Crime News

ನಿಷೇಧ ಉಲ್ಲಂಘನೆ ಪ್ರಕರಣ:

ಮಡಿಕೇರಿ ನಗರ ಠಾಣಾ ಸರಹದ್ದಿನ ಕನಕದಾಸ ರಸ್ತೆಯಲ್ಲಿರುವ  ಮಕ್ಕಾ ಮಸೀದಿಯಲ್ಲಿ  ಸ್ಥಳೀಯ ಅಬ್ದುಲ್  ಹಕೀಂ ಹಾಗು ಇತರರು  ಜಿಲ್ಲೆಯಲ್ಲಿ ಕೊರೋನಾ ವೈರಸ್‍ ತಡೆಯ ಬಗ್ಗೆ ಜಿಲ್ಲಾಡಳಿತ ಹೇರಿದ ನಿರ್ಬಂಧನೆಯನ್ನು ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆಗೆ ಜನರು ಸೇರಿದ್ದು, ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಮರದಿಂದ ಬಿದ್ದು ವ್ಯಕ್ತಿ ದುರ್ಮರಣ

ನಾಪೋಕ್ಲು ಪೊಲೀಸ್ ಠಾಣೆ ಸರಹದ್ದಿನ ಚೋನಕೆರೆ ಯಲ್ಲಿರುವ ಸಿ.ಎನ್. ದೇವಯ್ಯನವರ ಲೈನುಮನೆಯಲ್ಲಿ ವಾಸವಾಗಿರುವ ಕುರುಬರ ಜನ ಎಂಬವರ ಗಂಡ ರಾಜು ಎಂಬವರು ದಿನಾಂಕ 27-3-2020ರಂದು ಹಲಸಿನ ಕಾಯಿಯನ್ನು ತೆಗೆಯಲು ಮರವೇರಿದ್ದು, ಆಕಸ್ಮಿಕವಾಗಿ ಮರದಿಂದ ಬಿದ್ದು ಸಾವನಪ್ಪಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿಗೆ ಹಲ್ಲೆ

ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದಲ್ಲಿ ತಮ್ಮಯ್ಯ ಎಂಬವರು ದಿನಾಂಕ 27-3-2020 ರಂದು ಡೈರಿಗೆ ಹಾಲು ಹಾಕಲು ಹೋಗುತ್ತಿದ್ದಾಗ ಆಫೀಸ್‍ ಎಂಬವರು ತಮ್ಮಯ್ಯರವರನ್ನು ದಾರಿಯಲ್ಲಿ ತಡೆದು ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಡುಕೋಣ ದಾಳಿ ವ್ಯಕ್ತಿಯ ಸಾವು

ಶ್ರೀಮಂಗಲ ಠಾಣಾ ಸರಹದ್ದಿನ ಬಲ್ಯಮಂಡೂರು ಗ್ರಾಮದ ದೇಯಂಡ ದೇವಯ್ಯ ಎಂಬವರ ಲೈನುಮನೆಯಲ್ಲಿ ವಾಸವಾಗಿದ್ದ ರಾಜು ಎಂಬ ವ್ಯಕ್ತಿ ದಿನಾಂಕ 27-3-2020 ರಂದು  ಕಾಫಿತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಾಡುಕೋಣವೊಂದು ದಾಳಿ ಮಾಡಿದ ಪರಿಣಾಮ ಸದರಿ ರಾಜು ಗಂಭೀರವಾಗಿ ಗಾಯಗೊಂಡು ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.