Crime News

ರಸ್ತೆ ಅಪಘಾತ, ಲಾರಿ ಚಾಲಕ ಸಾವು

          ದಿನಾಂಕ: 19-03-2020 ರಂದು ಟಿ.ಎನ್ 28-ಸಿ-4654 ರ ಲಾರಿಯಲ್ಲಿ ಚಾಲಕ ಮಣಿ ಮತ್ತು ಕ್ಲೀನರ್ ಸೋಕಪ್ಪನ್ ಎಂಬುವವರು ತಮಿಳನಾಡಿನ ಈರೋಡ್ ನಿಂದ ಸಿಮೆಂಟ್ ತುಂಬಿಸಿಕೊಂಡು ಮಂಗಳೂರು ಗೆ ಹೋಗುತ್ತಿದ್ದರು. ಮಡಿಕೇರಿ ತಾಲ್ಲೂಕು ಮದೆನಾಡು ಗ್ರಾಮದ ಬಳಿ ಹೆದ್ದಾರಿಯಲ್ಲಿ ಲಾರಿ ಚಾಲಕನು ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ತಿರುವು ರಸ್ತೆಯಲ್ಲಿ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಕ್ಲೀನರ್ ಗಾಯಗೊಂಡು ಚಾಲಕ ಮಣಿ ರವರು ಮೃತಪಟ್ಟಿರುತ್ತಾರೆ. ಈ ಬಗ್ಗೆ ಸೋಕಪ್ಪನ್ ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಬೈಕ್ ಡಿಕ್ಕಿ, ಸವಾರರಿಗೆ ಗಾಯ

          ದಿನಾಂಕ: 19-03-2020 ರಂದು ವಿರಾಜಪೇಟೆ ತಾಲ್ಲೂಕು ಅಮ್ಮತ್ತಿ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ನೋಂದಣಿಯಾಗದ ಟಿವಿಎಸ್ ವಿಕ್ಟರ್ ಬೈಕನ್ನು ಅದರ ಸವಾರ ಮಣಿಕಂಠ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುಗಡೆಯಿಂದ ಬರುತ್ತಿದ್ದ ಅಲ್ಟೋ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಮತ್ತು ಹಿಂಬದಿ ಸವಾರ ಸೂರ್ಯ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

          ದಿನಾಂಕ: 19-03-2020 ರಂದು ವಿರಾಜಪೇಟೆ ತಾಲ್ಲೂಕು ಕಾರ್ಮಾಡು ಗ್ರಾಮದ ನಿವಾಸಿ ಕಾರ್ಯಪ್ಪ ಎಂಬುವವರು ಹೊಟೇಲ್ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರ್ವಜನಿಕರು ಮದ್ಯಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದ ಪ್ರಕರಣವನ್ನು ಬಾಳೆಲೆ ಉಪಠಾಣೆ ಎಎಸ್ಐ ಹೆಚ್.ಟಿ ವೆಂಕಟೇಶ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಕಾರ್ಯಪ್ಪ ರವರ ವಿರುದ್ದ ನೀಡಿದ ವರದಿಯ ಮೇರೆ ಪೊನ್ನಂಪೇಟೆ ಠಾಣೆಯಲ್ಲಿ ದಾಖಲಿಸಿ ಪ್ರಕರಣ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

          ದಿನಾಂಕ: 19-03-2020 ರಂದು ವಿರಾಜಪೇಟ ತಾಲ್ಲೂಕು ಬಾಡಗರಕೇರಿ ಗ್ರಾಮದ ವಿಷ್ಣು ಎಸ್ಟೇಟ್ ನಿವಾಸಿ ಻ಅಸ್ಸಾಮ ಮೂಲದ ರಾಮಚಂದ್ರ ಕುರ್ಮಿ ಎಂಬುವವರು ಮದ್ಯ ಸೇವನೆ ಅಭ್ಯಾಸದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕಾಫಿ ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಮಗ ನೀಡಿದ ಪುಕಾರಿನ ಮೇರೆ ಶ್ರೀಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.