Crime News

ಅಂತರ ಜಿಲ್ಲಾ ಶ್ರೀಗಂಧ ಕಳ್ಳಸಾಗಣೆ,ಆರೋಪಿಗಳ ಬಂಧನ:

ಕೊಡಗು ಜಿಲ್ಲೆಯ ವಿರಾಜಪೇಟೆ ವ್ಯಾಪ್ತಿಯಲ್ಲಿ ಶ್ರೀಗಂಧಧ ಮರಗಳನ್ನು ಕಳ್ಳತನ ಮಾಡುತ್ತಿದ್ದ ತಂಡವನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣವೊಂದನ್ನು ಪತ್ತೆಹಚ್ಚಲು ಮಾಹಿತಿ ಕಲೆಹಾಕುತ್ತಿದ್ದಾಗ ಕೊಡಗು ಜಿಲ್ಲೆ ಹಾಗೂ ನೆರೆಯ ಹಾಸನ ಜಿಲ್ಲೆಯ ವ್ಯಾಪ್ತಿಯಿಂದಲೂ ಸಹ ಗೌಪ್ಯವಾಗಿ ಶ್ರೀಗಂಧಧ ಮರಗಳನ್ನು ಕಳ್ಳತನದಿಂದ ಕತ್ತರಿಸಿ ಶ್ರೀಗಂಧದ ತುಂಡುಗಳನ್ನು ಸಂಗ್ರಹಿಸಿ ಕೊಂಡಂಗೇರಿ ಹಾಗೂ ಮಡಿಕೇರಿಯ ಸ್ಥಳೀಯ ಮಧ್ಯವರ್ತಿ ಚೋರರು ಖರೀದಿಸುವ ಮುಖಾಂತರ ಮೈಸೂರು ಮೂಲದ ವ್ಯಕ್ತಿಗಳು ಮಡಿಕೇರಿ ಹಾಗೂ ಕೊಂಡಗೇರಿಗೆ ಬಂದು ಖರೀದಿಸುವ ವ್ಯವಹಾರ ಮಾಡುತ್ತಿದ್ದ ಜಾಲದ ಬಗ್ಗೆ ಜಾಡುಹಿಡಿದ ಡಿಸಿಐಬಿ ಪೊಲೀಸರು ಒಟ್ಟು 7 ಜನ  ಆರೋಪಿಗಳನ್ನು ವಶಕ್ಕೆ ಪಡೆದಿರುತ್ತಾರೆ. ಬಂಧಿತ 7 ಜನ ಆರೋಪಿಗಳು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟೊಳ್ಳಿ ಹಾಗೂ ಚೆಂಬೆಬೆಳ್ಳೂರು ಗ್ರಾಮದಿಂದ 2 ಶ್ರೀಗಂಧಧ ಮರಗಳನ್ನು ಕಳ್ಳತನ ಮಾಡಿದ 2 ಪ್ರಕರಣದಲ್ಲಿ ಮತ್ತು ಹಾಸನ ಜಿಲ್ಲೆ ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣವೊಂದರಲ್ಲಿ ಬಾಗಿಯಾಗಿರುವುದು ಪೊಲೀಸ್ ತನಿಖೆಯ ಸಮಯದಲ್ಲಿ ಧೃಡಪಟ್ಟಿರುತ್ತದೆ.

ದಸ್ತಗಿರಿ ಮಾಡಿದ ಆರೋಪಿಗಳ ವಿವರ

(1). ಅಬ್ದುಲ್ ಜಾಪರ್ ,ಎಂ.ಎ.ತಂದೆ ಎಂ.ಹೆಚ್ ಅಬೂಬಕರ್ ಪ್ರಾಯ 34ವರ್ಷ ಕೂಲಿ ಕೆಲಸ, ವಾಸ ಕೊಂಡಂಗೇರಿ ಪೊಳಗೇರಿ ಬಾಣೆ ಹಾಲುಗುಂದ ಗ್ರಾಮ .  (2). ಎ.ಎಂ ಅಬ್ದುಲ್ಲಾ @ ಚಿಲ್ಲು ತಂದೆ ಮೊಯಿದು ಕುಂನ್ನಿ ಪ್ರಾಯ 39ವರ್ಷ ವ್ಯಾಪಾರ ವೃತ್ತಿ, ವಾಸ ಎಲಿಯಂಗಾಡ್ ಕೊಂಡಂಗೇರಿ  ವಿರಾಜಪೇಟೆ ತಾಲ್ಲೂಕು . (3). ವಿ.ಬಿ ಮನ್ಮಥ ತಂದೆ ಲೇಟ್ ಬೋರಯ್ಯ ಪ್ರಾಯ 30ವರ್ಷ ಕೂಲಿಕೆಲಸ ವಾಸ ಮತ್ತೂರು ಗ್ರಾಮ, ಪೊನ್ನಂಪೇಟೆ ಅಂಚೆ ವಿರಾಜಪೇಟೆ ತಾಲ್ಲೂಕು (4). ಸಿ.ಎಸ್ ಭೀಮಯ್ಯ @ ಶರಣು ತಂದೆ ಲೇಟ್ ಸುರೇಶ್ ಪ್ರಾಯ 31ವರ್ಷ ಪ್ಲಾಂಟರ್, ವಾಸ ಬಾಳಾಜಿ ಗೋಣಿಕೊಪ್ಪ ವಿರಾಜಪೇಟೆ ತಾಲೋಕು (5). ಎರ್ಮು ಎ.ಎಂ ತಂದೆ ಲೇಟ್ ಮೊಹಮ್ಮದ್ ಪ್ರಾಯ 46 ವರ್ಷ ಕೂಲಿ ಕೆಲಸ ವಾಸ, ಹೊದ್ದೂರು ಗ್ರಾಮ ವಾಟೆಕಾಡು ಮೂರ್ನಾಡು, ಮಡಿಕೇರಿ ತಾಲೋಕು. (6). ಪ್ರೀತು ಪಿ.ಕೆ ತಂದೆ ಲೇಟ್ ಕೆಂಚಪ್ಪ ಪ್ರಾಯ 42ವರ್ಷ ವ್ಯಾಪಾರ ವೃತ್ತಿ, ವಾಸ ಹೊಸಬಡಾವಣೆ ಮಡಿಕೇರಿ.(7). ಸೈಯದ್ ಗೌಸ್ ಮೊಹದ್ದೀನ್ @ ಮಸೂದ್ ತಂದೆ ಲೇಟ್ ಸೈಯದ್ ಫಕ್ರುದ್ದೀನ್ , ಪ್ರಾಯ 49 ವರ್ಷ ಕೂಲಿಕೆಲಸ  ವಾಸ ಡೋರ್ ನಂ 19/1 ನಾಯ್ಡು ನಗರ ಕೆಸರೆ  ಮೈಸೂರು.

