Crime News

ಹಲ್ಲೆ ಪ್ರಕರಣ

          ದಿನಾಂಕ: 17-03-2020 ರಂದು ಮಡಿಕೇರಿ ತಾಲ್ಲೂಕು ಎಂ.ಬಾಡಗ ಗ್ರಾಮದ ನಿವಾಸಿಗಳಾದ ಪೂಣಚ್ಚ, ಗಣಪತಿ, ಮತ್ತು ಶ್ರೀಮತಿ ಹೇಮಲತ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ಸತೀಶ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಮನೆಯ ಅಂಗಳಕ್ಕೆಅಕ್ರಮ ಪ್ರವೇಶ ಮಾಡಿ ಕೈಯಿಂದ ಹಾಗು ದೊಣ್ಣೆಯಿಂದ ಹಲ್ಲೆ ಮಾಡಿ ನೋವುಪಡಿಸಿ ಕೋವಿಯಿಂದ ಗುಂಡು ಹೊಡೆದು ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಗಣಪತಿ ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

          ದಿನಾಂಕ: 17-03-2020 ರಂದು ಮಡಿಕೇರಿ ತಾಲ್ಲೂಕು ಕಣ್ಣಬಲಮುರಿ ಗ್ರಾಮದ ನಿವಾಸಿ ಫೈರೋಜ್ ಎಂಬುವವರು ವೈಯಕ್ತಿಕ ಕಾರಣಗಳಿಂದ ಜೀವದಲ್ಲಿ ಜಿಗುಪ್ಸೆಗೊಂಡು ಅವರ ಮನೆಯಲ್ಲಿ ನೇಣು ಬಿಗದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೆಲಸ ಕೊಡಿಸುವ ನೆಪದಲ್ಲಿ ವಂಚನೆ

          ವಿರಾಜಪೇಟೆ ತಾಲ್ಲೂಕು ನಾಲ್ಕೇರಿ ಗ್ರಾಮದ ನಿವಾಸಿ ಡಿ.ವಿ ಸುದರ್ಶನ್ ಮತ್ತು ಅವರ ಸ್ನೇಹಿತ ಸಂದೇಶ್ ಎಂಬುವವರಿಗೆ ಉದಯಕುಮಾರ್ ಮತ್ತು ಮಾಚಿಮಾಡ ಸಂತೋಷ್ ಎಂಬುವವರು ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ದಿನಾಂಕಛ 07-09-2019 ರಂದು ಇಬ್ಬರಿಂದ ಒಟ್ಟು 1,47,620 ರೂ ಹಣವನ್ನು ಗೂಗಲ್ ಪೇ ಮತ್ತು ಪೋನ್ ಮುಖಾಂತರ ಪಾವತಿಸಿಕೊಂಡು ಕೆಲಸವನ್ನು ಕೊಡಿಸದ ಹಾಗು ಹಣವನ್ನು ಸಹಾ ವಾಪಾಸ್ಸು ನೀಡದೇ ವಂಚನೆ ಮಾಡಿರುವ ಬಗ್ಗೆ ದಿನಾಂಕ: 18-03-2020 ರಂದು ನೀಡಿದ ಪುಕಾರಿನ ಮೇರೆ ಕುಟ್ಟ ಠಾಣೆ  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

ರಸ್ತೆ ಅಪಘಾತ ಪ್ರಕರಣ

ದಿನಾಂಕ: 18-03-2020 ರಂದು ಸೋಮವಾರಪೇಟೆ ತಾಲ್ಲೂಕು ಮಾಲಂಬಿ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-45-7740 ರ ವಾಹನವನ್ನು ಅದರ ಚಾಲಕ ಅಭಿಲಾಷ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಒಂದು ಮಾರುತಿ ಓಮ್ನಿ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ಅಮೀರ್, ಖಾದರ್, ಸಂಜು, ನಿಜಾಮ್, ಮತ್ತು ರಘು ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಇಬ್ರಾಹಿಂ ಎಂಬುವವರು ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

          ದಿನಾಂಕ: 18-03-2020 ರಂದು ವಿರಾಜಪೇಟೆ ಗ್ರಾಮಾಂತರ ಠಾಣೆ ಪಿ.ಎಸ್.ಐ ವೀಣಾನಾಯಕ್ ಮತ್ತು ಸಿಬ್ಬಂದಿಯವರು ವಿರಾಜಪೇಟೆ ತಾಲ್ಲೂಕು ಬಿಟ್ಟಂಗಾಲ ಗ್ರಾಮದ ಆರ್.ಕೆ.ಎಫ್ ಕಲ್ಯಾಣ ಮಂಟಪದ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸ್ಪೀಟ್ ಜೂಜಾಟವಾಡುತ್ತಿದ್ದ ಬಿಟ್ಟಂಗಾಲ ಗ್ರಾಮದ ನಿವಾಸಿಗಳಾದ ವಿಜು, ಅಮೀದ್, ಕಂಡಗಾಲ ಗ್ರಾಮದ ನಿವಾಸಿ ಮಾದಯ್ಯ ಮತ್ತು ವಿ ಬಾಡಗ ಗ್ರಾಮದ ನಿವಾಸಿ ಮುತ್ತಣ್ಣ ಎಂಬುವವರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.