನ್ನು ಯಾರೋ ಅಪರಿಚಿತರು ತೆಗೆದು ಮೋಸ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕರು ಬ್ಯಾಂಕ್ ಸಂಬಂದಿತ ಕೆಲಸಗಳನ್ನು ಖುದ್ದು ಬ್ಯಾಂಕ್ ಶಾಖೆಗೆ ಹೋಗಿ ವ್ಯವಹರಿಸುವುದು. ಮೊಬೈಲ್ ನಂಬರ್ ಗೆ ಕರೆ ಮಾಡುವ ಅಪರಿಚಿತ ವ್ಯಕ್ತಿಗಳೊಂದಿಗೆ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು, ಎಟಿಎಂ ಕಾರ್ಡ್ ವಿವರ, ಪಾನ್ ನಂಬರ್, ಆಧಾರ್ ನಂಬರ್ ಹಾಗೂ ಒಟಿಪಿ, ಎಟಿಎಂ ಸೀಕ್ರೆಟ್ ಕೋಡ್ ಇತ್ಯಾದಿ ಮಾಹಿತಿಗಳನ್ನು ಹಂಚಿಕೊಳ್ಳದಂತೆ ಸೂಚಿಸಲಾಗಿದೆ.