    ಬಂಧಿತ ಆರೋಫಿಗಳಿಂದ ಅಂದಾಜು 50ಸಾವಿರ ಮೌಲ್ಯದ 6 ಕೆ.ಜಿ ಶ್ರೀಗಂಧಧ ತುಂಡುಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಾಹನ ಸೇರಿದಂತೆ ಇತರೇ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ.

     ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಸುಮನ್ ಡಿ.ಪಿ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಡಿಸಿಐಬಿಯ ಪ್ರಭಾರ ಇನ್ಸ್ ಪೆಕ್ಟರ್ ಹೆಚ್.ವಿ ಚಂದ್ರಶೇಖರ್ ಸಿಬ್ಬಂದಿಯವರಾದ ಕೆ.ವೈ ಹಮೀದ್, ಕೆ.ಎಸ್ ಅನಿಲ್ ಕುಮಾರ್, ವಿ.ಜಿ ವೆಂಕಟೇಶ್  ಬಿ.ಎಲ್ ಯೊಗೇಶ್ ಕುಮಾರ್ ಕೆ.ಆರ್ ವಸಂತ, ಎಂ.ಎನ್ ನಿರಂಜನ್, ಬಿ.ಜೆ ಶರತ್ ರೈ, ಯು.ಎ ಮಹೇಶ್ ಹಾಗೂ ಚಾಲಕ ಕೆ.ಎಸ್ ಶಶಿಕುಮಾರ್ ಹಾಗೂ ಸಿಡಿಆರ್ ಸೆಲ್ ನ ರಾಜೇಶ್ ಹಾಗೂ ಗಿರೀಶ್ ರವರು ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದು ಇವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ವಂಚನೆ ಪ್ರಕರಣ

          ಮಡಿಕೇರಿ ನಗರದ ಜಯನಗರ ಬಡಾವಣೆ ನಿವಾಸಿ ಉಣ್ಣಿಕೃಷ್ಣ ಎಂಬುವವರು ಸ್ವರಾಜ್ ಮಜ್ಡಾ ಕಂಪನಿಯ ಡೀಲರ್ ಆಗಿ ಕುಶಾಲನಗರದ ಕೂಡ್ಲೂರು ಕೈಗಾರಿಕ ಪ್ರದೇಶದಲ್ಲಿ ಹರಿಹರ ಮೋಟಾರ್ಸ್ ಎಂಬ ಶೋರೂಂ ಹಾಗೂ ಹರಿಹರ ಹಾಲೋ ಬ್ರಿಕ್ಸ್ ಘಟಕವನ್ನು ಹೊಂದಿದ್ದರು. ಇವುಗಳನ್ನು ಹಾಸನ ನಗರದ  ನಿವಾಸಿಗಳಾದ ಮಧುಕುಮಾರ್ ಮತ್ತು ದಿವಾಕರ ಎಂಬುವವರಿಗೆ 95 ಲಕ್ಷ ರೂಗಳಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡು 55 ಲಕ್ಷ ಹಣವನ್ನು ಪಡೆದುಕೊಂಡಿದ್ದರು. ನಂತರ ಮಧುಕುಮಾರ್ ಮತ್ತು ದಿವಾಕರ ರವರು ಉಣ್ಣಿಕೃಷ್ಣ ರವರ ಒಪ್ಪಿಗೆ ಇಲ್ಲದೇ ಹರಿಹರ ಮೋಟಾರ್ಸ್ ಹೆಸರಿನಲ್ಲಿ ಅನಧಿಕೃತವಾಗಿ ಬ್ಯಾಂಕ್ ಖಾತೆಯನ್ನು ತೆರೆದು ಖಾತೆಯಲ್ಲಿ ಅನಧಿಕೃತ ವ್ಯವಹಾರಗಳನ್ನು ಮಾಡಿ ವಂಚನೆ ಮಾಡಿದ್ದು ಈ ಬಗ್ಗೆ ದಿನಾಂಕ: 20-03-2020 ರಂದು ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿರ ತನಿಖೆ ಕೈಗೊಂಡಿದ್ದಾರೆ.