Crime News

ಹಣದಾಸೆಗೆ ಮನೆ ಕೆಲಸ ಮಾಡುತ್ತಿದ್ದ ಮಹಿಳೆಯಿಂದ ವೃದ್ದೆಯ ಕೊಲೆ

                ಮನೆಕೆಲಸ ಮಾಡಿಕೊಂಡಿದ್ದ ಮಹಿಳೆಯ ಹಣದ ಆಸೆಯಿಂದ ವೃದ್ದೆಯೊಬ್ಬರು ಕೊಲೆಯಾಗಿರುವ ಪ್ರಕರಣ ವರದಿಯಾಗಿದೆ. ಸೋಮವಾರಪೇಟೆ ತಾಲ್ಲೂಕು ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ಶ್ರೀಮತಿ ಕಾಮವ್ವ ಎಂಬುವವರು ಮನೆಯಲ್ಲಿ ಒಬ್ಬರೆ ವಾಸವಿದ್ದು ಅವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಪ್ರಿಯಾ ಎಂಬುವವರು ಪ್ರತಿದಿನ ಮನೆಗೆ ಹೋಗಿ ಮನೆಕೆಲಸ ಹಾಗೂ ಅಡುಗೆ ಕೆಲಸ ಮಾಡುತ್ತಿದ್ದರು. ದಿನಾಂಕ: 22-03-2020 ರಂದು ಮನೆ ಕೆಲಸಕ್ಕೆ ಹೋಗಿದ್ದ ಪ್ರಿಯಾ ಕಾಮವ್ವರವರು ಮನೆಯಲ್ಲಿರುವಾಗ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ತೆಗೆದುಕೊಂಡು ಕಾಮವ್ವರವರನ್ನು ಕೊಲೆ ಮಾಡಿ ಹೋಗಿದ್ದು ಈ ಬಗ್ಗೆ ಮೃತರ ಮಗ ದಿನಾಂಕ: 28-03-2020 ರಂದು ನೀಡಿದ ಪುಕಾರಿನ ಮೇರೆ  ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.