Crime News

ಅಕ್ರಮ ಮದ್ಯ ಮಾರಾಟ

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ  ಹಳೆಗೋಟೆ ಗ್ರಾಮದಲ್ಲಿ  ದಿನಾಂಕ 30-3-2020 ರಂದು ಶಿವಕುಮಾರ್‍ ಹಾಗು ನಾಗೇಶ್‍ ಎಂಬವರು ಅಕ್ರಮವಾಗಿ ಮದ್ಯವನ್ನು ಮಾರಾಟಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನಂದೀಶ್ ಕುಮಾರ್‍ ಹಾಗು ಸಿಬ್ಬಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿ ಸಾವು ಪ್ರಕರಣ ದಾಖಲು

ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಹುಂಜಿಗನ ಹಳ್ಳಿಯಲ್ಲಿ ವಾಸವಾಗಿರುವ ಶ್ರೀಮತಿ ಪೊನ್ನಮ್ಮ ಎಂಬವರ ಪುತ್ರ ರೋಷನ್‍ ಸತ್ಯಸಾಯಿ ಎಂಬವರು ದಿನಾಂಕ 20-3-2020 ರಂದು ಮಂಗಳೂರಿನಿಂದ ಮನೆಗೆ ಬಂದು  2 ದಿನಗಳ ಬಳಿಕ ಅಸ್ವಸ್ಥಗೊಂಡಿದ್ದು ದಿನಾಂಕ 30-3-2020 ರಂದು ತನ್ನ ಮನೆಯ ಬಾತ್‍ ರೂಮ್‍ ನಲ್ಲಿ ಬಿದ್ದು ಸಾವನಪ್ಪಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಾವಿಗೆ ಬಿದ್ದು ವ್ಯಕ್ತಿ ಸಾವು

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಜೋಡುಪಾಲ ಮದೆ ಗ್ರಾಮದಲ್ಲಿ ವಾಸವಾಗಿರುವ ಬಿ.ಎಸ್. ಸತೀಶ ಎಂಬವರ ತಂದೆ ಶಿವಪ್ಪ ಎಂಬವರು ದಿನಾಂಕ 30-3-2020 ರಂದು  ತೋಟದಲ್ಲಿ ಅಲ್ಯುಮಿನಿಯಂ ಏಣಿ ಹತ್ತಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಹತ್ತಿರದಲ್ಲೇ ಇದ್ದ ಬಾವಿಯೊಂದಕ್ಕೆ ಬಿದ್ದು ಸಾವನಪ್ಪಿದ್ದು, ಬಿ.ಎಸ್. ಸತೀಶ್‍ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.