Crime News

ಹಲ್ಲೆ ಪ್ರಕರಣ

ದಿನಾಂಕ 29/03/2020 ರಂದು ನಾಪೋಕ್ಲು ಬಳಿಯ ಕಲ್ಲುಮೊಟ್ಟೆ ನಿವಾಸಿ ಹ್ಯಾರಿಸ್ ಎಂಬವರು ಅವರ ಕಾರಿನಲ್ಲಿ ನಾಪೋಕ್ಲಿನ ಆಸ್ಪತ್ರೆಗೆ ಹೋಗುತ್ತಿರುವಾಗ ಚೆರಿಯಪರಂಬು ಮಸೀದಿ ಮುಂದಿನ ರಸ್ತೆಯಲ್ಲಿ ಚೆರಿಯಪರಂಬು ನಿವಾಸಿಗಳಾದ ಆಸಿಫ್, ಆಶಿಕ್ ಮತ್ತು ಸಲಾಂ ಎಂಬವರು ಹ್ಯಾರಿಸ್‌ರವರ ದಾರಿಗೆ ಅಡ್ಡಲಾಗಿ ಸ್ಕೂಟರನ್ನು ನಿಲ್ಲಿಸಿ ತಡೆದು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕೈಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.