Crime News

ನಿಷೇಧಾಜ್ಞೆ ಉಲ್ಲಂಘನೆ ಪ್ರಕರಣ

ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ವಿಧಿಸಿದ್ದ ವಿಷೇಧಾಜ್ಞೆಯನ್ನು ಉಲ್ಲಂಘಿಸಿ ಮಡಿಕೇರಿ ನಗರದ ಸಂಪಿಗೆ ಕಟ್ಟೆ ಬಳಿ ಕೆಎ-02-ಎಡಿ-2583ರ ಲಾರಿಯಲ್ಲಿ ಅಕ್ರಮವಾಗಿ ಕಾರ್ಮಿಕರನ್ನು ಬಳ್ಳಾರಿಗೆ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ಮಡಿಕೇರಿ ತಾಲೂಕು ದಂಡಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಸಾವು

ಕುಟ್ಟ ಬಳಿಯ ನಾಲ್ಕೇರಿ ಗ್ರಾಮದ ಗರ್ಭಿಣಿ ಮಹಿಳೆ ಪಂಜರಿ ಎರವರ ನಿಂಗಮ್ಮ ಎಂಬವರು ದಿನಾಂಕ 29/03/2020ರಂದು ಕಡಿಮೆ ರಕ್ತದೊತ್ತಡ ಕಾರಣದಿಂದ ಮಡಿಕೇರಿಯ ಜಿಲ್ಲಾ ಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 01/04/2020ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.